'ಕೆಲವರು ನಾನು ರಜನಿಕಾಂತ್ ಹೋಲುತ್ತೇನೆ ಎಂದಿದ್ದರು; ಯಾರು ಕೂಡ ವಜ್ರಮುನಿ ಅವರೊಂದಿಗೆ ನನ್ನನ್ನು compare ಮಾಡಿರಲಿಲ್ಲ'

2008 ರಲ್ಲಿ ನಾಯಕನಾಗಿ ಮಿಸ್ಟರ್ ಗರಗಸ ಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಕೋಮಲ್ ಸುಮಾರು 45 ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗೋವಿಂದಾಯ ನಮಃ ಚಿತ್ರದಲ್ಲಿನ ಅಭಿನಯಕ್ಕೆ ಹೆಸರುವಾಸಿಯಾದರು ಕೋಮಲ್.
A still from yalakunni cinema
ಯಲಾ ಕುನ್ನಿ ಸಿನಿಮಾ ಸ್ಟಿಲ್
Updated on

ಎರಡು ದಶಕಗಳ ಸಿನಿಮಾ ಅನುಭವ ಮತ್ತು ಹಾಸ್ಯನಟನಾಗಿ 56 ಚಿತ್ರಗಳಲ್ಲಿ ಅಭಿನಯಿಸಿರುವ ಕೋಮಲ್ ಕುಮಾರ್ ಅವರ ಯಲಾ ಕುನ್ನಿ ಸಿನಿಮಾ ಅಕ್ಟೋಬರ್ 25 ರಂದು ರಿಲೀಸ್ ಆಗಲಿದೆ. ಈ ವೇಳೆ ಸಿನಿಮಾ ಬಗ್ಗೆ ಕೋಮಲ್ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

2008 ರಲ್ಲಿ ನಾಯಕನಾಗಿ ಮಿಸ್ಟರ್ ಗರಗಸ ಚಿತ್ರದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಕೋಮಲ್ ಸುಮಾರು 45 ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗೋವಿಂದಾಯ ನಮಃ ಚಿತ್ರದಲ್ಲಿನ ಅಭಿನಯಕ್ಕೆ ಹೆಸರುವಾಸಿಯಾದ ಕೋಮಲ್ ಒಂದೇ ರೀತಿಯ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಬಿಟ್ಟು ವಿಭಿನ್ನ ಪಾತ್ರಗಳಲ್ಲಿ ನಟಿಸುವ ಗುರಿ ಹೊಂದಿದ್ದಾರೆ. "ನನ್ನ ಪ್ರತಿಯೊಂದು ಚಿತ್ರವೂ ಮನರಂಜನೆಯ ಉದ್ದೇಶದಿಂದ ಕೂಡಿದೆ, "ಕೆಂಪೇಗೌಡ 2 ಹೊರತುಪಡಿಸಿ, ಪ್ರತಿ ಚಿತ್ರವೂ ಹಾಸ್ಯಮಯ ಮನರಂಜನಾ ಚಿತ್ರಗಳಾಗಿವೆ ಎಂದಿದ್ದಾರೆ.

ಯಲಾ ಕುನ್ನಿ ಸಿನಿಮಾ ಟೈಟಲ್ ಕೆಳಗೆ'ಮೇರಾ ನಾಮ್ ವಜ್ರಮುನಿ' ಎಂಬ ಆಕರ್ಷಕ ನುಡಿಗಟ್ಟು ಹೈಲೈಟ್ ಆಗಿದೆ. ಅಂಬರೀಶ್ ಅವರ ‘ಕುತ್ತೆ ಕನ್ವರ್‌ಲಾಲ್ ಭೋಲೋ’ ಸಾಲು ಹೇಗೆ ಜನಪ್ರಿಯವಾಗಿದೆಯೋ ಅದೇ ರೀತಿ ಈ ಸಾಲು ನಮ್ಮ ಚಿತ್ರಕ್ಕೆ ವಿಶೇಷವಾಗಿದೆ ಎಂದಿದ್ದಾರೆ. ಈ ಚಿತ್ರವು ಒಂದೆರಡು ಕಾರಣಗಳಿಗಾಗಿ ವಿಶೇಷವಾಗಿದೆ, ಏಕೆಂದರೆ ಕೋಮಲ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ದಾರೆ, ಹಿಂದಿನ ವಿಲನ್ ವಜ್ರಮುನಿ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. “ವಜ್ರಮುನಿ ಆ ಕಾಲದ ಅಪ್ರತಿಮ ಖಳನಾಯಕ. ಅವರ ರೀತಿ ಅಭಿನಯ ಸವಾಲಾಗಿದೆ. ಅವರನ್ನು ಅನುಕರಿಸುವುದು ಬಹಳ ಕಷ್ಟ ಎಂದ ಕೋಮಲ್ ಅಭಿಪ್ರಾಯ ಪಟ್ಟಿದ್ದಾರೆ.

ಅಥೆಂಟಿಸಿಟಿಯೇ ಕೋಮಲ್ ಅಭಿನಯದ ತಿರುಳು. ನಟ ವಜ್ರಮುನಿ ಅವರ ನೋಟ ಮಾತ್ರವಲ್ಲ. ಅಭಿನಯವು ಎಷ್ಟು ನಿಖರವಾಗಿದೆ ಎಂದರೆ, ತೆರೆಯ ಮೇಲೆ ವಜ್ರಮುನಿಯಂತೆ ಭಾಸವಾಗುತ್ತದೆ,” ಎಂದು ಕೋಮಲ್ ತಿಳಿಸಿದ್ದಾರೆ. ಹೊಸ ಪೀಳಿಗೆಗೆ ವಜ್ರಮುನಿ ಅವರನ್ನು ಮರುಪರಿಚಯಿಸುವುದು ತಮ್ಮ ಸಿನಿಮಾ ಗುರಿಯಾಗಿದೆ. ಇಂದಿನ ಮಕ್ಕಳು ಅವರ ಪರಂಪರೆಯೊಂದಿಗೆ ಸಂಪರ್ಕ ಹೊಂದಬೇಕೆಂದು ನಾನು ಬಯಸುತ್ತೇನೆ" ಎಂದು ಕೋಮಲ್ ಅಭಿಪ್ರಾಯ ಪಟ್ಟಿದ್ದಾರೆ.

A still from yalakunni cinema
ಕೋಮಲ್‌ ನಟನೆಯ ‘ಯಲಾ ಕುನ್ನಿ' ಅಕ್ಟೋಬರ್ 25 ರಂದು ತೆರೆಗೆ

ಆರಂಭದಲ್ಲಿ ವಜ್ರಮುನಿ ಪಾತ್ರವನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದ ಕೋಮಲ್ ಅನುಮಾನಗಳನ್ನು ವ್ಯಕ್ತಪಡಿಸಿದರು. “ಕೆಲವರು ನಾನು ರಜನಿಕಾಂತ್ ಅವರನ್ನು ಹೋಲುತ್ತೇನೆ ಎಂದು ಹೇಳಿದ್ದಾರೆ, ಆದರೆ ಯಾರೂ ಕೂಡ ನನ್ನನ್ನು ವಜ್ರಮುನಿಯೊಂದಿಗೆ ಹೋಲಿಸಿರಲಿಲ್ಲ. ನಿರ್ದೇಶಕರ ಜೊತೆ ಸುದೀರ್ಘವಾಗಿ ಚರ್ಚಿಸಿದ ನಂತರ ನಾನು ಒಪ್ಪಿಕೊಂಡೆ. ಕೋಮಲ್ ಒಮ್ಮೆ ತಮ್ಮ ಸಹೋದರ ಜಗ್ಗೇಶ್ ಅವರ ಭೈರವ ಚಿತ್ರ ನಿರ್ಮಿಸಿದರು, ಇದರಲ್ಲಿ ವಜ್ರಮುನಿ ಕೂಡ ಕಾಣಿಸಿಕೊಂಡಿದ್ದರು. ಈಗ, ಅವರು ಮತ್ತು ಅವರ ಪತ್ನಿ ಅನಸೂಯ ಅವರು ಯಲಾ ಕುನ್ನಿಯನ್ನು ನಿರ್ಮಿಸುತ್ತಿದ್ದಾರೆ, ಇದರಲ್ಲಿ ವಜ್ರಮುನಿಯ ಮೊಮ್ಮಗ ಆಕರ್ಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಇದು ಕಾಕತಾಳೀಯವಲ್ಲ" ಎಂದು ಹೇಳಿದ್ದಾರೆ.

ನಾವು ನನ್ನ ಮೂಲಕ ವಜ್ರಮುನಿ ಪಾತ್ರಕ್ಕೆ ಜೀವ ತುಂಬಲು ಯೋಜಿಸಿದಾಗ, ಆಕರ್ಷ್‌ಗೆ ನಟನೆಯಲ್ಲಿ ಆಸಕ್ತಿ ಇದೆ ಎಂಬ ಸುಳಿವು ನಮಗೆ ಇರಲಿಲ್ಲ. ನಾವು ಅದರ ಬಗ್ಗೆ ತಿಳಿದಾಗ, ನಾವು ಅವನನ್ನು ಸಿನಿಮಾಗೆ ಕರೆತಂದಿದ್ದೇವೆ. ಅವರ ಪಾತ್ರವು ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಸುಂದರವಾಗಿ ಬಿಂಬಿಸುತ್ತದೆ. ಯಲಾ ಕುನ್ನಿಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಮುಸುರಿ ಕೃಷ್ಣಮೂರ್ತಿಯವರ ಪರಂಪರೆ, ಅವರ ಮಗ ಜಯಸಿಂಹ ಮುಸುರಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. “ನಾನು ವಜ್ರಮುನಿಯಾಗಿ ನಟಿಸುವಂತೆ, ಅವರು ತಮ್ಮ ತಂದೆಯ ಪಾತ್ರವನ್ನು ಪುನರಾವರ್ತಿಸುತ್ತಾರೆ.

ದತ್ತಣ್ಣ, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಜಗ್ಗೇಶ್ ಅವರ ಮಗ ಯತಿರಾಜ್, ಶಿವರಾಜ್ ಕೆ ಆರ್ ಪೇಟ್, ತಬಲಾ ನಾಣಿ, ಮತ್ತು ರಾಜು ತಾಳಿಕೋಟೆ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಬೆಳದಿಂಗಳ ಬಾಲೆಗೆ ಹೆಸರುವಾಸಿಯಾದ ಸುಮನ್ ನಗರ್ಕರ್, ಮಾತಂಗಿ ಎಂಬ ದೃಷ್ಟಿಹೀನಳ ಪಾತ್ರದಲ್ಲಿ ನಟಿಸಿದ್ದಾರೆ. ಹಳ್ಳಿಗಾಡಿನಲ್ಲಿ ನಡೆಯುವ ಯಲಾ ಕುನ್ನಿಯನ್ನು ಸೌಂದರ್ಯ ಸಿನಿ ಕಂಬೈನ್ಸ್ ಮತ್ತು ನರಸಿಂಹ ಸಿನಿಮಾಸ್ ನಿರ್ಮಿಸಿದೆ. ಧರ್ಮ ವಿಶ್ ಅವರ ಸಂಗೀತ, ದೀಪು ಎಸ್ ಕುಮಾರ್ ಅವರ ಸಂಕಲನ ಮತ್ತು ಹಾಲೇಶ್ ಭದ್ರಾವತಿ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com