'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರ ಕಳೆದುಕೊಂಡ ಶ್ರೀನಿಧಿ ಶೆಟ್ಟಿ: ಸಾಯಿ ಪಲ್ಲವಿ ಬಗ್ಗೆ ಹೇಳಿದ್ದು ಏನು?

ಸದ್ಯ HIT: The Third Case ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಶ್ರೀನಿಧಿ ಶೆಟ್ಟಿ, ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಮಾತನಾಡುತ್ತಾ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
 Srinidhi, Sai Pallavi
ಶ್ರೀನಿಧಿ ಶೆಟ್ಟಿ, ಸಾಯಿ ಪಲ್ಲವಿ
Updated on

ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ-ಸೀತೆಯಾಗಿ ಅಭಿನಯಿಸುತ್ತಿರುವ ನಿತೇಶ್ ತಿವಾರಿ ಅವರ 'ರಾಮಾಯಣ' ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸೀತಾ ಪಾತ್ರ ಸಾಯಿ ಪಲ್ಲವಿಗೆ ಹೋಗುವ ಮುನ್ನಾ ಆ ಪಾತ್ರಕ್ಕಾಗಿ ನನ್ನ ಲುಕ್ ಟೆಸ್ಟ್ ನಡೆದಿತ್ತು ಎಂದು ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ಬಹಿರಂಗಪಡಿಸಿದ್ದಾರೆ.

ಸದ್ಯ HIT: The Third Case ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಶ್ರೀನಿಧಿ ಶೆಟ್ಟಿ, ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಮಾತನಾಡುತ್ತಾ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ರಾಮಾಯಣ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿರುವುದರಿಂದ ಆ ವಿಚಾರವನ್ನು ನಾನು ಹೇಳಬಹುದು ಅಂದುಕೊಳ್ಳುತ್ತೇನೆ. ಹೌದು. ಸೀತೆ ಪಾತ್ರಕ್ಕಾಗಿ ಭೇಟಿಯಾಗಿ ಸ್ಕ್ರೀನ್ ಟೆಸ್ಟ್ ಮಾಡಿದ್ದೇನೆ. ಮೂರು ಸೀನ್‌ಗಳನ್ನು ಉತ್ತಮವಾಗಿ ಸಿದ್ದಪಡಿಸಿದ್ದು ನೆನಪಿದೆ. ಅವರಿಗೂ ಉತ್ತಮ ಪ್ರತಿಕ್ರಿಯೆ ಮೂಡಿ, ಇಷ್ಟವಾಗಿತ್ತು ಎಂದು ತಿಳಿಸಿದರು.

ಯಶ್ ರಾಮಾಯಣ ಚಿತ್ರದ ಭಾಗವಾಗಿದ್ದಾರೆ ಎಂದು ಕೇಳಿದ್ದೆ. ಆದೇ ಸಮಯದಲ್ಲಿ ಕೆಜಿಎಫ್ 2 ಬಿಡುಗಡೆಯಾಗಿತ್ತು. ಈ ಜೋಡಿ ಹಿಟ್ ಆಗಿತ್ತು, ಜನರು ಮೆಚ್ಚಿಕೊಂಡಿದ್ದರು. ಆದಾದ ಕೇವಲ ಒಂದು ಅಥವಾ ಎರಡು ತಿಂಗಳಲ್ಲಿ ರಾಮಾಯಮ ಆಡಿಷನ್ ಸಂದರ್ಭದಲ್ಲಿ ಇದೆಲ್ಲಾ ನಡೆದಿತ್ತು. ಹಾಗಾಗಿ ಯಶ್ ರಾವಣನ ಪಾತ್ರ ಮಾಡಲಿದ್ದು, ನಾನು ಸೀತೆ ಪಾತ್ರ ಮಾಡುತ್ತೇನೆ ಅಂದುಕೊಂಡಿದ್ದೆ. ಇದರಲ್ಲಿ ನಾವಿಬ್ಬರೂ ವಿರುದ್ಧ ಪಾತ್ರಗಳಲ್ಲಿ ಅಭಿನಯಿಸಬೇಕಿತ್ತು. ಇದು ಜನರಿಗೆ ಎಲ್ಲೋ ಇಷ್ಟವಾಗದೆ ಇರಬಹುದು ಅಂತಾ ಎಲ್ಲೋ ನಾನು ಯೋಚಿಸಿದೆ. ನಾನು ಪಾತ್ರ ಕಳೆದುಕೊಳ್ಳಲು ಅದು ಇರಬಹುದು ಅಥವಾ ಇಲ್ಲದಿರಬಹುದು ಎಂದರು.

 Srinidhi, Sai Pallavi
ನಿತೇಶ್ ತಿವಾರಿ ರಾಮಾಯಣದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ: ರಾವಣನ ಪಾತ್ರಕ್ಕೆ ಯಶ್ ಫಿಕ್ಸ್; ಶೂಟಿಂಗ್ ಗೆ 15 ದಿನ ಡೇಟ್ಸ್

ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಹೇಗೆ ಸೂಕ್ತ ಎಂಬ ಬಗ್ಗೆ ಮಾತನಾಡಿದ ಶ್ರೀನಿಧಿ, ಸಾಯಿ ಪಲ್ಲವಿ ಉತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ. ನಾನು ಅವರನ್ನು ಸಿನಿಮಾದಲ್ಲಿ ಸೀತೆಯಾಗಿ ನೋಡಲು ಇಷ್ಟಪಡುತ್ತೇನೆ. ನಾನು ಯಾವಾಗಲೂ ಹೇಳುವ ಹಾಗೆ - ಏನಾದರೂ ಕೆಲಸ ಮಾಡಿದಾಗ ಅದು ಅದ್ಭುತವಾಗಿರುತ್ತದೆ. ಏನಾದರೂ ಆಗದಿದ್ದರೆ, ಅದು ಇನ್ನೂ ಅದ್ಭುತವಾಗಿರುತ್ತದೆ. ಏಕೆಂದರೆ ಹೊಸ ಬಾಗಿಲುಗಳು ನಿಮಗಾಗಿ ತೆರೆದುಕೊಳ್ಳುತ್ತವೆ ಎಂದರು.

ನಾನಿ ಜೊತೆಗೆ ಶ್ರೀ ನಿಧಿ ಶೆಟ್ಟಿ ಅಭಿನಯಿಸಿರುವ HIT: The Third Case ಚಿತ್ರವು ಮೇ 1, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com