ಅನಿಮೇಷನ್ ಸಿನಿಮಾ ದಾಖಲೆ ಮುರಿದ Mahavatar Narsimha: 150 ಕೋಟಿ ರೂ ಗಳಿಸಿ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ!

ಇದು ಈಗಾಗಲೇ ಹನುಮಾನ್ ಮತ್ತು ಸ್ಪೈಡರ್ ಮ್ಯಾನ್ ದಾಖಲೆಯನ್ನು ಮುರಿದು ಭಾರತದಲ್ಲಿ ಅತಿ ಹೆಚ್ಚು ಗಳಿಕೆಯ ಅನಿಮೇಟೆಡ್ ಚಿತ್ರವಾಗಿದೆ.
Mahavatar Narsimha
ಮಹಾವತಾರ ನರಸಿಂಹ
Updated on

ಜುಲೈ 25ರಂದು ಬಿಡುಗಡೆಯಾದ ನಂತರ ಭಾರತೀಯ ಅನಿಮೇಟೆಡ್ ಮಹಾಕಾವ್ಯ ಮಹಾವತಾರ ನರಸಿಂಹ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅದ್ಭುತ ಓಟವನ್ನು ಮುಂದುವರೆಸಿದೆ. 15 ದಿನಗಳಲ್ಲಿ ಭಗವಾನ್ ನರಸಿಂಹನ ಪುರಾಣವನ್ನು ಆಧರಿಸಿದ ಈ ಚಿತ್ರವು ವಿಶ್ವಾದ್ಯಂತ 150 ಕೋಟಿ ಗಳಿಸಿದೆ ಎಂದು ಚಲನಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. ಇದು ಈಗಾಗಲೇ ಹನುಮಾನ್ ಮತ್ತು ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್ ದಾಖಲೆಯನ್ನು ಮುರಿದು ಭಾರತದಲ್ಲಿ ಅತಿ ಹೆಚ್ಚು ಗಳಿಕೆಯ ಅನಿಮೇಟೆಡ್ ಚಿತ್ರವಾಗಿದೆ.

ಮಹಾವತಾರ ನರಸಿಂಹ ಬಿಡುಗಡೆಯಾದ ನಂತರ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಗಳಿಸಿತು. 2 ವಾರಗಳ ಯಶಸ್ವಿ ಪ್ರದರ್ಶನದ ನಂತರ ಹಿಂದಿ ನಿವ್ವಳ ಒಟ್ಟು 84.44 ಕೋಟಿಗೆ ತಲುಪಿದೆ. ವಾರಾಂತ್ಯದಲ್ಲಿ ಭಾಗಶಃ ರಜೆಯೊಂದಿಗೆ ಹೊಂದಿಕೆಯಾದ ಕಾರಣ ಚಿತ್ರದ ಗಳಿಕೆ ಹೆಚ್ಚಾಗಿದೆ.

ಈ ಚಿತ್ರವು ವಿಶ್ವಾದ್ಯಂತ 150 ಕೋಟಿ ಗಳಿಸಿದೆ ಎಂದು ಘೋಷಿಸಿದ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಬರೆದಿದೆ: ದೈವಿಕ ಜ್ಯೋತಿಯನ್ನು ಅನಾವರಣಗೊಳಿಸುತ್ತಿದೆ. ಮಹಾವತಾರ ನರಸಿಂಹ ಆಗಸ್ಟ್ 8ರವರೆಗೆ ವಿಶ್ವಾದ್ಯಂತ 150 ಕೋಟಿ+ ಗಳಿಕೆಯನ್ನು ದಾಟಿದೆ. ಎಲ್ಲೆಡೆ ಪರದೆಗಳಲ್ಲಿ ಧಗಧಗಿಸುತ್ತಿದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ದೈವಿಕ ಚಿತ್ರವನ್ನು ವೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ.

Mahavatar Narsimha
Mahavatar Narsimha ಬಾಕ್ಸ್ ಆಫಿಸ್ ಅಬ್ಬರ; ಹಿಂದಿಯಲ್ಲೇ 100 ಕೋಟಿ ಗಳಿಕೆಯತ್ತ ದಾಪುಗಾಲು!

ನಿರ್ಮಾಪಕರಾದ ಕ್ಲೀಮ್ ಪ್ರೊಡಕ್ಷನ್ಸ್ ಮತ್ತು ನಿರೂಪಕರಾದ ಹೊಂಬಾಳೆ ಫಿಲ್ಮ್ಸ್ ಈಗ ಚಿತ್ರವನ್ನು ಭಾರತ ಸೇರಿ ವಿಶ್ವಾದ್ಯಂತ 200 ಕೋಟಿ ಗಳಿಸುವ ಗುರಿಯನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com