
ಬೆಂಗಳೂರು: ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ಇನ್ನೇನು ಕೊನೆಯ ಹಂತಕ್ಕೆ ಬಂದು ತಲುಪಿದೆ. ಹನುಮಂತ ಫಿನಾಲೆ ಟಿಕೆಟ್ ಪಡೆದು ಟಾಪ್ ಐದಕ್ಕೆ ಎಂಟ್ರಿಕೊಟ್ಟಿದ್ದಾರೆ. ಮತ್ತೊಂದೆಡೆ ಧನರಾಜ್ ಸಹ ಟಾಸ್ಕ್ ಗಳಲ್ಲಿ ಉತ್ತಮವಾಗಿ ಆಡಿ ಮಿಡ್ ವೀಕ್ ಎಲಿಮಿನೇಷನ್ ನಿಂದ ತಪ್ಪಿಸಿಕೊಂಡಿದ್ದರು. ಇನ್ನುಳಿದಂತೆ ಆರು ಸ್ಪರ್ಧಿಗಳು ಎಲಿಮಿನೇಷನ್ ಭೀತಿಯಲ್ಲಿದ್ದರು. ನಿನ್ನೆಯೇ ಗೌತಮಿ ಜಾಧವ್ ಹಾಗೂ ಭವ್ಯ ಗೌಡ ಇಬ್ಬರಲ್ಲಿ ಒಬ್ಬರು ಮನೆಗೆ ಹೋಗಬೇಕಿತ್ತು. ಆದರೆ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ಅನ್ನು ಒಂದು ದಿನದ ಮಟ್ಟಿಗೆ ಮುಂದೂಡಿದ್ದರು.
ಬಿಗ್ ಬಾಸ್ ಹೇಳಿದಂತೆ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಒಬ್ಬರು ಮಧ್ಯರಾತ್ರಿಯೇ ಎಲಿಮಿನೇಟ್ ಆಗಿದ್ದಾರೆ. ಅದು ಉತ್ತಮವಾಗಿ ಆಡುತ್ತಿದ್ದ ಗೌತಮಿ ಜಾಧವ್ ಎಂದು ವರದಿಯಾಗಿದೆ. ಸದಾ ಹಸನ್ಮುಖಿಯಾಗಿದ್ದ ಗೌತಮಿ ಅವರು ಸಿಹಿ-ಕಹಿಯನ್ನು ಸಮಾನವಾಗಿ ಸ್ವೀಕಸಿರಿ ಆಡುತ್ತೇನೆ ಎಂದು ಹೇಳಿದ್ದರು. ದೈಹಿಕವಾದ ಟಾಸ್ಕ್ ನಲ್ಲಿ ಉತ್ತಮವಾಗಿ ಆಡುತ್ತಿದ್ದರು. ಆದರೆ ಕಡಿಮೆ ವೋಟ್ ಬಂದ ಕಾರಣ ಗೌತಮಿ Biggboss ಮನೆಯಿಂದ ಹೊರಬಂದಿದ್ದಾರೆ. ಅಲ್ಲದೆ ವೀಕೆಂಡ್ನ ನಲ್ಲೂ ಒಬ್ಬರು ಆಚೆ ಹೋಗುವ ಸಾಧ್ಯತೆ ಇದೆ. ಆ ನಂತರ ಏಳು ಸ್ಪರ್ಧಿಗಳು ಮಾತ್ರ ಕಣದಲ್ಲಿರುತ್ತಾರೆ.
Advertisement