
ಮಂಗಳೂರು: ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುವ ಕಾಂತಾರ ಫ್ರೀಕ್ವೆಲ್ ಸಿನಿಮಾ ಬಗ್ಗೆ ವೀಕ್ಷಕರಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ. ಕಾಂತಾರ 1 ಸಿನಿಮಾ ನೋಡಲು ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.
ಇದರ ಮಧ್ಯೆ ನಟ ರಿಷಬ್ ಶೆಟ್ಟಿ ಮಂಗಳೂರಿನಲ್ಲಿ ತಡರಾತ್ರಿ ಪಂಜುರ್ಲಿ ನೇಮಕ್ಕೆ ಬಂದು ಬೇಡಿಕೊಂಡಿದ್ದಾರೆ. ರಾತ್ರಿ 11 ಗಂಟೆಯಿಂದ ನಸುಕಿನ 4 ಗಂಟೆವರೆಗೂ ವಾರಾಹಿ ಪಂಜುರ್ಲಿ ದೈವದ ವಾರ್ಷಿಕ ಉತ್ಸವದಲ್ಲಿ ರಿಷಬ್ ಭಾಗಿಯಾಗಿದ್ದಾರೆ.
ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ಕುಟುಂಬ ಸಮೇತ ರಿಷಬ್ ಭಾಗಿಯಾಗಿದ್ದರು. ಉತ್ಸವದ ಕೊನೆಯಲ್ಲಿ ವಾರಾಹಿ ಪಂಜುರ್ಲಿ ದೈವದ ಬಳಿ ರಿಷಬ್ ಶೆಟ್ಟಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್‌ಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಸಂಚು ಮಾಡುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ? ನೀನು ನಂಬಿದ ದೈವ ಕೈಬಿಡಲ್ಲ ಎಂದು ದೈವ ಆಶ್ವಾಸನೆ ನೀಡಿದೆ. ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಸಮಯದಲ್ಲಿ ಒಳ್ಳೆಯದು ಮಾಡುತ್ತೇನೆ ಎಂದು ದೈವ ಆಶ್ವಾಸನೆ ನೀಡಿದೆ. ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವದ ಅಭಯ ನೀಡಿದೆ.
ʻಕಾಂತಾರ 1ʼ ಸಿನಿಮಾದ ಶೂಟಿಂಗ್ ವೇಳೆ ರಿಷಬ್ ಶೆಟ್ಟಿ ಒಂದಿಲ್ಲೊಂದು ಸಮಸ್ಯೆ ಎದುರಿಸಿದ್ದಾರೆ. ವಾಹನ ಅಪಘಾತ, ಅಲ್ಲದೇ ಶೂಟಿಂಗ್‌ಗೆ ಸ್ಫೋಟಕ ವಸ್ತುಗಳನ್ನು ಬಳಿಸಿದ ಆರೋಪ ರಿಷಬ್ ಶೆಟ್ಟಿ ವಿರುದ್ಧ ಕೇಳಿ ಬಂದಿತ್ತು. ಸ್ಪೋಟಕ ವಸ್ತುಗಳಿಂದ ವನ್ಯಜೀವಿಗಳು ವಿಚಲಿತ ಆಗಲಿವೆ ಎಂದು ಆರೋಪಿಸಲಾಗಿತ್ತು.
Advertisement