
ಕಾಟೇರ ಸಿನಿಮಾ ನಂತರ ಆರಾಧನಾ ರಾಮ್ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಬಹಳ ಗ್ಯಾಪ್ ಬಳಿಕ ಆರಾಧನಾ ಎರಡನೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯನ್ ಸಿನಿಮಾ ನೆಕ್ಸ್ಟ್ ಲೆವೆಲ್ ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿಯಾಗಿದ್ದಾರೆ.
ತರುಣ್ ಸ್ಡುಡಿಯೋಸ್ ಬ್ಯಾನರ್‌ನಲ್ಲಿ ತರುಣ್ ಶಿವಪ್ಪ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸುತ್ತಿದ್ದು ಶೀರ್ಷಿಕೆ, ಕಾಂಬಿನೇಷನ್ ಎಲ್ಲವೂ ಘೋಷಣೆಯಾದಾಗಲೇ ಹೊಸ ವೈಬ್ ಸೃಷ್ಟಿಸಿತ್ತು.
ತಮ್ಮ ಮುಂದಿನ ಯೋಜನೆಗೆ ಸಹಿ ಹಾಕುವ ಮೊದಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯ್ದಿದ್ದಕ್ಕೂ ಸಾರ್ಥಕವಾಯಿತು, ಅದ್ಭುತ ಕತೆ ಸಿಕ್ಕಿದೆ ಎಂದು ಆರಾಧನಾ ಹೇಳುತ್ತಾರೆ. ಈ ಒಂದೂವರೆ ವರ್ಷಗಳು ಸುಲಭವಾಗಿರಲಿಲ್ಲ. ಭಾವನೆಗಳ ರೋಲರ್ ಕೋಸ್ಟರ್ ಆಗಿತ್ತು ಎಂದು ಆರಾಧನಾ ಹೇಳಿದ್ದಾರೆ. ಆದರೆ ನಾನು ಯಾವಾಗಲೂ ಸರಿಯಾದ ಸ್ಕ್ರಿಪ್ಟ್‌ಗಾಗಿ ಕಾಯುವುದರಲ್ಲಿ ನಂಬಿಕೆ ಇಟ್ಟಿದ್ದೆ. ಕಾಟೇರಾ ನಂತರ, ನಿರೀಕ್ಷೆಗಳು ಹೆಚ್ಚಿದ್ದವು. ನಾನು ಆಯ್ಕೆಮಾಡಿದ್ದು ಸರಿ ಎಂದು ಭಾವಿಸದ ಹೊರತು ನಾನು ಒಂದು ಹೆಜ್ಜೆ ಇಡಲು ಬಯಸಲಿಲ್ಲ. ನನಗೆ ಕೆಲವು ಆಫರ್‌ಗಳು ಬಂದವು, ಆದರೆ ಸ್ಕ್ರಿಪ್ಟ್ ಇಷ್ಟವಾಗಲಿಲ್ಲ ಎಂದಿದ್ದಾರೆ.
ಚೊಚ್ಚಲ ಚಿತ್ರದಿಂದ ಸಂಪೂರ್ಣವಾಗಿ ಭಿನ್ನವಾದ ಪಾತ್ರದಲ್ಲಿ ಆರಾಧನಾ ಕಾಣಿಸಿಕೊಳ್ಳಲಿದ್ದಾರೆ. ಅವರು ಮುಖ್ಯಮಂತ್ರಿಯ ಮಗಳ ಪಾತ್ರವನ್ನು ನಿರ್ವಹಿಸುತ್ತಾರೆ. ಕಾಟೇರಾದಲ್ಲಿನ ಹಳ್ಳಿ ಹುಡುಗಿಯ ಪಾತ್ರಕ್ಕಿಂತ ಬಹಳ ಭಿನ್ನವಾದ ಗ್ಲಾಮರಸ್, ಆಧುನಿಕ ಪಾತ್ರವಾಗಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ವಿಶಿಷ್ಟ ನಿರೂಪಣಾ ಶೈಲಿಗೆ ಹೆಸರುವಾಸಿಯಾದ ನಿರ್ದೇಶಕ ಅರವಿಂದ್ ಕೌಶಿಕ್, ಉಪೇಂದ್ರ ಅವರ ವಿಭಿನ್ನ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ಬರೆದಿದ್ದಾರೆ. ಇಡೀ ಚಿತ್ರದಲ್ಲಿ ಉಪೇಂದ್ರ ಕಾಂಬಿನೇಶನ್‌ನಲ್ಲಿ ನನ್ನ ಪಾತ್ರ ಹೈಲೈಟ್ ಆಗುತ್ತದೆ. ಉಪೇಂದ್ರ ಅವರ ಜೊತೆ ಸಿನಿಮಾ ಮಾಡಲು ನಾನು ಉತ್ಸುಕಳಾಗಿದ್ದೇನೆ ಎಂದು ಆರಾಧನಾ ಹೇಳಿದ್ದಾರೆ.
ಆರಾಧನಾ ತಾಯಿ ಮಾಲಾಶ್ರೀ ಕಥೆ ಕೇಳಿದ ನಂತರ ತುಂಬಾ ಪ್ರಭಾವಿತರಾದರು. ಕತೆ ಕೇಳಿದ ನಂತರ ನನ್ನ ತಾಯಿಗೆ ಇದ್ದ ಉತ್ಸಾಹ ಬೇರೆಯೇ ಆಗಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಅರವಿಂದ್ ಕೌಶಿಕ್ ಅವರಿಗಿರುವ ಉತ್ಸಾಹ ಮತ್ತು ಸ್ಪಷ್ಟತೆ ಬಗ್ಗೆ ನನ್ನ ತಾಯಿಗೆ ಚೆನ್ನಾಗಿ ತಿಳಿದಿದ್ದಾರೆ. ನಾನು ಸುರಕ್ಷಿತ ಕೈಯಲ್ಲಿದ್ದೇನೆ ಎಂದು ನನ್ನ ತಾಯಿ ಸಂತೋಷಪಡುತ್ತಾರೆ ಎಂದಿದ್ದಾರೆ ಆರಾಧನಾ. ಇವತ್ತಿನ ಪೀಳಿಗೆಗೆ ಉಪೇಂದ್ರ ಅವರು ಸಿನಿಮಾ ಮಾಡಿದರೆ ಹೇಗಿರುತ್ತದೆ ಆ ರೀತಿ ಚಿತ್ರದಲ್ಲಿ ಅವರ ಪಾತ್ರವಿದೆ.
Advertisement