
ಮೈಸೂರು: ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ತಮ್ಮ ಸ್ನೇಹಿತೆ ಡಾ. ಧನ್ಯತಾ ಜೊತೆ ಇಂದು ಭಾನುವಾರ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ವೈಪವೋಪೇತ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಡಾಲಿ ಧನಂಜಯ್ ಅವರು ಚಿತ್ರದುರ್ಗದ ವೈದ್ಯೆ ಧನ್ಯತಾಗೆ ಇಂದು ಬೆಳಗ್ಗೆ ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ ಮಾಡಿ ಸಪ್ತಪದಿ ತುಳಿದಿದ್ದಾರೆ. ಅವರ ವಿವಾಹಕ್ಕೆ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದೆ. ಕಲಾವಿದ ಅರುಣ್ ಸಾಗರ್ ಅವರು ಸೆಟ್ ಗಳನ್ನು ನಿರ್ಮಿಸಿದ್ದಾರೆ. ದೇವಸ್ಥಾನದ ಥೀಮ್ನಲ್ಲಿ ಮಂಟಪದ ಸೆಟ್ ನಿರ್ಮಾಣ ಆಗಿದೆ.
ಇಂದು ಬೆಳಗ್ಗೆ ಮುಹೂರ್ತ ಧಾರೆ ಕಾರ್ಯಕ್ರಮಗಳು ನೆರವೇರಿದ್ದು ಸಿನಿಮಾ ತಾರೆಯರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ರಾಜಕಾರಣಿಗಳು ಹಾಗೂ ಇತರ ಗಣ್ಯರು ವಿವಾಹ ಸಮಾರಂಭಕ್ಕೆ ಬರುತ್ತಿದ್ದಾರೆ. ಶಿವ-ಪಾರ್ವತಿ ಮುಂತಾದ ದೇವರ ವಿಗ್ರಹಗಳನ್ನು ಇರಿಸಲಾಗಿದೆ.
ಅದ್ದೂರಿ ಆರತಕ್ಷತೆ
ಮದುವೆಯಲ್ಲಿ ಭಾಗಿಯಾಗುವ ಅಭಿಮಾನಿಗಳು, ಕುಟುಂಬಸ್ಥರು, ಗಣ್ಯರಿಗೆ ಬಾಯಲ್ಲಿ ನೀರೂರಿಸಿರುವ ಭರ್ಜರಿ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿದೆ. ನಿನ್ನೆ ಸಾಯಂಕಾಲ ನೆರವೇರಿದ ಆರತಕ್ಷತೆ ಕಾರ್ಯಕ್ರಮಕ್ಕೆ ಅನೇಕ ಗಣ್ಯರು, ಸಿನಿಮಾ ನಟ-ನಟಿಯರು ಬಂದು ಹೋಗಿದ್ದರು.
Advertisement