

ಟಾಕ್ಸಿಕ್ ಚಿತ್ರದ ಯಾವುದೇ ಅಪ್‌ಡೇಟ್ ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೆ, ಇದೀಗ ಸಿನಿಮಾ ಕುರಿತು ರಾಕಿಂಗ್ ಸ್ಟಾರ್ ಯಶ್ ಅವರು ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.
ಸಿನಿಮಾ ಬಿಡುಗಡೆ ದಿನಾಂಕವನ್ನು ತಿಳಿಸಿರು ಯಶ್ ಅವರು, ಚಿತ್ರ ಬಿಡುಗಡೆಗೆ ಇನ್ನು ಕೇವಲ 100 ದಿನಗಳು ಮಾತ್ರ ಬಾಕಿ ಇದೆ ಎಂದು ಹೇಳಿದ್ದಾರೆ.
ಇದೇ ವೇಳೆ ಚಿತ್ರ ತಂಡ ಕೂಡ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದು, ಪೋಸ್ಟರ್ ನಲ್ಲಿ ವ್ಯಕ್ತಿಯೊಬ್ಬ (ಬಹುಷಃ ಯಶ್) ಬಾತ್ಟಬ್ನಲ್ಲಿ ಕೂತಿರುವುದು, ಆ ಬಾತ್ ಟಬ್ನ ಅಂಚುಗಳಲ್ಲಿ ರಕ್ತ ಇರವುದು, ಬಾತ್ ಟಬ್‌ನಿಂದಲೇ ವ್ಯಕ್ತಿ ಕಿಟಕಿ ಹೊರಗೆ ನೋಡುತ್ತಿರುವುದು, ಬೆನ್ನಿನ ಮೇಲೆ ಟ್ಯಾಟೂ ಇರುವುದು ಕಂಡು ಬಂದಿದೆ.
ಈ ಪೋಸ್ಟರ್ ಹಂಚಿಕೊಂಡಿರುವ ನಟ ಯಶ್, ‘ಕಾಲ್ಪನಿಕ ಕಥೆ ಬಿಡುಗಡೆ ಆಗಲು 100 ದಿನ ಬಾಕಿ ಇದೆ’ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಪೋಸ್ಟರ್ನಲ್ಲಿಯೂ ಸಹ ಸಿನಿಮಾ ಬಿಡುಗಡೆಗೆ ಇನ್ನು ನೂರು ದಿನಗಳಷ್ಟೆ ಬಾಕಿ ಇದೆ ಎಂದು ತಿಳಿಸಲಾಗಿದೆ. ಬಿಡುಗಡೆ ಆಗಿರುವ ಪೋಸ್ಟರ್ ಆಸಕ್ತಿಕರವಾಗಿದ್ದು, ಹಾಲಿವುಡ್ ಸಿನಿಮಾಗಳ ಫೀಲ್ ನೀಡುತ್ತಿದೆ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕರ್ನಾಟಕದ ಈ ವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ಆಗಿದೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.
Advertisement