'ಸು ಫ್ರಮ್ ಸೋ' ಬಜೆಟ್ ಬಗ್ಗೆ ಊಹಾಪೋಹ; ಖರ್ಚಾಗಿದ್ದು ಎಷ್ಟು, ಗಳಿಸಿದ್ದೆಷ್ಟು?: ರಾಜ್ ಬಿ ಶೆಟ್ಟಿ ಸ್ಪಷ್ಟನೆ

ಕನ್ನಡದಲ್ಲಿ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿ ಆಗಸ್ಟ್ 1 ರಂದು ಬಿಡುಗಡೆ ಮಾಡಲಾಯಿತು. ಚಿತ್ರದ ಜನಪ್ರಿಯತೆ ಹೆಚ್ಚಾದಂತೆ, 'ಬಜೆಟ್' ಬಗ್ಗೆ ಚರ್ಚೆಗಳು ನಡೆಯುತ್ತಿವೆ.
Raj B Shetty in Su From So
ಸು ಫ್ರಮ್ ಸೋ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ
Updated on

ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಲಾದ ಮತ್ತು ಜೆಪಿ ತುಮಿನಾಡ್ ನಿರ್ದೇಶಿಸಿದ, 'ಸು ಫ್ರಮ್ ಸೋ' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟವನ್ನು ಮುಂದುವರೆಸಿದೆ. ಕನ್ನಡ ಅಷ್ಟೇ ಅಲ್ಲದೆ ಇತರ ಭಾಷೆಗಳಲ್ಲಿಯೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಲಭ್ಯವಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕನ್ನಡದಲ್ಲಿ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿ ಆಗಸ್ಟ್ 1 ರಂದು ಬಿಡುಗಡೆ ಮಾಡಲಾಯಿತು. ತೆಲುಗು ಆವೃತ್ತಿ ಆಗಸ್ಟ್ 8 ರಂದು ತೆರೆಗೆ ಬರಲಿದೆ. ಚಿತ್ರದ ಜನಪ್ರಿಯತೆ ಹೆಚ್ಚಾದಂತೆ, ಅದರ 'ಬಜೆಟ್' ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವು ಮಾಧ್ಯಮಗಳು ಈ ಚಿತ್ರವನ್ನು ಕೇವಲ ₹1.5 ಕೋಟಿಗೆ ನಿರ್ಮಿಸಲಾಗಿದೆ ಎಂದು ಹೇಳಿವೆ.

ರಾಜ್ ಬಿ ಶೆಟ್ಟಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ತೆಲುಗು ಮಾಧ್ಯಮದೊಂದಿಗಿನ ಸಂವಾದದ ಸಂದರ್ಭದಲ್ಲಿ ಚಿತ್ರದ ಬಜೆಟ್ ಬಗ್ಗೆ ಮಾತನಾಡಿದ್ದಾರೆ. 'ನಮ್ಮ ಬಜೆಟ್ ₹1.5 ಕೋಟಿಗಿಂತ ಹೆಚ್ಚಾಗಿದೆ. ನಾವು ಸುಮಾರು 30 ವೃತ್ತಿಪರ ರಂಗಭೂಮಿ ನಟರೊಂದಿಗೆ 50 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ಮಾಡಿದ್ದೇವೆ. ಗರುಡ ಗಮನ ವೃಷಭ ವಾಹನ ಕೂಡ ₹1.8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಈ ಚಿತ್ರಕ್ಕೆ ಇನ್ನೂ ಹೆಚ್ಚಿನ ಅಗತ್ಯವಿತ್ತು' ಎಂದರು.

ಸು ಫ್ರಮ್ ಸೋ ಚಿತ್ರದ ನಿರ್ಮಾಣ ಬಜೆಟ್ ₹4.5 ಕೋಟಿ ಆಗಿದ್ದು, ಪ್ರಚಾರ ಮತ್ತು ಇತರ ಖರ್ಚುಗಳಿಗಾಗಿ ಹೆಚ್ಚುವರಿಯಾಗಿ ₹1 ಕೋಟಿ ಖರ್ಚು ಮಾಡಲಾಗಿದೆ. ಒಟ್ಟು ವೆಚ್ಚ ಸುಮಾರು ₹5.5 ಕೋಟಿಗೆ ತಲುಪಿದೆ ಎಂದು ಅವರು ಬಹಿರಂಗಪಡಿಸಿದರು.

Raj B Shetty in Su From So
ಜನ ನಮ್ಮ ಕಪಾಳಕ್ಕೆ ಹೊಡೆದಂತಾಯಿತು; 'ಸು ಫ್ರಂ ಸೋ' ಪಾರ್ಟ್ 2 ಮಾಡುವುದು ನಮ್ಮ ನೈತಿಕತೆಗೆ ವಿರುದ್ಧ: ರಾಜ್ ಬಿ ಶೆಟ್ಟಿ

ಚಿತ್ರದ ಲೆಕ್ಷನ್ ಬಗ್ಗೆ ಹೇಳುವುದಾದರೆ, 'ಸು ಫ್ರಮ್ ಸೋ' ಚಿತ್ರವು ಬಿಡುಗಡೆಯಾದ ಮೊದಲ ಹತ್ತು ದಿನಗಳಲ್ಲಿ ಕರ್ನಾಟಕದಲ್ಲಿ ₹34 ಕೋಟಿ ಗಳಿಸಿದೆ ಮತ್ತು ವಿದೇಶಗಳಲ್ಲಿ ₹5 ಕೋಟಿ ಗಳಿಸಿದೆ. ಈಗ 13 ನೇ ದಿನದಲ್ಲಿ, ಚಿತ್ರವು ₹60 ಕೋಟಿ ಗಳಿಕೆಯತ್ತ ಸಾಗುತ್ತಿದೆ ಎಂದು ರಾಜ್ ಹಂಚಿಕೊಂಡಿದ್ದಾರೆ.

ಸೋಮೇಶ್ವರದಿಂದ ಬಂದ ಸುಲೋಚನಾ ಕಥೆಯು ಕರಾವಳಿಯ ಅತೀಂದ್ರಿಯತೆಯಲ್ಲಿ ಬೇರೂರಿದೆ. ಆದರೆ, ಕ್ಲೀಷೆಗಳಿಂದ ದೂರವಿದೆ. ಅಶೋಕ ಎಂಬ ಯುವಕನಿಗೆ ಸುಲೋಚನಾ ಎಂಬ ದೆವ್ವ ಆವರಿಸಿದೆ ಎಂಬ ವದಂತಿ ಮಾರ್ಲುರು ಗ್ರಾಮವನ್ನು ತಲೆಕೆಳಗಾಗಿ ಮಾಡುವ ವಿಲಕ್ಷಣ, ಹಾಸ್ಯ ಮತ್ತು ಅಲೌಕಿಕ ಘಟನೆಗಳ ಸರಣಿಯನ್ನು ಬಿಚ್ಚಿಡುತ್ತದೆ.

ನಿರ್ದೇಶಕ ಜೆಪಿ ತುಮಿನಾಡ್ ಅವರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರೊಂದಿಗೆ ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಮೈಮ್ ರಾಮದಾಸ್, ಪುಷ್ಪರಾಜ್ ಬೋಳಾರ್ ಮತ್ತು ಇನ್ನೂ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಚಂದ್ರಶೇಖರನ್ ಅವರ ಛಾಯಾಗ್ರಹಣ, ಸುಮೇಧ್ ಕೆ ಅವರ ಸಂಗೀತ ಸಂಯೋಜನೆ ಮತ್ತು ಸಂದೀಪ್ ತುಳಸಿದಾಸ್ ಅವರ ಹಿನ್ನೆಲೆ ಸಂಗೀತವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com