ನಾನು ಹೈದರಾಬಾದ್ ನವಳು, ನಿಮ್ಮ ಫ್ಯಾಮಿಲಿಯಲ್ಲಿ ಒಬ್ಬಳು ಎಂದ ರಶ್ಮಿಕಾ: ನಿಮ್ಮನ್ನು ದ್ವೇಷಿಸಲು ಹೊಸ ಕಾರಣ ನೀಡುತ್ತೀರಿ- ನೆಟ್ಟಿಜನ್ಸ್ ಆಕ್ರೋಶ

ರಶ್ಮಿಕಾ ಅವರು ‘ನಾನು ಹೈದರಾಬಾದ್​ನವಳು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ರಶ್ಮಿಕಾ ಹೇಳಿಕೆ ಚರ್ಚೆಗೆ ಕಾರಣವಾಗಿದ್ದು, ಇದನ್ನು ಅನೇಕರು ಟ್ರೋಲ್ ಮಾಡುತ್ತಾ ಇದ್ದಾರೆ.
Rashmika Mandanna
ರಶ್ಮಿಕಾ ಮಂದಣ್ಣ
Updated on

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಈಗ ಅವರನ್ನು ಟ್ರೋಲ್ ಮಾಡಲು ಹೊಸ ಕಾರಣ ಸಿಕ್ಕಿದೆ.

ರಶ್ಮಿಕಾ ಅವರು ‘ನಾನು ಹೈದರಾಬಾದ್​ನವಳು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ರಶ್ಮಿಕಾ ಹೇಳಿಕೆ ಚರ್ಚೆಗೆ ಕಾರಣವಾಗಿದ್ದು, ಇದನ್ನು ಅನೇಕರು ಟ್ರೋಲ್ ಮಾಡುತ್ತಾ ಇದ್ದಾರೆ.

ರಶ್ಮಿಕಾ ಮಂದಣ್ಣ 'ಛಾವಾ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜೊತೆ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಈವೆಂಟ್ ಒಂದು ಮುಂಬೈನಲ್ಲಿ ನಡೆದಿತ್ತು. ಅದರಲ್ಲಿ ರಶ್ಮಿಕಾ ಅವರು ಈ ಮಾತನ್ನು ಹೇಳಿದರು. ನಾನು ಹೈದರಾಬಾದ್​ನವಳು. ನಾನು ಅಲ್ಲಿಂದ ಒಬ್ಬಂಟಿಯಾಗಿ ಬಂದಿದ್ದೇನೆ. ಬಹುಶಃ ನಾನು ಈಗ ನಿಮ್ಮ ಕುಟುಂಬದ ಭಾಗ ಆಗಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಕನ್ನಡಿಗರು ರಶ್ಮಿಕಾ ಬಗ್ಗೆ ಟೀಕೆ ಹೊರಹಾಕಿದ್ದಾರೆ. ರಶ್ಮಿಕಾಗೆ ಕರ್ನಾಟಕ ಸಂಪೂರ್ಣವಾಗಿ ಮರೆತು ಹೋಗಿದೆ ಎಂದು ಅನೇಕರು ಹೇಳಿದ್ದಾರೆ.

ರಶ್ಮಿಕಾ ಯಾವಾಗ ಹೈದರಾಬಾದ್​ನವರಾದರು? ಇದನ್ನು ಜನನ ಪ್ರಮಾಣಪತ್ರದಲ್ಲಿ ಸೇರಿಸಿದ್ದಾರಾ’ ಎಂದು ಕೆಲವರು ಕೇಳಿದ್ದಾರೆ. ‘ಪ್ರೀತಿಗಾಗಿ ಊರನ್ನೇ ಮರೆತ ರಶ್ಮಿಕಾ’ ಎಂದು ಕೆಲವರು ಹೇಳಿಕೊಂಡಿದ್ದಾರೆ. ‘ನಿಮ್ಮನ್ನು ದ್ವೇಷಿಸಲು ನಿತ್ಯ ಹೊಸ ಹೊಸ ಕಾರಣ ನೀಡುತ್ತೀರಿ’ ಎಂದು ಕೆಲವರು ಹೇಳಿದ್ದಾರೆ. ಕೂರ್ಗ್ ನವರಾದ ನೀವು ನಿಮ್ಮ ಮೂಲ ಮರೆತಿದ್ದೀರಿ. ನಿಮಗೆ ಗೌರವ ಪಡೆದು ಕೊಳ್ಳುವ ಅರ್ಹತೆಯಿಲ್ಲ, ನಿಮಗೆ ನೈತಿಕತೆಯಿಲ್ಲ, ನಾಚಿಕೆಯಾಗಬೇಕು ಎಂದು ನೆಟಿಜನ್ ಒಬ್ಬರು ಕಮೆಂಟ್ ಮಾಡಿದ್ದಾರೆ.

Rashmika Mandanna
ಬಿರುದು-ಬಾವಲಿಗಳು ಶಾಶ್ವತವಲ್ಲ; ನಿದ್ರೆಗೆ 'ಬೈ ಬೈ' ಹೇಳಿ ಡಬಲ್ ಶಿಫ್ಟ್ ಕೆಲಸಕ್ಕೂ ರೆಡಿ: ರಶ್ಮಿಕಾ ಮಂದಣ್ಣ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com