
2025 ಕೊನೆಗೊಳ್ಳೋದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಮನರಂಜನಾ ಜಗತ್ತಿನಲ್ಲಿ ಒಳ್ಳೆಯದೋ ಕೆಟ್ಟದ್ದೋ, ತುಂಬಾ ಘಟನೆಗಳು ನಡೆದಿವೆ. ಅದರಲ್ಲಿ ವಿಶೇಷವಾದುದು ಎಂದರೆ, ಈ ವರ್ಷ ಹಲವಾರು ಸೆಲೆಬ್ರಿಟಿಗಳು ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಈ ವರ್ಷ ಯಾವೆಲ್ಲಾ ತಾರೆಯರು ತಮ್ಮ ಮಿನಿ ವರ್ಷನ್ ಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ ನೋಡೋಣ.
ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ನವೆಂಬರ್ 7ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಈ ದಂಪತಿಗೆ ಗಂಡು ಮಗು ಜನಿಸಿದೆ.
2025ರ ಜನವರಿ ತಿಂಗಳಲ್ಲಿ ಕನ್ನಡ ನಟ ವಸಿಷ್ಠ ಸಿಂಹ - ನಟಿ ಹರಿಪ್ರಿಯಾ ಗಂಡು ಮಗುವಿಗೆ ಪೋಷಕರಾಗಿದ್ದಾರೆ.
ನಟಿ ಆತಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್. ರಾಹುಲ್ ಮುದ್ದಾದ ಹೆಣ್ಣು ಮಗುವಿಗೆ ಪಾಲಕರಾದರು.
ಐವಿಎಫ್ ಮೂಲಕ ಕನ್ನಡ ನಟಿ ಭಾವನಾ ರಾಮಣ್ಣ ಗರ್ಭ ಧರಿಸಿದ್ದರು. ಸೆಪ್ಟೆಂಬರ್ ತಿಂಗಳಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ ಅವರು ಅಕ್ಟೋಬರ್ 19ರಂದು ಮಗನನ್ನು ಸ್ವಾಗತಿಸಿದರು.
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು, ಜುಲೈ 15ರಂದು ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾದರು.
ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್-ಬೃಂದಾ ದಂಪತಿ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಗಂಡು ಮಗುವಿಗೆ ಪೋಷಕರಾದರು.
ರಾಮಾಚಾರಿ’ ಸೀರಿಯಲ್ ನಟಿ ಐಶ್ವರ್ಯಾ-ವಿನಯ್ ದಂಪತಿ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಸಹೋದರ, ನಟ ಅರ್ಬಾಜ್ ಖಾನ್ ಮತ್ತು ಅವರ ಪತ್ನಿ ಶುರಾ ಖಾನ್ ಅವರು ಅಕ್ಟೋಬರ್ 5ರಂದು ಹೆಣ್ಣು ಮಗುವಿಗೆ ಪೋಷಕರಾದರು.
‘ಶ್ರಾವಣಿ ಸುಬ್ರಹ್ಮಣ್ಯ’ ಸೀರಿಯಲ್ ನಟಿ ಹರ್ಷಿತಾ-ಸಂದೀಪ್ ಆಚಾರ್ ದಂಪತಿ ಹೆಣ್ಣು ಮಗುವನ್ನ ಬರಮಾಡಿಕೊಂಡರು.
ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ನನ್ನರಸಿ ರಾಧೆ ಸೀರಿಯಲ್‌ನಲ್ಲಿ ನಟಿಸಿರುವ ಕೌಸ್ತುಭ ಮಣಿ ಈ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದರು.
ಲಕ್ಷ್ಮೀ ನಿವಾಸ ಸೀರಿಯಲ್ ನಟ ಅಜಯ್ ರಾಜ್ ಹಾಗೂ ಪದ್ಮಿನಿ ದೇವನಹಳ್ಳಿ ದಂಪತಿ ಗಂಡು ಮಗುವನ್ನ ಬರಮಾಡಿಕೊಂಡರು.
ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ನಟಿಸಿದ್ದ ನಟಿ ಸುಶ್ಮಿತಾ ಗೌಡ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಪ್ರಖ್ಯಾತ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಅವರು ಡಿಸೆಂಬರ್‌ನಲ್ಲಿ ತಮ್ಮ ಎರಡನೇ ಗಂಡು ಮಗುವನ್ನು ಸ್ವಾಗತಿಸಿದರು.
ಬಾಲಿವುಡ್ ನಟಿ ಇಲಿಯಾನಾ ಡಿ'ಕ್ರೂಜ್ ಅವರು ಎರಡನೇ ಬಾರಿಗೆ ತಾಯಿಯಾಗಿದ್ದು, ಪತಿ ಮೈಕೆಲ್ ಡೋಲನ್ ಅವರೊಂದಿಗೆ ಜೂನ್ ತಿಂಗಳಿನಲ್ಲಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ.
ಕನ್ನಡದ ‘ದಿ ವಿಲನ್’ ಚಿತ್ರದಲ್ಲಿ ನಟಿಸಿದ್ದ ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ಮತ್ತು ಎಡ್ ವೆಸ್ಟ್‌ವಿಕ್ ದಂಪತಿ ಕಳೆದ ಮಾರ್ಚ್ ತಿಂಗಳಿನಲ್ಲಿ ಗಂಡು ಮಗುವಿಗೆ ಪೋಷಕರಾಗಿದ್ದಾರೆ.
Advertisement