
ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಸ್ಯಾಂಡಲ್ ವುಡ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಒಂದೆರೆಡು ಚಿತ್ರಗಳ ಘೋಷಣೆಗಳ ನಂತರ ಅವರ ಕಾಯುವಿಕೆ ಕೊನೆಗೂ ಕೊನೆಗೊಂಡಿದೆ. ಅವರ ಮೊಟ್ಟ ಮೊದಲಿನ ಚಿತ್ರವನ್ನು ವಿವೇಕ ಅವರು ನಿರ್ದೇಶಿಸುತ್ತಿದ್ದಾರೆ. ಅವರಿಗೂ ಇದು ಚೊಚ್ಚಲ ಸಿನಿಮಾವಾಗಿದೆ.
ಚಿತ್ರಕ್ಕೆ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಅವರ ಬೆಂಬಲವಿದೆ. ಸುಪ್ರಿಯಾನ್ವಿ ಮತ್ತು KRG ಪ್ರೊಡಕ್ಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಲಿವೆ. ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದ ಹಿನ್ನೆಲೆ ಹೊಂದಿರುವ ವಿವೇಕ ಅವರು ಈ ಸಿನಿಮಾದೊಂದಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಮೈಸೂರು ಮೂಲದ ವಿವೇಕಾ ಕ್ರೈಮ್, ಥ್ರಿಲ್ಲರ್ ಚಿತ್ರವನ್ನು ತೆರೆ ಮೇಲೆ ತರಲು ಹೊರಟ್ಟಿದ್ದಾರೆ. ಅವರ ಅನುಭವದೊಂದಿಗೆ ಚಿತ್ರತಂಡ ವಿಶಿಷ್ಟವಾದ ಕಥಾಹಂದರವನ್ನು ಹೊರತರುವ ನಿರೀಕ್ಷೆಯಿದೆ.
ಜನವರಿ 4 ರಂದು ಫಸ್ಟ್ ಲುಕ್ ಹಾಗೂ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಲಿದೆ. ಅಂದು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಚಿತ್ರತಂಡ ಯೋಜಿಸಿದೆ. ಅದೇ ದಿನ ಚಿತ್ರದ ಶೂಟಿಂಗ್ ಆರಂಭವಾಗಲಿದೆ.
Advertisement