ಲತಾಶ್ರೀ ಸಾರಥ್ಯದ 'ಹರ್ಷಿಣಿ ಸಿನಿಮಾಸ್' ಚಿತ್ರ ನಿರ್ಮಾಣ ಸಂಸ್ಥೆಗೆ ದೇವೇಗೌಡ ಚಾಲನೆ

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುವ ಆಶಯ ಹೊಂದಿರುವ ಹರ್ಷಿಣಿ ಸಿನಿಮಾಸ್ ಸಂಸ್ಥೆಯು ಮೊದಲ ಚಿತ್ರವಾಗಿ “ಕಿರುನಗೆ” ಚಿತ್ರವನ್ನು ನಿರ್ಮಿಸುತ್ತಿದೆ.
ಚಿತ್ರ ತಂಡದೊಂದಿಗೆ ದೇವೇಗೌಡ.
ಚಿತ್ರ ತಂಡದೊಂದಿಗೆ ದೇವೇಗೌಡ.
Updated on

ಮಾಜಿ ಶಾಸಕ ದೇವಾನಂದ್ ಪೂ ಚವ್ಹಾಣ ಅವರ ಪುತ್ರಿ ಲತಾಶ್ರೀ ಡಿ.ಸಿ ಅವರು ಹರ್ಷಿಣಿ ಸಿನಿಮಾಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಈ ನೂತನ ನಿರ್ಮಾಣ ಸಂಸ್ಥೆಗೆ ಮಾಜಿ ಪ್ರಧಾನಮಂತ್ರಿ ಹೆಚ್'ಡಿ.ದೇವೇಗೌಡ ಅವರು ಚಾಲನೆ ನೀಡಿ, ಶುಭ ಹಾರೈಸಿದರು,

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುವ ಆಶಯ ಹೊಂದಿರುವ ಹರ್ಷಿಣಿ ಸಿನಿಮಾಸ್ ಸಂಸ್ಥೆಯು ಮೊದಲ ಚಿತ್ರವಾಗಿ “ಕಿರುನಗೆ” ಚಿತ್ರವನ್ನು ನಿರ್ಮಿಸುತ್ತಿದೆ.

“ಸತ್ಯಂ” ಸೇರಿದಂತೆ ಈಗಾಗಲೇ 4 ಚಿತ್ರಗಳನ್ನು ನಿರ್ದೇಶಿಸಿರುವ ಅಶೋಕ್ ಕಡಬ “ಕಿರುನಗೆ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಚಿತ್ರ ತಂಡದೊಂದಿಗೆ ದೇವೇಗೌಡ.
ಲಾಪತಾ ಲೇಡೀಸ್‌ ಸಂಭಾಷಣೆಗಾರ ಸೋನು ಆನಂದ್ ಜೊತೆಗೆ ಗುರುರಾಜ್ ಕುಲಕರ್ಣಿ ಮುಂದಿನ ಚಿತ್ರಕ್ಕೆ ತಯಾರಿ!

ಮಹಿಳಾ ಪ್ರಧಾನವಾದ ಈ ಚಿತ್ರಕ್ಕೆ ಲತಾಶ್ರೀ ಡಿ.ಸಿ ಅವರೇ ಕಥೆ ಬರೆದಿದ್ದಾರೆ. ಚಿತ್ರಕಥೆ ಅಶೋಕ್ ಕಡಬ ಅವರದು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರ ತಂಡದ ಸುಕೃತ್ “ಕಿರುನಗೆ” ಗೆ ಸಂಗೀತ ನೀಡಲಿದ್ದಾರೆ‌.

ಹಿಳಾ ಪ್ರಧಾನ ಚಿತ್ರವಾಗಿರುವುದರಿಂದ ಕನ್ನಡ ಖ್ಯಾತ ನಟಿಯೊಬ್ಬರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com