ಸುದೀಪ್ ನಟನೆಯ 'ಬಿಲ್ಲ ರಂಗ ಭಾಷಾ' ಚಿತ್ರೀಕರಣ ಮಾರ್ಚ್ ನಲ್ಲಿ ಆರಂಭ

ಸುದೀಪ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮುಂದಿನ ಚಿತ್ರ ಬಿಲ್ಲಾ ರಂಗ ಭಾಷಾ ಮಾರ್ಚ್ ಎರಡನೇ ವಾರದಿಂದ ಚಿತ್ರೀಕರಣ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ,
ಸುದೀಪ್ ನಟನೆಯ 'ಬಿಲ್ಲ ರಂಗ ಭಾಷಾ' ಚಿತ್ರೀಕರಣ ಮಾರ್ಚ್ ನಲ್ಲಿ ಆರಂಭ
Updated on

ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರೀ ಕಲೆಕ್ಷನ್ ಆದ ನಂತರ ಕಿಚ್ಚ ಸುದೀಪ್ ಈಗ ತಮ್ಮ ಮುಂದಿನ ದೊಡ್ಡ ಸಾಹಸಕ್ಕೆ ಸಜ್ಜಾಗುತ್ತಿದ್ದಾರೆ. ಪ್ರಸ್ತುತ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಲ್ಲಿ ನಿರತರಾಗಿದ್ದಾರೆ.

ಸುದೀಪ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮುಂದಿನ ಚಿತ್ರ ಬಿಲ್ಲಾ ರಂಗ ಭಾಷಾ ಮಾರ್ಚ್ ಎರಡನೇ ವಾರದಿಂದ ಚಿತ್ರೀಕರಣ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ, ಭಾರೀ ಕುತೂಹಲದಿಂದ ನಿರೀಕ್ಷಿಸುತ್ತಿರುವ ಅಭಿಮಾನಿಗಳಿಗೆ ಈ ವಿಷಯ ಸಂತಸ ತಂದಿದೆ. ವಿಕ್ರಾಂತ್ ರೋಣಾ ನಂತರ ನಿರ್ದೇಶಕ ಅನುಪ್ ಭಂಡಾರಿ ಅವರೊಂದಿಗೆ ಸುದೀಪ್ ಅವರ ಎರಡನೇ ಸಿನಿಮಾ ಬಿಲ್ಲ ರಂಗ ಬಾಷಾ ಸಿನಿಮಾವಾಗಿದೆ.

ಅನುಪ್ ಭಂಡಾರಿಯವರ ಬಿಲ್ಲ ರಂಗ ಭಾಷಾ ಕಥೆಯು ಭವಿಷ್ಯದ ಕಥೆಯನ್ನು ಹೇಳುವ ಚಿತ್ರವೆಂದು ಹೇಳಲಾಗಿದೆ. ‘ಬಿಲ್ಲ ರಂಗ ಭಾಷ’ ಇಂದಿನಿಂದ 185 ವರ್ಷಗಳಷ್ಟು ಭವಿಷ್ಯದ ಕಥೆ ಅಂದರೆ ʼ2209 ADʼಯ ಕಥೆಯನ್ನು ಹೇಳಲಿದೆ ಎಂದು ಈ ಹಿಂದೆ ವಿಡಿಯೋವೊಂದರ ಮೂಲಕ ಚಿತ್ರತಂಡ ಹೇಳಿತ್ತು. ಸಿನಿಮಾ 2 ಭಾಗಗಳಲ್ಲಿ ಬರಲಿದೆ.

ಪ್ರಸ್ತುತ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿರುವ ತಂಡವು ಚಿತ್ರೀಕರಣಕ್ಕಾಗಿ ವಿಶೇಷ ಸೆಟ್‌ಗಳನ್ನು ರಚಿಸಲು ಬೆಂಗಳೂರಿನ ಹೊರವಲಯದಲ್ಲಿ ನಾಲ್ಕು ಎಕರೆ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡಿದೆ. ಹನುಮಾನ್‌ನಂತಹ ಚಿತ್ರಗಳಿಗೆ ಹೆಸರುವಾಸಿಯಾದ ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ಈ ಯೋಜನೆಯನ್ನು ನಿರ್ಮಿಸಿದೆ ಮತ್ತು ಸುದೀಪ್ ಅವರ ಸ್ವಂತ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದಲ್ಲಿಯೂ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ.

ಸುದೀಪ್ ನಟನೆಯ 'ಬಿಲ್ಲ ರಂಗ ಭಾಷಾ' ಚಿತ್ರೀಕರಣ ಮಾರ್ಚ್ ನಲ್ಲಿ ಆರಂಭ
ಯಾವುದೇ ಪ್ರಶಸ್ತಿ ನಿರಾಕರಿಸುವಷ್ಟು ದೊಡ್ಡದಾಗಿ ನಾನು ಬೆಳದಿಲ್ಲ: ಸುದೀಪ್ ಗೆ ಟಾಂಟ್ ಕೊಟ್ರಾ ನಟಿ ತಾರಾ?

ವ್ಯಾಪಕವಾದ VFX ಯೋಜನೆ ಮತ್ತು ಕಸ್ಟಮ್-ವಿನ್ಯಾಸಗೊಳಿಸಿದ 3D ಸೆಟ್‌ ನಮ್ಮ ಸಿನಿಮಾದ ಹೈಲೈಟ್ ಎಂದು ಅನುಪ್ ಭಂಡಾರಿ ತಮ್ಮ ಸಿನಿಮಾ ಯೋಜನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರವು 3D ಮತ್ತು 2D ಸ್ವರೂಪಗಳಲ್ಲಿ ಬಿಡುಗಡೆಯಾಗಲಿದೆ, ಇದು ಪ್ರೇಕ್ಷಕರಿಗೆ ದೃಶ್ಯವಾಗಿ ಹೊಸ ಅನುಭವವನ್ನು ನೀಡುತ್ತದೆ. ಹಲವು ತಿಂಗಳುಗಳಿಂದ ಚಿತ್ರೀಕರಣದ ಸಿದ್ಧತೆಗಳು ನಡೆಯುತ್ತಿದ್ದು, ಬಹುತೇಕ ಪ್ರಾಥಮಿಕ ಪಾತ್ರವರ್ಗವನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಮತ್ತು ಶೀಘ್ರದಲ್ಲೇ ಮುಂದಿನ ಕಲಾವಿದರ ಆಯ್ಕೆ ನಡೆಯಲಿದೆ.

ಚಿತ್ರೀಕರಣವು 20 ರಿಂದ 25 ದಿನಗಳವರೆಗೆ ನಿರಂತರವಾಗಿ ನಡೆಯುವ ನಿರೀಕ್ಷೆಯಿದೆ, ಅದೇ ಸಮಯದಲ್ಲಿ ಹೊಸ ಸೆಟ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ವಿಕ್ರಾಂತ್ ರೋಣ ಸಮಯದಲ್ಲಿ ಅಭಿವೃದ್ಧಿಪಡಿಸಿದ ವಿಎಫ್‌ಎಕ್ಸ್ ಪರಿಣತಿಯ ಮೇಲೆ ನಿರ್ಮಿಸಿದ ಅನುಪ್, ಬಿಲ್ಲಾ ರಂಗ ಭಾಷಾಗೆ ಜೀವ ತುಂಬುವಲ್ಲಿ ಅನುಭವವು ಅಮೂಲ್ಯವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅನುಪ್ ಅವರ ಪತ್ನಿ ನೀತಾ ಶೆಟ್ಟಿ ಅವರು ಕಾಸ್ಟ್ಯೂಮ್ ಡಿಸೈನರ್ ಆಗಿ ಮರಳಲಿದ್ದು, ತಾಂತ್ರಿಕ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com