

ಬೆಂಗಳೂರು: 1980, 90 ಮಾತ್ರವಲ್ಲ 2000 ರ ದಶಕದ ಆರಂಭದಲ್ಲಿಯೂ ಸಹ ಇಳಯರಾಜ ಅವರ ಸಂಗೀತವಿಲ್ಲದೆ ಅಪೂರ್ಣವೆನಿಸುತ್ತದೆ. ಜೊತೆ ಜೊತೆಯಲಿ ಮತ್ತು ನಗುವ ನಯನದಂತಹ ಶ್ರೇಷ್ಠ ಹಾಡುಗಳಿಂದ ಹಿಡಿದು ತಮಿಳು ಶ್ರೇಷ್ಠ ಕೃತಿಗಳಾದ ಇಳಯ ನೀಲ ಮತ್ತು ತೇನ್ಪಾಂಡಿ ಚೀಮಾಯಿಲೆಯವರೆಗೆ ಸಂಗೀತ ಮಾಂತ್ರಿಕ ಇಳಯರಾಜ ಅವರು ಉತ್ತಮ ಹಾಡುಗಳನ್ನು ನೀಡಿದ್ದಾರೆ. ಅವರ ಸಂಯೋಜನೆಗಳು ಕೇವಲ ಚಲನಚಿತ್ರಗಳ ಜೊತೆಗೆ ಮಾತ್ರವಲ್ಲ ಭಾಷೆಗಳು ಮತ್ತು ತಲೆಮಾರುಗಳಾದ್ಯಂತ ನೆನಪುಗಳನ್ನು ಹಿಡಿದಿಟ್ಟಿವೆ.
ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರ ಫೌಂಡೇಷನ್‌ನ ಚಟುವಟಿಕೆಗಳು ಆರಂಭವಾಗಿ 25 ವರ್ಷವಾದ ನೆನಪಿನಲ್ಲಿ ‘ಮ್ಯೂಸಿಕ್ ಆನ್ ಮೀಲ್ಸ್’ ಸಂಗೀತ ಸಂಜೆಯನ್ನು ನಗರದಲ್ಲಿ ಜನವರಿ 10ರಂದು ಹಮ್ಮಿಕೊಳ್ಳಲಾಗಿದೆ. ಸೋಮವಾರ, ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಷಯ ಪಾತ್ರ ಫೌಂಡೇಶನ್‌ನ ಸಹಯೋಗದೊಂದಿಗೆ, ಇಳಯರಾಜ ತಮ್ಮ ಪ್ರಯಾಣದ ಬಗ್ಗೆ ಮಾತನಾಡಿದರು.
ನಾನು ಕನ್ನಡದಲ್ಲಿ ವೃತ್ತಿ ಪ್ರಾರಂಭಿಸಿದೆ, ಸಂಗೀತ ಸಂಯೋಜಕರಾಗುವ ಮೊದಲು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸಂಯೋಜಕ ಜಿಕೆ ವೆಂಕಟೇಶ್ ಅವರಿಗೆ ಸಹಾಯಕನಾಗಿ ಕೆಲಸ ಮಾಡಿದ್ದೇನೆ ಅವರ ಸಂಗೀತವು ಭಾಷೆಯ ಗಡಿಗಳನ್ನು ದಾಟುವ ಮೊದಲು ಉದ್ಯಮದಲ್ಲಿ ಅವರ ಆರಂಭಿಕ ಕೆಲಸವನ್ನು ಉಲ್ಲೇಖಿಸಿದರು.
ದಶಕಗಳಲ್ಲಿ ಸಂಗೀತ ಕ್ಷೇತ್ರದಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಿದ ಅವರು. ಸಂಗೀತಗಾರರಾಗಿ 50 ನೇ ವರ್ಷವನ್ನು ಆಚರಿಸುತ್ತಿರುವ ಇಳಯರಾಜ ತಮ್ಮ ಮತ್ತು ಈಗಿನ ಸಂಗೀತ ನಿರ್ದೇಶಕರುಗಳ ಹೋಲಿಕೆಗಳನ್ನು ವಿರೋಧಿಸಿದರು. "ಇಂದಿನ ಸಂಗೀತವು ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿದೆ ಎಂಬ ತೀರ್ಮಾನಕ್ಕೆ ಏಕೆ ಬರಬೇಕು? ನೀವು ತಪ್ಪು ಸಂಗೀತವನ್ನು ಕೇಳುತ್ತಿದ್ದೀರಿ ಎಂದು ನೀವು ಭಾವಿಸಿದರೆ, ಅದನ್ನು ಬಿಟ್ಟು ಬೇರೆಯದನ್ನು ಕೇಳುವ ಆಯ್ಕೆಯ ಸ್ವಾತಂತ್ರ್ಯ ನಿಮಗೆ ಇದೆ ಎಂದ ಅವರು ಇಂದಿನ ಸಂಗೀತಗಾರರ ಬಗ್ಗೆ ಜಡ್ಜ್ ಆಗಲು ನಿರಾಕರಿಸಿದರು, ಅದರ ಬಗ್ಗೆ ಕಾಮೆಂಟ್ ಮಾಡಲು ತಾನು ಸರಿಯಾದ ವ್ಯಕ್ತಿಯಲ್ಲ ಎಂದು ಹೇಳಿದರು. "ಇಂದಿನ ಸಂಗೀತಗಾರರು ಅದ್ಭುತವಾಗಿದ್ದಾರೆ. ಅವರಿಗೆ ನನ್ನ ಸಲಹೆ ಅಗತ್ಯವಿಲ್ಲ. ಅವರಿಗೆ ಎಲ್ಲವೂ ಚೆನ್ನಾಗಿ ತಿಳಿದಿದೆ" ಎಂದು ಮತ್ತಷ್ಟು ಹೊಗಳಿದರು.
ಹಲವಾರು ವರ್ಷಗಳ ನಂತರ ನಗರದಲ್ಲಿ ಪ್ರದರ್ಶನ ನೀಡುತ್ತಿರುವ ಇಳಯರಾಜ, ಯಾವುದೇ ಬಲವಂತವಿಲ್ಲದೆ ಸಂಗೀತ ಕಾರ್ಯಕ್ರಮ ಒಪ್ಪಿಕೊಂಡಿದ್ದಾರೆ. ಆಯೋಜಕರು ಸಂಗೀತ ಕಚೇರಿ ಒಳ್ಳೆಯ ಉದ್ದೇಶಕ್ಕಾಗಿ ಎಂದು ಹೇಳಿದ ಕ್ಷಣ ನಾನು ಆ ಪ್ರಸ್ತಾಪವನ್ನು ತಕ್ಷಣವೇ ಸ್ವೀಕರಿಸಿದೆ. ಅವಕಾಶ ಸರಿಯಾದ ಸಮಯದಲ್ಲಿ ಬಂದಿತು" ಎಂದು ಅವರು ಹಂಚಿಕೊಂಡರು, ಸಂಗೀತ ಕಚೇರಿಯು ಅವರ ಇತರ ಹಿಟ್‌ಗಳ ಜೊತೆಗೆ ಭಕ್ತಿಗೀತೆಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಧ್ಯಾನ ಸಂಗೀತದ ಬಗ್ಗೆ ಪ್ರತಿಕ್ರಿಯಿಸಿದ, ಇಳಯರಾಜ ಉದ್ದೇಶಪೂರ್ವಕ ಶಾಂತತೆಯ ಕಲ್ಪನೆಯನ್ನು ತಳ್ಳಿಹಾಕಿದರು, "ವಾಸ್ತವವಾಗಿ ಧ್ಯಾನಕ್ಕೆ ಯಾವುದೇ ಉದ್ದೇಶ ಇರಬಾರದು. ಧ್ಯಾನ ಮಾಡದೆ ನೀವು ಶಾಂತಿಯುತವಾಗಿರಲು ಸಾಧ್ಯವಾದರೆ, ಅದು ಧ್ಯಾನ." ಸಂಗೀತವು ಇದೇ ಆಂತರಿಕ ಮೌನದಿಂದ ಹೊರಹೊಮ್ಮುತ್ತದೆ ಎಂದು ಅವರು ನಂಬುತ್ತಾರೆ.
ಬುದ್ಧಿಶಕ್ತಿ ತಕ್ಷಣ ತಲೆಗೆ ಹೋಗುತ್ತದೆ. ಆದರೆ ಸಂಗೀತ ತಕ್ಷಣ ಹೃದಯಕ್ಕೆ, ಆತ್ಮಕ್ಕೆ ಹೋಗುತ್ತದೆ. ಸಂಗೀತದಲ್ಲಿ ಸೃಜನಶೀಲತೆ ಮತ್ತು ಕೃತಕ ಬುದ್ಧಿಮತ್ತೆಯ ಸಂಗಮದ ಬಗ್ಗೆ ಪ್ರತಿಕ್ರಿಯಿಸಿದ ಅವರು ತರಬೇತಿ ಮತ್ತು ಅಭ್ಯಾಸದಿಂದ ಕಲಿಕೆ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ವಿವರಿಸಿದರು. "ಮಾನವ ಬುದ್ಧಿಮತ್ತೆ ಸ್ವತಃ ಕೃತಕವಾಗಿದೆ. ಸಂಗೀತವು ಬೇರೆಡೆಯಿಂದ ಬರುತ್ತದೆ, ಅದು ಕಾಲಾನಂತರದಲ್ಲಿ ಎಲ್ಲೆಡೆ ಆವರಿಸಿಕೊಂಡು ದೈವಿಕವಾಗಿರುತ್ತದೆ ಎಂದರು.
Advertisement