ವೆಬ್ ಸರಣಿಗಳ ನಿರ್ಮಾಣ ಸಂಸ್ಥೆ, ಆರ್ ಜೆ ಪ್ರದೀಪ್ ಅವರ ಸಕ್ಕತ್ ಸ್ಟುಡಿಯೋದ ಚೊಚ್ಚಲ ಸಿನಿಮಾ ಮರ್ಯಾದೆ ಪ್ರಶ್ನೆ ಚಿತ್ರ ತೆರೆಗೆ ಬರೋದಿಕ್ಕೆ ಮುಹೂರ್ತ ನಿಗದಿಯಾಗಿದೆ.
ಟೈಟಲ್ ಮೂಲಕೇ ಪ್ರೇಕ್ಷಕರ ಗಮನ ಸೆಳೆದಿರುವ ಚಿತ್ರ ನವೆಂಬರ್ 22ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ.
ಚಿತ್ರ ನಿರ್ಮಾಪಕ ಆರ್ ಜೆ ಪ್ರದೀಪ್ ಮಾತನಾಡಿ, ಸಕ್ಕತ್ ಸ್ಟುಡಿಯೋ ನಮ್ಮ ಕನಸು. ಒಂದೊಳ್ಳೆ ಮಾಡಬೇಕು ಅನ್ನೋದು ಇತ್ತು. ನಾನು ನಾಗರಾಜ್ ಕಥೆ ಬಗ್ಗೆ ಚರ್ಚೆ ಮಾಡಿದ್ದೇವೆ. ಇಬ್ಬರು ಸೇರಿ ಸಿನಿಮಾಗಾಗಿ ಕೈ ಜೋಡಿಸಿದೆವು. ಹೀಗೆ ಶುರುವಾದ ಜರ್ನಿ ನಾವು ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಒಂದೊಳ್ಳೆ ಸಿನಿಮಾ ಮಾಡಿಕೊಂಡು ಜನರಿಗೆ ತಲುಪಿಸಲು ಡೇಟ್ ಫಿಕ್ಸ್ ಮಾಡಿಕೊಂಡು ನಿಮ್ಮ ಮುಂದೆ ಬಂದಿದ್ದೇವೆ. ಈ ಚಿತ್ರದ ಯಶಸ್ಸು ಖಂಡಿತವಾಗಿಯೂ ಸಕ್ಕತ್ ಸ್ಟುಡಿಯೊದಿಂದ ಇನ್ನೂ ಅನೇಕ ಪ್ರತಿಭೆಗಳು ಮತ್ತು ಯೋಜನೆಗಳು ಹೊರಹೊಮ್ಮಲು ಕಾರಣವಾಗುತ್ತದೆ.
ಹೊಸ ಪ್ರತಿಭೆಗಳನ್ನು ಪೋಷಿಸಲು ಮತ್ತು ಆಕರ್ಷಕ ನಿರೂಪಣೆಗಳನ್ನು ರಚಿಸಲು ಸ್ಟುಡಿಯೋ ಬದ್ಧವಾಗಿದ್ದು, ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುತ್ತದೆ ಎಂದು ಹೇಳಿದರು.
ಚಿತ್ರವನ್ನು ನಾಗರಾಜ್ ಸೋಮಯಾಚಿ ನಿರ್ದೇಶಿಸಿದ್ದು, ಚಿತ್ರವು ಚಿತ್ರವು ಸೇಡಿನ ನಿರೂಪಣೆ, ಶಕ್ತಿ ಮತ್ತು ಇಚ್ಛಾಶಕ್ತಿಯ ನಡುವಿನ ತೆಳುವಾದ ರೇಖೆಯನ್ನು ಪರಿಶೋಧಿಸುತ್ತದೆ. ಮಧ್ಯಮ ವರ್ಗ ಮತ್ತು ಗಣ್ಯರ ದೃಷ್ಟಿಕೋನಗಳನ್ನು, ಜೀವನದ ನೈಜತೆಯನ್ನು ಪರಿಶೀಲಿಸುತ್ತದೆ.
ಚಿತ್ರದಲ್ಲಿ ಶೈನ್ ಶೆಟ್ಟಿ, ಸುನಿಲ್ ರಾವ್, ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ ಮತ್ತು ತೇಜು ಬೆಳವಾಡಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸಕ್ಕತ್ ಸ್ಟುಡಿಯೋ ಬ್ಯಾನರ್‌ನಡಿ ಪ್ರದೀಪ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಈ ಚಿತ್ರಕ್ಕೆ ಪ್ರದೀಪ್ ಅವರೇ ಕಥೆ ಬರೆದಿದ್ದಾರೆ. ಕ್ರಿಯೆಟಿವ್ ಹೆಡ್ ಕೂಡ ಸಾಥ್ ಕೊಟ್ಟಿದ್ದಾರೆ.
ಮರ್ಯಾದೆ ಪ್ರಶ್ನೆ ಚಿತ್ರವನ್ನ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ.
Advertisement