

‘ಡೆವಿಲ್’ ಸಿನಿಮಾ ಕಲೆಕ್ಷನ್ ಕಳೆದೆರಡು ದಿನಗಳಿಂದ ಕುಸಿಯುತ್ತಿದೆ. ಚಿತ್ರ ಬಿಡುಗಡೆಯಾದ ಆರಂಭದ ಎರಡು ದಿನಗಳಲ್ಲಿ ಇದ್ದ ಕ್ರೇಜ್ ದಿನಕಳೆಯುತ್ತಾ ಕಡಿಮೆಯಾಗುತ್ತಿದೆ. ನಿನ್ನೆ ಗುರುವಾರ ಗಳಿಕೆ ತೀವ್ರ ಕುಸಿದಿದ್ದು, ಈ ವಾರಾಂತ್ಯದಲ್ಲಿ ಸಿನಿಪ್ರೇಮಿಗಳನ್ನು ಡೆವಿಲ್ ಥಿಯೇಟರ್ ನತ್ತ ಸೆಳೆಯುತ್ತದೆಯೇ ಎಂದು ನೋಡಬೇಕಿದೆ.
‘ಡೆವಿಲ್’ ಸಿನಿಮಾ ರಿಲೀಸ್ ಆಗಿ 8 ದಿನಗಳಾಗಿವೆ. sacnilk ವರದಿ ಪ್ರಕಾರ ಈ ಚಿತ್ರ ಕಲೆಕ್ಷನ್ ಮಾಡಿರುವುದು 25 ಕೋಟಿ ರೂಪಾಯಿ. ನಿನ್ನೆ ಕೇವಲ 53 ಲಕ್ಷ ರೂಪಾಯಿ ಗಳಿಕೆಯಾಗಿದೆಯಂತೆ. ನಾಳೆ, ನಾಡಿದ್ದು ನೋಡಬೇಕಿದೆ.
ದರ್ಶನ್ ಅವರು ಜೈಲಿನಲ್ಲಿ ಇರುವ ಮಧ್ಯೆ ‘ಡೆವಿಲ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ಅಭಿಮಾನಿಗಳು ಹೊತ್ತುಕೊಂಡಿದ್ದರು. ಆದರೆ, ಸಿನಿಮಾಗೆ ಅಂದುಕೊಂಡ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ವಿಮರ್ಶಕರಿಂದ ಹಾಗೂ ಸಿನಿಮಾ ಪ್ರಿಯರಿಂದ ‘ಡೆವಿಲ್’ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ತಮ್ಮ ಡಿ ಬಾಸ್ ಚಿತ್ರವನ್ನು ತಾವೇ ಗೆಲ್ಲಿಸಿಕೊಡುತ್ತೇವೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದರು. ಈಗ ಅವರು ಕೈಹಿಡಿಯುತ್ತಾರಾ ಎಂದು ನೋಡಬೇಕಿದೆ.
ಮುಂದಿನ ವಾರ ಡೆವಿಲ್ ಚಿತ್ರಕ್ಕೆ ‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಪೈಪೋಟಿ ನೀಡಲಿವೆ. ಇವೆರಡೂ ಕ್ರಿಸ್ ಮಸ್ ಗೆ ಬಿಡುಗಡೆಯಾಗುತ್ತಿವೆ.
Advertisement