

ಬೆಂಗಳೂರು: ಬಿಗ್ ಬಾಸ್ ಹೌಸ್ ‘ವಿಲನ್’ ಹೌಸ್ ಆಗಿ ಬದಲಾಗಿದ್ದು, ಈ ನಡುವಲ್ಲೇ ಮನೆಯಲ್ಲಿ ಕೆಲ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ.
ಬಿಗ್ ಬಾಸ್ ಮನೆಯಲ್ಲಿ ಬೆಸ್ಟ್ ಫ್ರೆಂಡ್ ಆಗಿದ್ದ ಗಿಲ್ಲಿಯನ್ನೇ ಕಾವ್ಯಾ ಶೈವ ಅವರು ನಾಮಿನೇಟ್ ಮಾಡಿ, ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಕಾವ್ಯ ಅವರ ನಾಮಿನೇಷನ್ ನಿರ್ಧಾರ ಮನೆಯಲ್ಲಿ ಕೋಲಾಹಲ ಸೃಷ್ಟಿಸಿದೆ.
ಕಾವ್ಯ ಅವರು ರಜತ್ ಹಾಗೂ ಗಿಲ್ಲಿಯನ್ನು ನಾಮಿನೇಟ್ ಮಾಡಿದ್ದಾರೆ. ʻಎಲ್ಲೋ ಒಂದೇ ಕಡೆ ಸೀಮಿತ ಆಗಿಬಿಟ್ರೇನೊ ಅನ್ನಿಸುತ್ತಿದೆʼ ಎಂದು ಹೇಳಿದ್ದಾರೆ.
ಇದಕ್ಕೆ ರಜತ್ ಕೋಪಗೊಂಡು, ಈ ಮನೆಯಲ್ಲಿ ʻತಮಾಷೆನೇ ಮಾಡಬಾರದಾ?ತಲೆ ಏನಾದರೂ ಕೆಟ್ಟು ಹೋಗಿದ್ಯಾʼ ಎಂದು ಕೂಗಾಡಿದ್ದಾರೆ. ಇದೇ ವೇಳೆ ಧ್ರುವಂತ್ ಹಾಗೂ ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ.
ಧ್ರುವಂತ್ ಅವರು ಇದೇನು ಲಾಸ್ಟ್ ಸೀಸನ್ ಅಂದುಕೊಂಡಿದ್ದೀಯಾ? ಗಿಲ್ಲಿ ಹತ್ರ ಇಟ್ಟುಕೋ, ನಾನು ಧ್ರುವಂತ್ ಎಂದು ಹೇಳಿದ್ದಾರೆ. ಇದು ರಜತ್‌ಗೆ ಕೋಪ ತರಿಸುವಂತೆ ಮಾಡಿದ್ದು, ಧ್ರುವಂತ್ ಮೇಲೆ ಹರಿಹಾಯ್ದಿದ್ದಾರೆ. ಈ ವೇಳೆ ಇಬ್ಬರು ಹೊಡೆದಾಡಲು ಹೋಗಿದ್ದು, ಮನೆ ಮಂದಿ ಮಧ್ಯ ಪ್ರವೇಶಿಸಿ, ಮಾತಿನಲ್ಲಿ ಬಗೆಹರಿಸಿಕೊಳ್ಳುವಂತೆ ಮಾಡಿದ್ದಾರೆ. ನಂತರ ಏನಾಗಿದೆ ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇದರ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ.
Advertisement