ರಜನಿಕಾಂತ್ ಅಭಿನಯದ 'ವೆಟ್ಟೈಯಾನ್' ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಿತಿಕಾ ಸಿಂಗ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ವೆಟ್ಟೈಯಾನ್ ರಿಲೀಸ್ ಗೆ ರೆಡಿಯಾಗಿದೆ. ಅಕ್ಟೋಬರ್ 10ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದ. ಸದ್ಯ ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ನಡುವೆ ಸಿನಿಮಾ ತಂಡ ಮತ್ತೊಂದು ಅಪ್ ಡೇಟ್ ನೀಡಿದೆ. ರಿತಿಕಾ ಸಿಂಗ್ ಈ ಸಿನಿಮಾದಲ್ಲಿ ರೂಪಾ ಎಂಬ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ, ಪೋಸ್ಟರ್ ಬಿಡುಗಡೆಯಾಗಿದ್ದು ಆಕ್ಷನ್ ಮಾಡುವ ದೃಶ್ಯವಿದೆ.
ದುಶಾರಾ ವಿಜಯನ್ ಅವರು ಶರಣ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ, ಅವರು ಶಿಕ್ಷಕಿಯ ಪಾತ್ರದಲ್ಲಿ ನಟಿಸುತ್ತಾರೆ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 20 ರಂದು ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರದ ಆಡಿಯೋ ಲಾಂಚ್ ನಡೆಯಲಿದೆ ಎಂದು ಮುಂಜಾನೆ ಘೋಷಿಸಲಾಗಿತ್ತು. ಜೈ ಭೀಮ್ ನಿರ್ದೇಶಕ ಟಿಜೆ ಜ್ಞಾನವೇಲ್ ಅವರ ವೆಟ್ಟೈಯನ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ (ತಮಿಳಿನ ಚೊಚ್ಚಲ ಚಿತ್ರ), ಫಹದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಷಾರ ವಿಜಯನ್, ಅಭಿರಾಮಿ ಮತ್ತು ವಿಜೆ ರಕ್ಷಣ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ 33 ವರ್ಷಗಳ ನಂತರ ಈ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ. 1991 ರಲ್ಲಿ ಬಿಡುಗಡೆಯಾದ ಹಮ್ ಈ ಜೋಡಿಯ ಕೊನೆಯ ಚಿತ್ರವಾಗಿತ್ತು. ಈ ಹಿಂದೆ, ಮೇ ತಿಂಗಳಲ್ಲಿ, ರಜನಿಕಾಂತ್ ತಮ್ಮ ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಘೋಷಿಸಲಾಯಿತು. ವೆಟ್ಟಯ್ಯನ್ ಚಿತ್ರಕ್ಕೆ ಅನಿರುದ್ಧ್ ಅವರ ಸಂಗೀತವಿದೆ. ಇದು ರಜನಿಕಾಂತ್ ಜೊತೆ ಅನಿರುದ್ ಅವರ ನಾಲ್ಕನೇ ಸಿನಿಮಾವಾಗಿದೆ.