

ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಚಿತ್ರದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ನೀಡಿದ್ದ 'ಯುದ್ಧಕ್ಕೆ ಒಂದು ಪಡೆ ಸಿದ್ಧವಾಗಿದೆ' ಎಂಬ ಹೇಳಿಕೆ ಈಗ ಕನ್ನಡ ಚಿತ್ರರಂಗದಲ್ಲಿ ವಿವಾದ ಭುಗಿಲೇಳಲು ಕಾರಣವಾಗಿದೆ. ಈ ಹೇಳಿಕೆಗೆ ಒಬ್ಬೊಬ್ಬರು ಒಂದೊಂದು ರೀತಿ ಅರ್ಥ ಕೊಡುತ್ತಿದ್ದು ತಮ್ಮ ನಾಯಕನನ್ನು ದರ್ಶನ್ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ.
'ಯುದ್ಧ ಹೇಳಿಕೆ'ಗೆ ನಟ ಕಿಚ್ಚ ಸುದೀಪ್ ಸ್ಪಷ್ಟನೆ ಕೊಟ್ಟಿದ್ದು ಯಾರಿಗಾದರೂ ವಾರ್ನಿಂಗ್ ಕೊಡಬೇಕಿದ್ದರೆ ವೇದಿಕೆ ಬೇಕಿಲ್ಲ. ಭಾಷಣದಲ್ಲಿ ಪೈರಸಿ ಎಂದು ಹೇಳುವ ಅವಶ್ಯಕತೆ ಇರಲಿಲ್ಲ. ಹೀಗಾಗಿ ಪೈರಸಿ ಬಗ್ಗೆ ವಾರ್ನ್ ಮಾಡಿದ್ದು ತಪ್ಪಾ ಎಂದು ಪ್ರಶ್ನಿಸಿದರು. ಈ ಮಧ್ಯೆ ದರ್ಶನ್ ಅಭಿಮಾನಿಗಳು ಮಾಜಿ ಬಿಜೆಪಿ ಶಾಸಕ ರಾಜುಗೌಡ ವಿರುದ್ಧ ಕಿಡಿಕಾರಿದ್ದಾರೆ.
ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ರಾಜುಗೌಡ ಮಾತನಾಡಿ, ಸುದೀಪ್ ಸರ್ ಗೆ ಕಾಂಜಿ, ಪೀಂಜಿ ಅಭಿಮಾನಿಗಳಿಲ್ಲ ಎಂದು ಹೇಳಿದ್ದು ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಬರ್ಟ್ ಚಿತ್ರ ಬಿಡುಗಡೆ ವೇಳೆ ರಾಜುಗೌಡ ದರ್ಶನ್ ಜೊತೆಗಿದ್ದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಅಂದು ದರ್ಶನ್ ಜೊತೆಗಿದ್ದ ರಾಜುಗೌಡ ಇದೀಗ ಸುದೀಪ್ ಜೊತೆ ಸೇರಿಕೊಂಡಿದ್ದಾರೆ ಎಂದು ಲೇವಡಿ ಮಾಡುತ್ತಿದ್ದಾರೆ.
Advertisement