
ನವದೆಹಲಿ: ಸಿನಿಮಾ ರಂಗದಲ್ಲಿ ಅದ್ಭುತ 50 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಟ ರಜನಿಕಾಂತ್ ಅವರನ್ನು ಅಭಿನಂದಿಸಿದ್ದಾರೆ. ಇತ್ತೀಚೆಗಷ್ಟೇ ನಟನ ಬಹುನಿರೀಕ್ಷಿತ ಚಿತ್ರ 'ಕೂಲಿ' ಬಿಡುಗಡೆಯಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, 'ಅವರ ಪ್ರಯಾಣವು ಸಾಂಪ್ರದಾಯಿಕವಾಗಿದೆ. ಅವರ ವೈವಿಧ್ಯಮಯ ಪಾತ್ರಗಳು ಪೀಳಿಗೆಯಿಂದ ಪೀಳಿಗೆಗೆ ಜನರ ಮನಸ್ಸಿನಲ್ಲಿ ಶಾಶ್ವತವಾದ ಪ್ರಭಾವ ಬೀರಿವೆ. ಮುಂಬರುವ ದಿನಗಳಲ್ಲಿ ಅವರಿಗೆ ನಿರಂತರ ಯಶಸ್ಸು ಮತ್ತು ಉತ್ತಮ ಆರೋಗ್ಯ ಸಿಗಲೆಂದು ಹಾರೈಸುತ್ತೇನೆ' ಎಂದು ಹಾರೈಸಿದ್ದಾರೆ.
ಗೌರವಾನ್ವಿತ ಮೋದಿ ಜಿ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಬಹಳ ಹಿಂದಿನಿಂದಲೂ ಅತ್ಯಂತ ಗೌರವದಿಂದ ಕಾಣುತ್ತಿರುವ ನಾಯಕನಿಂದ ಅಭಿನಂದನೆ ಸ್ವೀಕರಿಸುವುದು ನಿಜಕ್ಕೂ ಗೌರವದ ಸಂಗತಿ. ನಿಮ್ಮ ದಯೆಯ ಮಾತುಗಳಿಗೆ ಧನ್ಯವಾದಗಳು. ಜೈ ಹಿಂದ್ ಎಂದು ರಜಿನಿಕಾಂತ್ ಮೋದಿಯವರ ಟ್ವೀಟ್ ಹಂಚಿಕೊಂಡು ಹೇಳಿದ್ದಾರೆ.
ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ತಾರೆಯಾಗಿರುವ ರಜನಿಕಾಂತ್ (74), ತಮ್ಮದೇ ಆದ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ರಜಿನಿಕಾಂತ್ ನಟನೆಯ ಕೂಲಿ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿದ್ದು, ಶುಕ್ರವಾರ (ಆ.14) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಟನಾಗಿ ಅವರ 171ನೇ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಸತ್ಯರಾಜ್, ಶ್ರುತಿ ಹಾಸನ್, ಉಪೇಂದ್ರ, ಸೌಬಿನ್ ಶಾಹಿರ್ ಮತ್ತು ನಾಗಾರ್ಜುನ, ಪೂಜಾ ಹೆಗ್ಡೆ ಮತ್ತು ಆಮಿರ್ ಖಾನ್ ಮುಂತಾದವರು ನಟಿಸಿದ್ದಾರೆ.
Advertisement