ನಟ ಧರ್ಮ ಕೀರ್ತಿರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಎಂ. ಆರ್. ಶ್ರೀನಿವಾಸ್ ಆಕ್ಷನ್ ಕಟ್ ಹೇಳಿರುವ ‘ದಾಸರಹಳ್ಳಿ’ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.
ದಾಸರಹಳ್ಳಿ ಸಿನಿಮಾ ಕುಡಿತದ ವಿರುದ್ಧ ಹೋರಾಡುವ ಕಥೆಯನ್ನು ಹೊಂದಿದೆ. ಈಗಾಗಲೇ ಸಿನಿಮಾ ಸೆನ್ಸಾರ್ ಕೂಡ ಮುಗಿಸಿಕೊಂಡಿದ್ದು, ಪ್ರಚಾರ ಕಾರ್ಯಕ್ಕೆ ಸಜ್ಜಾಗಿದೆ. ಚಿತ್ರವು 2025 ಜನವರಿ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಎಂ.ಆರ್. ಶ್ರೀನಿವಾಸ್ ‘ದಾಸರಹಳ್ಳಿ’ ಚಿತ್ರವನ್ನು ನಿರ್ದೇಶಿಸಿದ್ದು, ವೈಷ್ಣವಿ ವಸುಂಧರೆ ಕ್ರಿಯೇಷನ್ಸ್ ಬ್ಯಾನರ್ ನಡಿ ಪಿ. ಉಮೇಶ ನಿರ್ಮಿಸಿರುವ 'ದಾಸರಹಳ್ಳಿ' ಸಿನಿಮಾ ಬೆಂಗಳೂರು ಸುತ್ತಮುತ್ತ ಮತ್ತು ಶಿವಮೊಗ್ಗದ ಸುಂದರ ತಾಣದಲ್ಲಿ ಚಿತ್ರೀಕರಣಗೊಂಡಿದೆ.
ಧರ್ಮ ಕೀರ್ತಿರಾಜ್, ನೇಹಾ, ಉಮೇಶ್ ರಾಜ್, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ , ಎಂ ಎಸ್ ಉಮೇಶ್, ಹೊನ್ನವಳ್ಳಿ ಕೃಷ್ಣ, ಬಿರಾದರ್, ಬೆಂಗಳೂರು ನಾಗೇಶ್, ಶಿವಕುಮಾರ್ ಆರಾಧ್ಯ, ಮಿಮಿಕ್ರಿ ಗೋಪಿ, ಮಜಾ ಟಾಕೀಸ್’ ಪವನ್, ಪದ್ಮಾವಸಂತಿ, ರೇಖಾ ದಾಸ್, ಸಿತಾರ, ಕವನ್, ಮೈಸೂರು ಮಂಜುಳಾ, ಪ್ರೇಮಾ ಗೌಡ, ವಿಕ್ಟರಿ ವಾಸು, ಕಿಲ್ಲರ್ ವೆಂಕಟೇಶ್, ಅರಸೀಕರೆ ರಾಜು ಸೇರಿದಂತೆ 150 ಹೆಚ್ಚು ಅನುಭವಿ ನಟಸು ನಟಿಸಿದ್ದಾರೆ. ಚಿತ್ರಕ್ಕೆ ಎಂ. ಎಸ್. ತ್ಯಾಗರಾಜ ಸಂಗೀತ, ಸಿ. ನಾರಾಯಣ್ ಸಂಗೀತ ನೀಡಿದ್ದಾರೆ.
Advertisement