
ನಟ ಪ್ರಜ್ವಲ್ ದೇವರಾಜ್ ನಟನೆಯ 'ರಾಕ್ಷಸ' ಚಿತ್ರವು ತೀವ್ರ ನಿರೀಕ್ಷೆ ಹುಟ್ಟುಹಾಕಿದ್ದು, ಸಿನಿಮಾವನ್ನು ಶಿವರಾತ್ರಿಯ ಸಂದರ್ಭದಲ್ಲಿ ಫೆಬ್ರುವರಿ 26 ರಂದು ಮೂಲ ಕನ್ನಡದ ಜೊತೆಗೆ ತೆಲುಗು ಆವೃತ್ತಿಯನ್ನು ಸಹ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಈ ಹಿಂದೆ ಶಿವರಾಜಕುಮಾರ್ ನಟನೆಯ ವೇದ ಚಿತ್ರವನ್ನು ವಿತರಿಸಿದ ಎಂವಿಆರ್ ಕೃಷ್ಣ ಅವರು ರಾಕ್ಷಸ ಚಿತ್ರದ ಟ್ರೇಲರ್ ವೀಕ್ಷಿಸಿ ಇಷ್ಟಪಟ್ಟಿದ್ದಾರೆ. ಬಳಿಕ ಚಿತ್ರವನ್ನು ವೀಕ್ಷಿಸಿ ಅದನ್ನು ಆಂಧ್ರ ಪ್ರದೇಶದಲ್ಲಿ ವಿತರಿಸಲು ನಿರ್ಧರಿಸಿದ್ದಾರೆ.
ಲೋಹಿತ್ ಎಚ್ ನಿರ್ದೇಶನದ ಟೈಮ್ ಲೂಪ್ ಹಾರರ್ ಚಿತ್ರ 'ರಾಕ್ಷಸ'ದಲ್ಲಿ ಪ್ರಜ್ವಲ್ ದೇವರಾಜ್ ಹಿಂದೆಂದು ಕಾಣಿಸಿರದ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ತನ್ನ ಮಗುವನ್ನು ಅಪರಿಚಿತ ಮತ್ತು ಭಯಾನಕ ಶಕ್ತಿಯಿಂದ ರಕ್ಷಿಸಲು ಹೋರಾಡುವ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಹತಾಶ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ.
ಶಾನ್ವಿ ಎಂಟರ್‌ಪ್ರೈಸಸ್ ಅಡಿಯಲ್ಲಿ ದೀಪು ಬಿಎಸ್, ನವೀನ್ ಗೌಡ ಮತ್ತು ಮಾನಸ ನಿರ್ಮಿಸಿರುವ ಈ ಚಿತ್ರದ ತಾರಾಗಣದಲ್ಲಿ ಅರುಣ್ ರಾಥೋಡ್, ಶ್ರೀಧರ್, ಗೌತಮ್, ಸೋಮಶೇಖರ್ ಮತ್ತು ವಿಹಾನ್ ಕೃಷ್ಣ ಇದ್ದಾರೆ. ಚಿತ್ರಕ್ಕೆ ನೋಬಿನ್ ಪಾಲ್ ಅವರ ಸಂಗೀತ ಮತ್ತು ಜೇಬಿನ್ ಪಿ ಜಾಕೋಬ್ ಅವರ ಛಾಯಾಗ್ರಹಣವಿದೆ.
Advertisement