
ನಟ ಯುವ ರಾಜ್‌ಕುಮಾರ್ ಅವರು ತಮ್ಮ ಮುಂದಿನ ಸಿನಿಮಾದ ಸಿದ್ಧತೆಯಲ್ಲಿದ್ದಾರೆ, ಯುವ ರಾಜ್‌ಕುಮಾರ್ ಹೊಸ ಸಿನಿಮಾಗೆ ರೋಹಿತ್ ಪದಕಿ ನಿರ್ದೇಶನ ಮಾಡಲಿದ್ದಾರೆ, ಯುವ ನಟನೆಯ ಹೊಸ ಸಿನಿಮಾಕ್ಕಾಗಿ PRK ಪ್ರೊಡಕ್ಷನ್ಸ್, KRG ಸ್ಟುಡಿಯೋಸ್ ಮತ್ತು ಜಯಣ್ಣ ಫಿಲ್ಮ್ಸ್ ಒಂದಾಗಿವೆ.
ಈ ಸಿನಿಮಾ ಬಗ್ಗೆ ದಸರಾ ಹಬ್ಬದಂದು ಘೋಷಣೆ ಮಾಡಲಾಗಿದೆ. ಯುವ 2 ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಪ್ ಡೇಟ್ ಹಂಚಿಕೊಂಡಿದ್ದಾರೆ. ಇನ್ನು ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ರಕ್ತಸಿಕ್ತವಾದ ಕೈಯಲ್ಲಿ ಮಚ್ಚನ್ನು ಹಿಡಿದುಕೊಂಡಿದ್ದಾರೆ ಯುವ. Sins aren’t always red ಎಂಬ ದಪ್ಪ ಅಡಿಬರಹವಿದೆ. ಸದ್ಯ ರಕ್ತ ಚರಿತ್ರೆ ಕಥೆಯನ್ನು ರೋಹಿತ್ ಪದಕಿ ಹೇಳ್ತಾರಾ ಕಾದು ನೋಡಬೇಕಿದೆ.
ಯುವ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಯುವ ರಾಜ್‌ಕುಮಾರ್ ಈಗ ತಮ್ಮ ಎರಡನೇ ಪ್ರಾಜೆಕ್ಟ್‌ಗೆ ಸಜ್ಜಾಗಿದ್ದಾರೆ. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಆಚರಣೆಯೊಂದಿಗೆ ಫಸ್ಟ್ ಲುಕ್ ಮತ್ತು ಅಧಿಕೃತ ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಅನಾವರಣಗೊಳಿಸಲು ಚಿತ್ರ ನಿರ್ಮಾಪಕರು ಯೋಜಿಸಿದ್ದಾರೆ. ರತ್ನನ್ ಪ್ರಪಂಚ ಮತ್ತು ಉತ್ತರಕಾಂಡದಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾದ ರೋಹಿತ್ ಪದಕಿ ಅವರು ಯುವ 2 ಗಾಗಿ ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂಬುದು ಖಚಿತವಾಗಿದೆ. ತಾರಾಗಣ, ಸಿಬ್ಬಂದಿ ಮತ್ತು ತಾಂತ್ರಿಕ ತಂಡದ ಬಗ್ಗೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.
Advertisement