
2026 ಹೊಸ ವರ್ಷ ಬರಮಾಡಿಕೊಳ್ಳುವ ಮುನ್ನ, 2025ರಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ವರ್ಷ ವಿವಾಹ ಬಂಧನಕ್ಕೆ ಒಳಗಾದ ತಾರೆಯರ ಪಟ್ಟಿ ಇಲ್ಲಿದೆ ನೋಡಿ…
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು, ಫೆಬ್ರವರಿ 16ರಂದು ಮೈಸೂರಿನಲ್ಲಿ ಡಾಕ್ಟರ್ ಧನ್ಯತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಹಿರಿಯ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರು ರುಷಭ್ ಅವರೊಂದಿಗೆ ವಿವಾಹ ಬಂಧನಕ್ಕೊಳಗಾದರು. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ನಡೆದ ವಿವಾಹ ಸಮಾರಂಭ ಅದ್ಧೂರಿಯಾಗಿ ನೆರವೇರಿತು.
ಸ್ಯಾಂಡಲ್ ವುಡ್ ನಟಿ ಅರ್ಚನಾ ಕೊಟ್ಟಿಗೆ ಏಪ್ರಿಲ್‌ನಲ್ಲಿ ಕ್ರಿಕೆಟರ್ ಬಿ.ಆರ್ ಶರತ್ ಅವರ ಜೊತೆಗೆ ಹಸೆಮಣೆ ಏರಿದರು.
‘ಕೆಜಿಎಫ್’ ಮತ್ತು ‘ಸಲಾರ್’ ಸೇರಿಂದತೆ ಹಲವು ಸಿನಿಮಾಗಳಿಗೆ ಸಿನಿಮ್ಯಾಟೋಗ್ರಾಫರ್ ಆಗಿ ಕೆಲಸ ಮಾಡಿದ ಭುವನ್ ಗೌಡ ಅಕ್ಟೋಬರ್‌ನಲ್ಲಿ ನಿಖಿತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
‘777 ಚಾರ್ಲಿ’ ಸಿನಿಮಾದ ನಿರ್ದೇಶಕ ಕಿರಣ್ ರಾಜ್ ನವೆಂಬರ್ ತಿಂಗಳಲ್ಲಿ ಅನಯಾ ವಸುಧಾ ಅವರನ್ನ ವಿವಾಹವಾದರು.
ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಅವರ ಸಹೋದರ ರಾಣಾ ಅವರು ರಕ್ಷಿತಾ ಎಂಬುವರನ್ನ ವಿವಾಹವಾದರು. ಫೆಬ್ರವರಿ 7ರಂದು ಬೆಂಗಳೂರಿನ ಚಾಮರ ವಜ್ರದಲ್ಲಿ ವಿವಾಹ ಸಮಾರಂಭ ನೆರವೇರಿತು.
ಟಾಲಿವುಡ್ ನಟ ನಾಗಾರ್ಜುನ ಹಾಗೂ ನಟಿ ಅಮಲಾ ಪುತ್ರ ಅಖಿಲ್ ಅಕ್ಕಿನೇನಿ ತಮ್ಮ ದೀರ್ಘಕಾಲದ ಗೆಳತಿ ಜೈನಾಬ್ ಅವರ ಜೊತೆಗೆ ಸಪ್ತಪದಿ ತುಳಿದರು.
ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಜೊತೆಗೆ ಜೂನ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕನ್ನಡ ಕಿರುತೆರೆಯಲ್ಲಿ ನಟಿ ದೀಪ್ತಿ ಮಾನೆ ಅವರು ನವೆಂಬರ್ 7ರಂದು ರೋಹನ್ ಎಂಬುವವರ ಜೊತೆಗೆ ವಿವಾಹವಾದರು.
ಅಮೃತವರ್ಷಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ರಜಿನಿ ಅವರು ಅರುಣ್ ವೆಂಕಟೇಶ್ ಎಂಬುವವರ ಜೊತೆಗೆ ನವೆಂಬರ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತಂಗಿಯಾಗಿ ಪಾತ್ರ ನಿಭಾಯಿಸುತ್ತಿದ್ದ ನಟಿ ಮೇಘಾ ಶೆಣೈ ಅವರು, ನವೆಂಬರ್ 12ರಂದು ಭರತ್ ಸಿಂಗ್ ಜೊತೆಗೆ ಮದುವೆಯಾದರು.
ಮಿಥುನ ರಾಶಿ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ನಟ ಯದುಶ್ರೇಷ್ಟ ಅವರು ಭರತನಾಟ್ಯ ಕಲಾವಿದೆ ವಿಶಾಖ ಹೇಮಂತ್ ಜೊತೆಗೆ ಜುಲೈ 14ರಂದು ಸಪ್ತಪದಿ ತುಳಿದಿದ್ದರು.
ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟ ಶಮಂತ್ ಗೌಡ ಅವರು ಮೇಘನಾ ಎಂಬುವವರ ಜೊತೆಗೆ ಮೇ 17ರಂದು ಮದುವೆಯಾಗಿದ್ದರು.
ಕನ್ನಡ ಕಿರುತೆರೆ ಲೋಕದಲ್ಲೇ ವಿಲನ್ ಪಾತ್ರದ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಮೇಘಶ್ರೀ ಗೌಡ ಅವರು ಪುರಂದರ ಎಂಬುವವರ ಜೊತೆಗೆ ಫೆ.23ರಂದು ವಿವಾಹವಾದರು.
ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ಮೇಘನಾ ಶಂಕರಪ್ಪ ಅವರು ಫೆ.9ರಂದು ಜಯಂತ್ ಜೊತೆಗೆ ಅದ್ಧೂರಿಯಾಗಿ ವಿವಾಗವಾದರು.
‘ಬಿಗ್ ಬಾಸ್ʼ ಖ್ಯಾತಿಯ ಚೈತ್ರಾ ಕುಂದಾಪುರ ಅವರು, ಶ್ರೀಕಾಂತ್ ಕಶ್ಯಪ್ ಎಂಬುವವರ ಜೊತೆ ಮೇ 9ರಂದು ವಿವಾಹವಾದರು.
ಕುವೆಂಪು ಅವರ ಮಂತ್ರ ಮಾಂಗಲ್ಯ ಆಶಯದಂತೆ ಗಾಯಕಿ ಸುಹಾನಾ ಸೈಯದ್ - ನಿತಿನ್ ಶಿವಾಂಶ್ ಮದುವೆಯಾದರು.
ಖ್ಯಾತ ನಿರೂಪಕಿ ಅನುಶ್ರೀ ಅವರು ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಆಗಸ್ಟ್ 28ರಂದು ವಿವಾಹವಾದರು.
ಗಾಯಕ ರಘು ದೀಕ್ಷಿತ್ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರ ಜೊತೆ ಅಕ್ಟೋಬರ್ 24ರಂದು ವಿವಾಹವಾದರು.
ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಇದೇ ಡಿಸೆಂಬರ್ 1ರಂದು ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ದಿವ್ಯಾ ವಸಂತ ಅವರು ಸಚಿನ್ ಯಾದವ್ ಎಂಬುವರನ್ನ ಮದುವೆಯಾದರು.
‘ಯಾರೇ ನೀ ಮೋಹಿನಿ’ ಸೇರಿದಂತೆ ಇತರೆ ಹಲವಾರು ಧಾರಾವಾಹಿಗಳಲ್ಲಿ ಮಿಂಚಿದ ನಟಿ ಐಶ್ವರ್ಯಾ ಬಸ್ಪುರೆ ಅವರು, ರಾಕೇಶ್ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ರಂಜಿತ್ - ಮಾಸನಾ ವಿವಾಹ ಮಹೋತ್ಸವ ಮೇ 11ರಂದು ಅದ್ಧೂರಿಯಾಗಿ ನೆರವೇರಿತು.
ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ ಅವರು ಡಿಜಿಟಲ್ ಕ್ರಿಯೇಟರ್ ಹಾಗೂ ಸಾಫ್ಟ್‌ವೇರ್ ಉದ್ಯೋಗಿ ಚಂದನ್ ಶೆಟ್ಟಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಈ ವರ್ಷ ಕಾಲಿಟ್ಟರು.
Advertisement