ಸಿಂಧು ಶ್ರೀನಿವಾಸ ಮೂರ್ತಿ ನಿರ್ದೇಶನದ ಚಿತ್ರದಲ್ಲಿ ಕಿಶೋರ್!

'ಆಚಾರ್ & ಕೋ' ನಿರ್ದೇಶಕಿ ಸಿಂಧು ಶ್ರೀನಿವಾಸ ಮೂರ್ತಿ ಅವರ ಮುಂದಿನ ಚಿತ್ರದಲ್ಲೂ ಕಿಶೋರ್ ನಟಿಸಲಿದ್ದಾರೆ. ಮೇ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.
Sindhu Sreenivasa Murthy and Kishor
ಸಿಂಧು ಶ್ರೀನಿವಾಸ ಮೂರ್ತಿ, ಕಿಶೋರ್
Updated on

ಹರ್ಷಿಕಾ ಪೊಣಚ್ಚ ಅವರ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ನಟ ಕಿಶೋರ್ ನಟಿಸುತ್ತಿರುವುದಾಗಿ ಇತ್ತೀಚಿಗೆ ಬಹಿರಂಗವಾಗಿತ್ತು. ಇದೀಗ ಮತ್ತೋರ್ವ ಪ್ರತಿಭಾವಂತ ಮಹಿಳಾ ನಿರ್ದೇಶಕಿಯ ಚಿತ್ರದಲ್ಲಿಯೂ ನಟಿಸಲು ಅವರು ಸಜ್ಜಾಗಿದ್ದಾರೆ.

'ಆಚಾರ್ & ಕೋ' ನಿರ್ದೇಶಕಿ ಸಿಂಧು ಶ್ರೀನಿವಾಸ ಮೂರ್ತಿ ಅವರ ಮುಂದಿನ ಚಿತ್ರದಲ್ಲೂ ಕಿಶೋರ್ ನಟಿಸಲಿದ್ದಾರೆ. ಮೇ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಖಚಿತಪಡಿಸಿರುವ ಕಿಶೋರ್, ಸಿಂಧು ಅವರು ಗಂಭೀರ ಚಿಂತನೆಯ, ಸೂಕ್ಷ್ಮ ಸಂವೇದನೆಯ ವಿಷಯದೊಂದಿಗೆ ಸಿನಿಮಾ ಮಾಡುತ್ತಿದ್ದು, 13 ದಿನಗಳಲ್ಲಿ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದ್ದು, ಸಾವು, ಅಂತ್ಯಸಂಸ್ಕಾರ ಮತ್ತು ಅನುಸರಿಸುವ ಆಚರಣೆಗಳ ವಿಷಯದ ಸುತ್ತ ಸಾಗುತ್ತದೆ. ಇದೊಂದು ವಿಶಿಷ್ಟ ನಿರೂಪಣೆಯಾಗಿದ್ದು, ನಾನು ಅದರ ಭಾಗವಾಗಲು ಪ್ರಮುಖ ಕಾರಣವಾಗಿದೆ. ಚಿತ್ರವು ಪ್ರಸ್ತುತ ಪ್ರಿ-ಪ್ರೊಡಕ್ಷನ್‌ನಲ್ಲಿದ್ದು, ಚಿತ್ರ ತಂಡ ಚಿತ್ರೀಕರಣಕ್ಕೆ ಕುತೂಹಲದಿಂದ ತಯಾರಿ ನಡೆಸುತ್ತಿದೆ ಎಂದು ಅವರು ಹೇಳಿದರು.

ಹರ್ಷಿಕಾ ಅವರ ಚೊಚ್ಚಲ ನಿರ್ದೇಶನದ ಚಿ. ಸೌಜನ್ಯ ಕುರಿತು ಮಾತನಾಡಿದ ಕಿಶೋರ್, "ಶೀರ್ಷಿಕೆ ಸಾಕಷ್ಟು ಅರ್ಥಪೂರ್ಣವಾಗಿದೆ ಮತ್ತು ನಾವು ಅದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಹೆಸರು ಮತ್ತು ಕಥೆ ಎರಡಕ್ಕೂ ಚಿತ್ರತಂಡ ನ್ಯಾಯ ಸಲ್ಲಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.

ಪುರುಷರಲ್ಲಿ ಸಾಮಾನ್ಯವಾಗಿ 'ಈಗೋ:

ಈ ಹಿಂದೆ ನಿರ್ದೇಶಕಿ ಸುಮನಾ ಕಿತ್ತೂರ್ ಅವರೊಂದಿಗೆ ಕೆಲಸ ಮಾಡಿದ ಕಿಶೋರ್, ಮಹಿಳಾ ನಿರ್ದೇಶಕರೊಂದಿಗೆ ಪುರುಷ ನಟರ ಸಹಯೋಗ ಕುರಿತು ಪ್ರತಿಕ್ರಿಯಿಸಿದರು. ಇದು ತುಂಬಾ ಸಾಮಾನ್ಯವಲ್ಲ, ಪುರುಷ ನಟರಲ್ಲಿ ಸಾಮಾನ್ಯವಾಗಿ 'ಈಗೋ' ಇರುತ್ತದೆ. ಆದರೆ ಸೃಜನಾತ್ಮಕ ಕೆಲಸದಲ್ಲಿ ಲಿಂಗವು ಅಪ್ರಸ್ತುತ ಎಂದು ನಾನು ಭಾವಿಸುತ್ತೇನೆ. ಮಹಿಳಾ ನಿರ್ದೇಶಕಿ ಕೂಡಾ ಪುರುಷನಂತೆಯೇ ಸಮರ್ಥಳು. ಅವರ ದೃಷ್ಟಿಕೋನವು ವಿಭಿನ್ನವಾಗಿರಬಹುದು, ಆದರೆ ಅವರ ಕಥೆ ಹೇಳುವಿಕೆ ಅನನ್ಯವಾಗಿರುತ್ತದೆ ಎಂದು ಹೇಳಿದರು.

Sindhu Sreenivasa Murthy and Kishor
ಪ್ರೇಕ್ಷಕರು ಥಿಯೇಟರ್ ಗೆ ಬರುವಂತೆ ಮಾಡುವಲ್ಲಿ ನಾವು ಸೋಲುತ್ತಿದ್ದೇವೆ: ನಟ ಕಿಶೋರ್

ಫೋಟೋಶೂಟ್‌ ಇಷ್ಟಪಡಲ್ಲ: ನಾನು ಕೇವಲ ಪ್ರಚಾರಕ್ಕಾಗಿ ಫೋಟೋಶೂಟ್‌ ಮಾಡಿಸಿಕೊಳ್ಳಲು ಇಷ್ಟಪಡಲ್ಲ. ಆದರೆ ಅದರ ಅಗತ್ಯವಿಲ್ಲದೆ ನನಗೆ ಕೆಲಸ ಬರುತ್ತಿರುವುದು ನನ್ನ ಅದೃಷ್ಟ. ನಾನು ನಾನಾಗಿಯೇ ಇರಲು ಇಷ್ಟಪಡುತ್ತೇನೆ. ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿಗಳು ಈಗ ಹೀರೋಗಳಾಗುತ್ತಿದ್ದಾರೆ. ಸಿನಿಮಾ ಕಲಿತ, ನಟನೆಯಲ್ಲಿ ತರಬೇತಿ ಪಡೆದ ಅಥವಾ ರಂಗಭೂಮಿಯಿಂದ ಬಂದಂತಹ ನಮ್ಮಂತಹವರಿಗೆ ಛಾಪು ಮೂಡಿಸುವುದು ಹೆಚ್ಚು ಕಷ್ಟಕರವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಒಂದೇ ದಾರಿ ಎಂದು ಭಾಸವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com