Extreme personalities: ನ್ಯಾಷನಲ್ ಕ್ರಷ್ ರಶ್ಮಿಕಾ ಹೇಳಿದ್ದೇನು!

ಮಿಲನ್ ಫ್ಯಾಶನ್ ವೀಕ್‌ಗೆ ಹಾಜರಾಗಿದ್ದ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ Stories ಶೇರ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ
Updated on

ಪ್ರತಿಷ್ಠಿತ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದಾರೆ. ಈಗಾಗಲೇ ಆರಂಭಗೊಂಡಿರುವ ಮುಂಬರುವ ಸಮ್ಮರ್‌-ಸ್ಪ್ರಿಂಗ್‌ ಸೀಸನ್‌ನ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ, ಪ್ರಪಂಚದಾದ್ಯಂತ ಇರುವ ಪ್ರತಿಷ್ಠಿತ ಬ್ರಾಂಡ್‌ಗಳು ಭಾಗವಹಿಸಿವೆ. ಎಂದಿನಂತೆ ಇಂಟರ್‌ನ್ಯಾಷನಲ್‌ ಸೆಲೆಬ್ರಿಟಿಗಳು ಹಾಗೂ ತಾರೆಯರು ಕಾಣಿಸಿಕೊಂಡಿದ್ದಾರೆ.

ಫ್ಯಾಷನ್‌ ವೀಕ್‌ನ ರನ್‌ ವೇ ಶೋ ನಡೆಯುವಾಗ, ಮುಂದಿನ ಸಾಲಿನ ಗೆಸ್ಟ್ ಲಿಸ್ಟ್‌ನಲ್ಲಿ ರಶ್ಮಿಕಾ, ನಟ ವೂ ಡು ವ್ಯಾನ್‌ ಸೇರಿದಂತೆ ಸೂಪರ್‌ ಮಾಡೆಲ್‌ಗಳೊಂದಿಗೆ ಕುಳಿತು ಶೋ ಎಂಜಾಯ್ ಮಾಡಿದ್ದಾರೆ. ಭಾರತೀಯ ನಟಿ ರಶ್ಮಿಕಾ ಮಂದಣ್ಣ extreme personalities ಬಗ್ಗೆ ಮಾತನಾಡಿದ್ದಾರೆ. ಹೊತ್ತಲ್ಲದ ಹೊತ್ತಿನಲ್ಲಿ ಅತಿಯಾಗಿ ವ್ಯಾಯಾಮ ಮಾಡಿ ಹಾಗೂ ಹಗಲಿನಲ್ಲಿ couch potatoing ಅಂದರೆ ರಿಲ್ಯಾಕ್ಸ್ ಆಗಿ ಇರಿ ಎಂದು ಹೇಳಿದ್ದಾರೆ.

ಮಿಲನ್ ಫ್ಯಾಶನ್ ವೀಕ್‌ಗೆ ಹಾಜರಾಗಿದ್ದ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ Stories ಶೇರ್ ಮಾಡಿದ್ದಾರೆ. ಹಾಸಿಗೆಯಲ್ಲಿ ಮಲಗಿ ಕ್ಯಾಮೆರಾಗೆ ಪೋಸ್ ಕೊಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಅದಾದ ನಂತರ ತಮ್ಮ ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿರುವ ರಶ್ಮಿಕಾ ನಿಮಗೂ ಕೂಡ extreme personalities ಇದ್ಯಾ ಎಂದು ಪ್ರಶ್ನಿಸಿದ್ದಾರೆ.

ರಶ್ಮಿಕಾ ಮಂದಣ್ಣ
ಜೀವನ ತುಂಬ ಕ್ಷಣಿಕ, ನಾಳೆ ಇರುತ್ತೋ ಇಲ್ಲವೋ ಗೊತ್ತಿಲ್ಲ: ಅಪಘಾತದ ಬೆನ್ನಲ್ಲೇ ನಟಿ ರಶ್ಮಿಕಾ ಪೋಸ್ಟ್​

ಹೊತ್ತಲ್ಲದ ಹೊತ್ತಲ್ಲಿ ವ್ಯಾಯಾಮ ಮಾಡುವುದು, ಸುಮಾರು 2 ರಿಂದ 3 ಗಂಟೆ ವರ್ಕೌಟ್ ಮಾಡುವುದು. ನಿಮಗೆ ವರ್ಕೌಟ್ ಮಾಡಲು ಇಷ್ಟವಿಲ್ಲದಿದ್ದಾಗ ಮಾಡಬೇಡಿ, ಮಂಚದ ಮೇಲೆ ಬಿದ್ದುಕೊಂಡು ಭೂಮಿಯ ಮೇಲಿರುವ ಅತ್ಯಂತ ಅನಾರೋಗ್ಯಕರವಾದ ಆಹಾರ ಸೇವಿಸಿ, ನಿಮಗೆ ಇಷ್ಟವಾದ ಸಿನಿಮಾ ನೋಡಿ ಎಂದು ಸಲಹೆ ನೀಡಿದ್ದಾರೆ. extreme personalities ಎಂದು ಶೀರ್ಷಿಕೆ ಕೊಟ್ಟಿರುವ ರಶ್ಮಿಕಾ “Yepp and Nope ಎಂಬ ಆಯ್ಕೆ ನೀಡಿದ್ದಾರೆ.

ರಶ್ಮಿಕಾ ಮಲೇಷಿಯಾದ ಬ್ಲಾಗರ್-ಮಾಡೆಲ್ ಕ್ರಿಸ್ಟಿನ್ನಾ ಕುವಾನ್‌ಗೆ ತಮಿಳು/ತೆಲುಗು ಕಲಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. “ನನ್ನ ಹೊಸ ಸ್ನೇಹಿತೆ” ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಸದ್ಯ ರಶ್ಮಿಕಾ, ಪುಷ್ಪ 2’ ಮತ್ತು ‘ಛಾವಾ’ ಸಿನಿಮಾ ಡಿಸೆಂಬರ್‌ನಲ್ಲಿ ರಿಲೀಸ್‌ಗೆ ಸಿದ್ಧವಾಗಿದೆ. ಕುಬೇರ, ಸಿಖಂದರ್, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಚಿತ್ರಗಳು ರಶ್ಮಿಕಾ ಕೈಯಲ್ಲಿವೆ.

ಪುಷ್ಪ 2 ಚಿತ್ರವು ಡಿಸೆಂಬರ್ 6, 2024 ರಂದು ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com