
‘ಯುವ’ ಸಿನಿಮಾ ಮೂಲಕ ಬೆಳ್ಳಿತೆರೆ ಮೇಲೆ ಅಬ್ಬರಿಸಿದ್ದ ಯುವ ರಾಜ್ಕುಮಾರ್ ಅವರು ಇದೀಗ ಎರಡನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಅಪ್ಪು ಕನಸಿನಂತೆ ಯುವರಾಜ್ ಕುಮಾರ್ ಅವರ ಎರಡನೇ ಚಿತ್ರ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.
ಪಿಅರ್'ಕೆ ಮೂಲಕ ಯುವರಾಜ್ ನ ಲಾಂಚ್ ಮಾಡುವುದಕ್ಕೆ ಪುನೀತ್ ರಾಜ್ ಕುಮಾರ್ ಪ್ಲಾನ್ ಮಾಡಿದ್ದರು. ಈಗ ಅಪ್ಪು ಆಸೆಯಂತೆ ಪಿಅರ್'ಕೆ ಯಲ್ಲಿ ಯುವರಾಜ್ ಕುಮಾರ್ ಅವರ 2ನೇ ಚಿತ್ರ ನಿರ್ಮಾಣವಾಗಲಿದೆ. ಯುವ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಪಕಿಯಾಗಿದ್ದಾರೆಂದು ತಿಳಿದುಬಂದಿದೆ.
ಅಪ್ಪು ಕನಸಿಗಾಗಿ ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳು ಕೈ ಜೋಡಿಸಿವೆ. ಪಿಅರ್ ಕೆ ಜೊತೆ ಜಯಣ್ಣ ಫಿಲಂಸ್, ಕೆಅರ್ ಜಿ ಸ್ಟೂಡಿಯೋ ಸೇರಿ ಯುವ ಅವರ 2ನೇ ಸಿನಿಮಾ ನಿರ್ಮಾಣ ಮಾಡುತ್ತಿವೆ. ಮೂರು ದಿಗ್ಗಜ ಸಂಸ್ಥೆಗಳ ನೇತೃತ್ವದಲ್ಲಿ ಯುವರಾಜ್ ಕುಮಾರ್ ಅವರ ಎರಡನೇ ಚಿತ್ರ ನಿರ್ಮಾಣ ಆಗುತ್ತಿದೆ.
ಈ ಸುದ್ದಿಗಳ ನಡುವಲ್ಲೇ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಅವರು ಮಾಡಿರುವ ಪೋಸ್ಟ್ ವೊಂದು ಸಿನಿಮಾ ಕುರಿತು ಮತ್ತಷ್ಟು ಸುಳಿವುಗಳನ್ನು ನೀಡಿದೆ. “‘Back on track onto the next, a good week this is going to be!” ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಯುವರಾಜ್ ಕುಮಾರ್ ಅವರ 2ನೇ ಚಿತ್ರ ಕುರಿತ ಊಹಾಪೋಹಗಳಿಗೆ ಪುಷ್ಠಿ ನೀಡಿದೆ.
ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾದ ನಿರ್ದೇಶಕರು ಯಾರು? ಈ ಚಿತ್ರದ ಟೈಟಲ್ ಏನು? ಈ ಸಿನಿಮಾದಲ್ಲಿ ಯಾರೆಲ್ಲ ನಟರು ಹಾಗೂ ತಂತ್ರಜ್ಞರು ಇರಲಿದ್ದಾರೆ ಎಂಬ ಮಾಹಿತಿಗಾಗಿ ಕಾದು ನೋಡಬೇಕಿದೆ.
ಒಟ್ಟಾರೆ, ಯುವ ರಾಜ್ಕುಮಾರ್ ಎರಡನೇ ಚಿತ್ರ ಪಿಆರ್‌ಕೆ ಪ್ರೊಡಕ್ಷನ್ನಲ್ಲಿ ನಿರ್ಮಾಣ ಆಗುತ್ತಿರುವುದರಿಂದ ಕುತೂಹಲ ಹೆಚ್ಚಿದ್ದು, ಮೂರು ದಿಗ್ಗದ ಸಿನಿಮಾ ನಿರ್ಮಾಣ ಸಂಸ್ಧೆಗಳು ಚಿತ್ರದ ಕುರಿತು ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
Advertisement