
ಹೈದರಾಬಾದ್: ನಟ ಅಕ್ಕಿನೇನಿ ನಾಗಾರ್ಜುನ ಅಭಿನಯದ ಮನ್ಮಥುಡು ಚಿತ್ರದ ಮೂಲಕ ಚಿತ್ರರಂಗಕ್ಕೆ ಅಂಶು ಪಾದಾರ್ಪಣೆ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು. ಅಲ್ಲದೆ ಮಲ್ಲೇಶ್ವರಿ ಪಾತ್ರಕ್ಕಾಗಿ ಅಂಶು ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದರು.
ನಟಿ ಅಂಶು ಬಗ್ಗೆ ನಿರ್ದೇಶಕ ತ್ರಿನಾಥ ರಾವ್ ನಕ್ಕಿನಾ ಮಾಡಿರುವ ಹೇಳಿಕೆಗಳು ಈಗ ಭಾರಿ ಚರ್ಚೆಗೆ ಗ್ರಾಸವಾಗಿವೆ. ಹೊಸ ಚಿತ್ರ ಮಜಾಕಾ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಚಿತ್ರಕ್ಕಾಗಿ ಹೇಗೆ ತಯಾರಿ ನಡೆಸಿದ್ದರು ಎಂಬುದರ ಕುರಿತು ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದು ಅದು ಚರ್ಚೆಯ ವಿಷಯವಾಗಿದೆ.
ಮನ್ಮಥುಡು ಚಿತ್ರವನ್ನು ಅಂಶುಗಾಗಿಯೇ ನೋಡಿದ್ದೆ. ಅಷ್ಟು ಚೆನ್ನಾಗಿ ಕಾಣುತ್ತಿದ್ದರು. ಇದೀಗ ನನ್ನದೇ ಚಿತ್ರದಲ್ಲಿ ಅಂಶು ನಟಿಸುತ್ತಿರುವುದು ಖುಷಿಯ ವಿಷಯ ಎಂದರು. ಅಲ್ಲದೇ ನಟಿ ಮನ್ಮಥುಡು ಚಿತ್ರದಲ್ಲಿ ಇದ್ದಂತೆ Zero Sizeನಲ್ಲೇ ಇದ್ದಾರೆ. ಆದರೆ ನನ್ನ ಚಿತ್ರಕ್ಕೆ ಸ್ವಲ್ಪ ದಪ್ಪ ಆಗಮ್ಮ ಎಂದು ಹೇಳಿದ್ದೆ. ಈಗ ನೋಡಿದರೆ ಆಕೆ ಸ್ವಲ್ಪ ದಪ್ಪ ಆದಂತೆ ಕಾಣುತ್ತಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
'ಮಜಾಕಾ' ಚಿತ್ರವನ್ನು ತ್ರಿನಾಥ ರಾವ್ ನಿರ್ದೇಶಿಸಿದ್ದು, ಸಂದೀಪ್ ಕಿಶನ್ ನಾಯಕನಾಗಿ ನಟಿಸಿದ್ದಾರೆ. ರಿತು ವರ್ಮಾ ನಾಯಕಿ. 'ಮನ್ಮಧುಡು' ಖ್ಯಾತಿಯ ರಾವ್ ರಮೇಶ್ ಮತ್ತು ಅಂಶು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಫೆಬ್ರವರಿ 21ರಂದು ಬಿಡುಗಡೆಯಾಗಲಿದೆ.
Advertisement