ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಸಹಯೋಗದಲ್ಲಿ ಆರಂಭವಾದ 'ಮಾರ್ಟಿನ್' ಕಳೆದ ಮೂರು ವರ್ಷಗಳಲ್ಲಿ ಹಲವಾರು ಅಡ್ಡಿ- ಆತಂಕಗಳನ್ನು ಎದುರಿಸಿದೆ. ಈ ಅವಧಿಯಲ್ಲಿ ಏನೇ ಸಂಕಷ್ಟ ಎದುರಾದರೂ ನಿರ್ದೇಶಕ ಎಪಿ ಅರ್ಜುನ್ ಮಾತ್ರ ದೃಢ ವಿಶ್ವಾಸದಿಂದ ಇದ್ದಾರೆ. ಮಾರ್ಟಿನ್ ಯಶಸ್ಸಿಗೆ ಯಾವುದು ಅಡ್ಡಿಯಾಗಲ್ಲ. ನನ್ನ ಮೇಲೆ ಯಾವ ನೆರಳು ಬೀಳಲಿ, ಸಿನಿಮಾ ಮತ್ತು ನಿರ್ದೇಶಕನಾಗಿ ನನ್ನ ದೃಷ್ಟಿ ಎಂದಿಗೂ ಕುಂದುವುದಿಲ್ಲ ಎಂದು ಹೇಳುತ್ತಾರೆ.
ಅಕ್ಟೋಬರ್ 11 ರಂದು ವಿಶ್ವದಾದ್ಯಂತ 3,000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿಅನೇಕ ಭಾಷೆಗಳಲ್ಲಿ ಬಿಡುಗಡೆಗೆ ಮಾರ್ಟಿನ್ ಸಜ್ಜಾಗಿದೆ. ಇದರೊಂದಿಗೆ ಹಿನ್ನಡೆಗಳಿಂದ ಹಿಂಜರಿಯುವುದಿಲ್ಲ ಮತ್ತು ನಿರ್ದೇಶಕರಾಗಿ ತಮ್ಮ ಬ್ರ್ಯಾಂಡ್ ಅನ್ನು ಎತ್ತಿ ಹಿಡಿಯುವ ಹೋರಾಟದಲ್ಲಿ ದೃಢವಾಗಿ ಉಳಿಯುವುದಾಗಿ ಅರ್ಜುನ್ ಹೇಳಿದ್ದಾರೆ.
ಕೆಲವು ಅಡೆತಡೆಗಳ ಹೊರತಾಗಿಯೂ, ಉತ್ತಮ ಸಿನಿಮಾ ಮಾಡಿದ್ದೇನೆ. ಪರದೆ ಮೇಲೆ ನನ್ನ ಬದ್ಧತೆಯನ್ನು ವೀಕ್ಷಕರು ನೋಡಲಿದ್ದಾರೆ. ಇದು ನನ್ನ 6 ನೇ ಚಿತ್ರ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಎಪಿ ಅರ್ಜುನ್-ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನದ ಸಾರವನ್ನು ಪ್ರದರ್ಶಿಸುತ್ತದೆ. ನನ್ನ ಬ್ರ್ಯಾಂಡ್ ಹೆಸರೇ ನನ್ನ ಗುರುತು ಎನ್ನುತ್ತಾರೆ.
ಚಿತ್ರ ನಿರ್ಮಾಣದಲ್ಲಿ ಸೃಜನಾತ್ಮಕ ವ್ಯತ್ಯಾಸಗಳು ಸಾಮಾನ್ಯವಲ್ಲ. ಪ್ರತಿ ಚಿತ್ರವು ಸವಾಲುಗಳಿಂದ ಕೂಡಿರುತ್ತದೆ. ಮಾರ್ಟಿನ್ ವಿಶೇಷವಾಗಿ ದುರದೃಷ್ಟಕರ ಸಮಸ್ಯೆಗಳನ್ನು ಎದುರಿಸಿದ್ದು, ಅದು ಸಾರ್ವಜನಿಕವಾಗಿಯೂ ಬಹಿರಂಗವಾಗಿದೆ. ನನ್ನ ಕ್ರೇಡಿಟ್ ಗಾಗಿ ಹೋರಾಡಿದ್ದೇನೆ. ಪ್ರಚಾರ ಕಾರ್ಯಕ್ರಮಗಳಲ್ಲಿ ನನ್ನನ್ನು ಸೇರಿಸಿಕೊಳ್ಳಬೇಕೆಂಬ ನ್ಯಾಯಾಲಯದ ತೀರ್ಪು ನ್ಯಾಯದ ಕಡೆಗೆ ಒಂದು ಹೆಜ್ಜೆಯಾಗಿದೆ. ಗುರುತು ಮತ್ತು ಅಸ್ತಿತ್ವ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳಾಗಿವೆ. ನಾನು ನನ್ನ ಬ್ರಾಂಡ್ ನ್ನು ಮಾತ್ರ ಸಮರ್ಥಿಸಿಕೊಳ್ಳುತ್ತೇನೆ ಎಂದರು.
ಮಾರ್ಟಿನ್ 2021 ರಲ್ಲಿ ಪ್ರಾರಂಭವಾಯಿತು, ಆದರೆ ಮತ್ತೊಂದು ಚಿತ್ರಕ್ಕೆ ಧ್ರುವ ಅವರ ಬದ್ಧತೆ ಸೇರಿದಂತೆ ವಿವಿಧ ಅಂಶಗಳಿಂದ ಸಾಕಷ್ಟು ಸಮಯ ಹಿಡಿಯಿತು. ನನ್ನ ಇನ್ನೊಂದು ಚಿತ್ರವಾದ 'ಅದ್ದೂರಿ ಲವರ್'
ಹದಿನೈದು ದಿನಗಳ ಶೂಟಿಂಗ್ ಮುಗಿಸಿ, 45 ಲಕ್ಷ ರೂ. ಖರ್ಚು ಮಾಡಿದ ನಂತರ ಅದನ್ನು ಮುಂದಕ್ಕೆ ಹಾಕಿ ಮಾರ್ಟಿನ್ ಕಡೆಗೆ ಒತ್ತು ನೀಡಿದೆ. ಪ್ರಾಮಾಣಿಕವಾಗಿ ಹೇಳುತ್ತೇನೆ. ಸಿನಿಮಾ ಒಬ್ಬ ವ್ಯಕ್ತಿಯ ಚಿತ್ರವಾಗಲು ಸಾಧ್ಯವಿಲ್ಲ; ಇದು ಸಾಮೂಹಿಕ ಪ್ರಯತ್ನ. ಈ ಸೃಜನಶೀಲ ಪ್ರಕ್ರಿಯೆಯಲ್ಲಿ ನಾವು ಪ್ರತಿ ಪಾತ್ರವನ್ನು ಗೌರವಿಸಬೇಕು ಎಂದು ಹೇಳಿದರು.

ಮಾರ್ಟಿನ್ ನಿರ್ಮಾಣದ ಸವಾಲುಗಳನ್ನು ಅರ್ಜುನ್ ಒಪ್ಪಿಕೊಳ್ಳುತ್ತಾರೆ. ಪ್ರಯಾಣ ಸುದೀರ್ಘವಾಗಿದೆ; ಒಂದು ವರ್ಷ ತೆಗೆದುಕೊಳ್ಳಬೇಕಾದದ್ದು ಮೂರಾಯಿತು. ಧ್ರುವ ಸರ್ಜಾ ಅವರು ಕೆಡಿ ಮತ್ತು ಮಾರ್ಟಿನ್ ಎರಡು ಸಿನಿಮಾಗಳ ನಡುವೆ ತಮ್ಮ ಸಮಯವನ್ನು ನೀಡುವಾಗ ತೀವ್ರವಾದ ದೈಹಿಕ ರೂಪಾಂತರಗಳಿಗೆ ಒಳಗಾಗುವ ಸಂಕೀರ್ಣತೆಯನ್ನು ಎದುರಿಸಿದರು. ಮಾರ್ಟಿನ್ ಹಾಗೂ ಆಕ್ಷನ್ ಪ್ರಿನ್ಸ್' ಎಂಬ ಧ್ರುವ ಸರ್ಜಾ ಅವರ ಖ್ಯಾತಿ ಹೈಲೈಟ್ ಮಾಡುವ ಸಾಮರ್ಥ್ಯ ಈ ಚಿತ್ರಕ್ಕಿದೆ.
ಕರ್ನಾಟಕದಲ್ಲಿ ನನ್ನ ಕೆಲಸ ತಿಳಿದಿದ್ದರೂ, ಪ್ಯಾನ್-ಇಂಡಿಯನ್ ಚಲನಚಿತ್ರಗಳಿಗೆ ಪ್ರೇಕ್ಷಕರು ತಾಜಾ ಅನುಭವಗಳಿಗಾಗಿ ಉತ್ಸುಕರಾಗಿದ್ದಾರೆ. ಈ ಚಿತ್ರ ನಿಜವಾಗಿಯೂ ಧ್ರುವ ಸರ್ಜಾ ಅವರ ಆಕ್ಷನ್ ಪ್ರಿನ್ಸ್ ವ್ಯಕ್ತಿತ್ವವನ್ನು ಸಮರ್ಥಿಸುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಧ್ರುವ ಜೊತೆಗಿನ ಮುಂದಿನ ಸಿನಿಮಾ ಕುರಿತು ಪ್ರತಿಕ್ರಿಯಿಸಿದ ಅರ್ಜುನ್, ನಾವು ಮತ್ತೆ ಒಂದಾಗಬಹುದೇ ಎಂಬುದನ್ನು ಸಮಯ ಹೇಳುತ್ತದೆ. ಎಲ್ಲವೂ ಸರಿ ಹೊಂದಿದರೆ, ಮತ್ತೆ ಒಟ್ಟಿಗೆ ಮ್ಯಾಜಿಕ್ ಮಾಡಬಹುದು. ಯಾವುದೇ ಚಿತ್ರ ಪ್ರಾರಂಭಿಸುವ ಮೊದಲು ಸರಿಯಾದ ಟೈಮ್‌ಲೈನ್ ಇಟ್ಟುಕೊಳ್ಳುವುದು ಬಹಳ ಮುಖ್ಯ. ಈ ಚಿತ್ರದ ಅನುಭವದಿಂದ ಅದು ತಿಳಿದಿದೆ. ನಾನು ತುಂಬಾ ವಿಶ್ವಾಸ ಇಟ್ಟುಕೊಂಡಿದ್ದೇನೆ. ಪ್ರಯಾಣದಲ್ಲಿ ಅಡೆ ತಡೆ ಇದ್ದಿರಬಹುದು. ಆದರೆ ನಿರ್ದೇಶಕನಿಲ್ಲದೆ ಸಿನಿಮಾ ಇಲ್ಲ. ಮಾರ್ಟಿನ್ ನ್ನು ಜಗತ್ತಿಗೆ ತೋರಿಸಲು ಸಿದ್ಧರಿದ್ದೇವೆ ಎಂದರು.
Advertisement