ಶಿವರಾಜಕುಮಾರ್ ಮತ್ತು ದಿನಕರ್ ತೂಗುದೀಪ
ಶಿವರಾಜಕುಮಾರ್ ಮತ್ತು ದಿನಕರ್ ತೂಗುದೀಪ

ರಾಜಕುಮಾರ್ ಕುಟುಂಬದ ಯಾರಿಗಾದರೂ ಚಿತ್ರ ಮಾಡುವುದು ಪ್ರತಿಯೊಬ್ಬ ನಿರ್ದೇಶಕನ ಕನಸು!

ನವಗ್ರಹ, ಸಾರಥಿ ಸಿನಿಮಾಗಳಿಗೆ ಹೆಸರಾದ ನಿರ್ದೇಶಕ ದಿನಕರ್ ತೂಗುದೀಪ ಅವರು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಜೊತೆ ಕೈ ಜೋಡಿಸಲಿದ್ದಾರೆ. ನಟ ಮತ್ತು ನಿರ್ದೇಶಕರ ನಡುವಿನ ಈ  ಹೊಸ ಸಹಯೋಗವು ಮನರಂಜನೆ ಮತ್ತು ಪ್ರಯೋಗಾತ್ಮಕವಾಗಿದೆ ಎಂದು ಹೇಳಲಾಗುತ್ತದೆ.
Published on

ನವಗ್ರಹ, ಸಾರಥಿ ಸಿನಿಮಾಗಳಿಗೆ ಹೆಸರಾದ ನಿರ್ದೇಶಕ ದಿನಕರ್ ತೂಗುದೀಪ ಅವರು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಜೊತೆ ಕೈ ಜೋಡಿಸಲಿದ್ದಾರೆ. ನಟ ಮತ್ತು ನಿರ್ದೇಶಕರ ನಡುವಿನ ಈ  ಹೊಸ ಸಹಯೋಗವು ಮನರಂಜನೆ ಮತ್ತು ಪ್ರಯೋಗಾತ್ಮಕವಾಗಿದೆ ಎಂದು ಹೇಳಲಾಗುತ್ತದೆ.

ಬಿಂದ್ಯಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಎಆರ್ ಕೇಶವ್ ಮತ್ತು ಬಿಎಸ್ ಸುಧೀಂದ್ರ ಈ ಚಿತ್ರ ನಿರ್ಮಿಸುತ್ತಿದ್ದಾರೆ.  ಹೊಸ ವರ್ಷದ ದಿನದಂದು  ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ. ಸಮಕಾಲೀನ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಪ್ರಿಯದರ್ಶನಿ ರಾಮಾ ರೆಡ್ಡಿ ಕಥೆ ಬರೆದಿದ್ದಾರೆ.

ಶಿವಣ್ಣ, ಪ್ರಸ್ತುತ ಅರ್ಜುನ್ ಜನ್ಯ ಅವರ 45 ಮತ್ತು ನರ್ತನ್ ಅವರ ಬೈರತಿ ರಣಗಲ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ನಂತರ ದಿನಕರ್ ಚಿತ್ರ ಮಾಡಲಿದ್ದಾರೆ. ಸದ್ಯ  ಸಿನಿಮಾ ಪ್ರೀ ಪ್ರೊಡಕ್ಷನ್‌ನಲ್ಲಿದೆ. ಇನ್ನೂ ತಾರಾಗಣವನ್ನು ಅಂತಿಮಗೊಳಿಸುತ್ತಿರುವ ಚಿತ್ರತಂಡ, ಶಿವರಾತ್ರಿಯಂದು ಶೀರ್ಷಿಕೆ ಬಿಡುಗಡೆ ಮಾಡಲು ಯೋಜಿಸಿದೆ.

ಘೋಷಣೆಗೂ ಮುನ್ನ ಸಿನಿಮಾ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ದಿನಕರ್ ಶಿವಣ್ಣನ ನಿರ್ದೇಶನದ ಬಗ್ಗೆ ಉತ್ಸುಕತೆ ವ್ಯಕ್ತಪಡಿಸಿದ್ದಾರೆ. ಇದು ಶಿವರಾಜಕುಮಾರ್ ಅವರೊಂದಿಗೆ ನನ್ನ ಮೊದಲ ಸಿನಿಮಾವಾಗಿದೆ. ಆದರೆ, ನನ್ನ ಸಿನಿಮಾ ಕೆರಿಯರ್ ಶುರುವಾಗುವ ಮೊದಲೇ ನನಗೆ ಶಿವಣ್ಣನ ಪರಿಚಯವಿದೆ.

ಅವರ ಚಿತ್ರಗಳಾದ ವಾಲ್ಮೀಕಿ ಮತ್ತು ಚಿಗುರಿದ ಕನಸುಗಳಲ್ಲಿ ನಾನು ಸಹಾಯಕ ನಿರ್ದೇಶಕ ಮತ್ತು ಸಹಾಯಕ ಕ್ಯಾಮರಾಮನ್ ಆಗಿ ಚಲನಚಿತ್ರಗಳಿಗೆ ಎಂಟ್ರಿ ಕೊಟ್ಟಿದ್ದೇನೆ. ಪ್ರತಿಯೊಬ್ಬ ನಿರ್ದೇಶಕರು ದೊಡ್ಡಮನೆ ಎಂದು ಕರೆಯಲ್ಪಡುವ ರಾಜ್‌ಕುಮಾರ್ ಅವರ ಕುಟುಂಬದ ಯಾರಿಗಾದರೂ ಚಿತ್ರ ನಿರ್ಮಿಸುವ ಕನಸು ಕಾಣುತ್ತಾರೆ.

ಪುನೀತ್ ರಾಜ್‌ಕುಮಾರ್ ನಿರ್ದೇಶನವನ್ನು ನಾನು ತಪ್ಪಿಸಿಕೊಂಡಿದ್ದೆ, ಈಗ ಶಿವಣ್ಣನ ಚಿತ್ರವನ್ನು ನಿರ್ದೇಶಿಸಲು ನಾನು ಥ್ರಿಲ್ ಆಗಿದ್ದೇನೆ ಎಂದು ದಿನಕರ್ ಅವರು ಶಿವಣ್ಣನ ಅಭಿಮಾನಿಗಳಿಗೆ ಅಚ್ಚರಿಯ ಸುಳಿವು ನೀಡಿದ್ದಾರೆ. ಶಿವಣ್ಣನನ್ನು ವಿಶಿಷ್ಟ ಪಾತ್ರದಲ್ಲಿ ತೋರಿಸಲು ಗಮನಹರಿಸಿದ್ದಾರೆ.

ಈ ನಡುವೆ ವಿರಾಟ್ ಮತ್ತು ಸಂಜನಾ ಆನಂದ್ ಅಭಿನಯದ ಜಯಣ್ಣ ಫಿಲಂಸ್ ನಿರ್ಮಾಣದ ರಾಯಲ್ ಚಿತ್ರ ಬಿಡುಗಡೆಗೆ ದಿನಕರ್ ಸಜ್ಜಾಗುತ್ತಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್‌ನಲ್ಲಿರುವ ಈ ಯೋಜನೆಯು ಏಪ್ರಿಲ್‌ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com