Jaffna International Cinema Festival: ಗಿರೀಶ್ ಕಾಸರವಳ್ಳಿಗೆ ಜೀವಮಾನ ಸಾಧನೆ ಪ್ರಶಸ್ತಿ

ಸೆಪ್ಟೆಂಬರ್ 9 ರಂದು ನಡೆಯುವ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಗಿರೀಶ್ ಕಾಸರವಳ್ಳಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಗಿರೀಶ್ ಕಾಸರವಳ್ಳಿ
ಗಿರೀಶ್ ಕಾಸರವಳ್ಳಿ
Updated on

ಜಾಫ್ನಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ಕನ್ನಡ ಚಲನಚಿತ್ರ ನಿರ್ಮಾಪಕ ಗಿರೀಶ್ ಕಾಸರವಳ್ಳಿ ಅವರಿಗೆ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತಿದೆ.

ಸೆಪ್ಟೆಂಬರ್ 9 ರಂದು ನಡೆಯುವ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಗಿರೀಶ್ ಕಾಸರವಳ್ಳಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಶಸ್ತಿಯ ಜೊತೆಗೆ ಗಿರೀಶ್ ಕಾಸರವಳ್ಳಿ ಅವರ ನಾಲ್ಕು ಚಿತ್ರಗಳ ಪ್ರದರ್ಶನವೂ ಇರಲಿದೆ. ಹಾಗೆಯೇ ಜಾಫ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಗಿರೀಶ್ ಕಾಸರವಳ್ಳಿ ಅವರ ಒಂದು ಮಾಸ್ಟರ್ ಕ್ಲಾಸ್ ಅನ್ನೂ ಆಯೋಜಿಸಲಾಗಿದೆ.

ಗೌಹಾಟಿಯ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದು, ಇದೀಗ ಶ್ರೀಲಂಕಾದ ಭಾರತೀಯ ಹೈ ಕಮಿಷನ್‌ನಲ್ಲಿ ವಿವೇಕಾನಂದ ಕಲ್ಚರ್ ಸೆಂಟರ್‌ನ ನಿರ್ದೇಶಕರಾಗಿರುವ ಡಾ. ಅಂಕುರನ್ ದತ್ತ ಅವರು ಆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸೆಪ್ಟೆಂಬರ್ 9 ರಂದು ನಡೆಯಲಿರುವ ಜಾಫ್ನಾ ಚಿತ್ರೋತ್ಸವದ ಮುಕ್ತಾಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಅದನ್ನು ಸ್ವೀಕರಿಸಲು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಜಾಫ್ನಾಕ್ಕೆ ತೆರಳಿದ್ದಾರೆ.

1977 ರಲ್ಲಿ ತೆರೆಕಂಡ ಗಿರೀಶ ಕಾಸರವಳ್ಳಿ ಅವರು ನಿರ್ದೇಶಿಸಿದ ರಾಷ್ಟ್ರಪ್ರಶಸ್ತಿ ವಿಜೇತ ‘ಘಟಶ್ರಾದ್ಧ’ ಸಿನಿಮಾ ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಅಗ್ರಸ್ಥಾನ ಪಡೆದ ವೆನಿಸ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ವೆನಿಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೂ ‘ಘಟಶ್ರಾದ್ಧ’ ಭಾಜನವಾಗಿತ್ತು.

ಗಿರೀಶ್ ಕಾಸರವಳ್ಳಿ
81ನೇ ವೆನಿಸ್ ಚಲನಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿ 'ಘಟಶ್ರಾದ್ಧ' ಪ್ರದರ್ಶನ

ತಮ್ಮ 26 ನೇ ವಯಸ್ಸಿನಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಈ ಚಿತ್ರವು ತನ್ನ ದಿಟ್ಟ ದೃಶ್ಯ ಶೈಲಿ ಮತ್ತು ಮನಮೋಹಕ ಕಥೆ ಹೇಳುವ ಮೂಲಕ ಕ್ರಾಂತಿಕಾರಿ ಸಿನಿಮಾವಾಗಿತ್ತು, ಕನ್ನಡ ಚಿತ್ರರಂಗದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಿತು.

ಘಟಶ್ರಾದ್ಧವು ಸತ್ಯಜಿತ್ ರೇ, ಮೃಣಾಲ್ ಸೇನ್ ಮತ್ತು ಶ್ಯಾಮ್ ಬೆನಗಲ್ ಅವರಂತಹ ಚಲನಚಿತ್ರ ನಿರ್ಮಾಪಕರ ಮೇರುಕೃತಿಗಳ ಜೊತೆಗೆ ಸ್ಪರ್ಧಯೊಡ್ಡಿತು, ಜೊತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿತು. ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸಂದರ್ಭದಲ್ಲಿ ಈ ಸಿನಿಮಾವನ್ನು ಟಾಪ್ 20 ಭಾರತೀಯ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಯಿತು.

'ಘಟಶ್ರಾದ್ಧ' ಚಿತ್ರ ನೋಡಿ ಮೆಚ್ಚಿದ್ದ ಹಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರುಗಳಾದ 'ಟ್ಯಾಕ್ಸಿ ಡ್ರೈವರ್', 'ಡಿಪಾರ್ಟೆಡ್' ಚಿತ್ರ ಖ್ಯಾತಿಯ ಮಾರ್ಟಿನ್ ಸ್ಕಾರ್ಸೆಸ್ಸಿ ಹಾಗೂ 'ಸ್ಟಾರ್ ವಾರ್ಸ್' ಖ್ಯಾತಿಯ ಜಾರ್ಜ್ ಲ್ಯೂಕಾಸ್ ಈ ಚಿತ್ರದ ಪುನರ್ ರೂಪೀಕರಣಕ್ಕೆ ಮುಂದಾಗಿದ್ದರು.

'ಸೆಲ್ಯೂಲಾಯ್ದ್ ಮ್ಯಾನ್' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ನಿರ್ದೇಶಕ ಶಿವೇಂದ್ರ ಸಿಂಗ್ ದುಂಗಾರ್‌ಪುರ್ ಅವರ ಸಿನಿಮಾ ಫೌಂಡೇಶನ್ ಈ ಇಡೀ ಪುನರ್ ನವೀಕರಣದ ರೂವಾರಿಯಾಗಿದ್ದರು. ಡಾ ಯು ಆರ್ ಅನಂತ ಮೂರ್ತಿಯವರ ಸಣ್ಣಕತೆ ಆಧರಿಸಿ, ಚಿತ್ರಕಥೆಯನ್ನು ಬರೆದು 'ಘಟಶ್ರಾದ್ಧ' ಚಿತ್ರವನ್ನ ನಿರ್ದೇಶಿಸಿದವರು ಗಿರೀಶ್ ಕಾಸರವಳ್ಳಿ. ಎಸ್ ರಾಮಚಂದ್ರರ ಛಾಯಾಗ್ರಹಣ ಇದ್ದ ಈ ಚಿತ್ರಕ್ಕೆ ಬಿ ವಿ ಕಾರಂತ ಸಂಗೀತ ನೀಡಿದ್ದರು. ಕಲಾನಿರ್ದೇಶನ ಕೆ ವಿ ಸುಬ್ಬಣ್ಣನವರದಾಗಿತ್ತು. 'ಘಟಶ್ರಾದ್ಧ' ಸಿನಿಮಾವನ್ನು ಸದಾನಂದ ಸುವರ್ಣ ನಿರ್ಮಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com