
ಪ್ರಮೋದ್ ಮತ್ತು ಪೃಥ್ವಿ ಅಂಬಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಭುವನಂ ಗಗನಂ' ಚಿತ್ರವು ಫೆಬ್ರುವರಿ 14 ರ ಪ್ರೇಮಿಗಳ ದಿನದಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಥೆ, ಚಿತ್ರಕಥೆ ಬರೆದಿರುವ ಗಿರೀಶ್ ಮೂಲಿಮನಿ ನಿರ್ದೇಶನದ ಈ ಚಿತ್ರವನ್ನು ಎಸ್‌ವಿಸಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ ಮುನೇಗೌಡ ನಿರ್ಮಿಸಿದ್ದಾರೆ.
ಕನ್ನಡ ಚಲನಚಿತ್ರೋದ್ಯಮದಲ್ಲಿನ ಸವಾಲುಗಳ ಹೊರತಾಗಿಯೂ, ವಿಶೇಷವಾಗಿ ಚಿತ್ರಮಂದಿರಗಳ ಸುಸ್ಥಿರತೆ ಮತ್ತು ಟಿವಿ ಮತ್ತು OTT ವೇದಿಕೆಗಳಿಗೆ ವಿತರಣಾ ವ್ಯವಹಾರಗಳು ಕಷ್ಟ ಎನಿಸಿವೆ. ಆದರೆ, 'ಭುವನಂ ಗಗನಂ' ಚಿತ್ರವು ಪ್ರಮುಖ ವಿತರಣಾ ಒಪ್ಪಂದವನ್ನು ಮಾಡಿಕೊಂಡಿದೆ. ಚಂದನ್ ಸುರೇಶ್ ಅವರ ಕಂಪನಿಯು ಚಿತ್ರದ ಕರ್ನಾಟಕ ವಿತರಣಾ ಹಕ್ಕುಗಳನ್ನು ಗಣನೀಯ ಮೊತ್ತಕ್ಕೆ ಪಡೆದುಕೊಂಡಿದೆ ಮತ್ತು ರಾಜ್ಯದಾದ್ಯಂತ ಬಿಡುಗಡೆ ಮಾಡಲು ಯೋಜಿಸಿದೆ.
ಚಿತ್ರವು ಅದರ ಆಕರ್ಷಕ ಹಾಡುಗಳು ಮತ್ತು ಟೀಸರ್‌ನೊಂದಿಗೆ ಆಸಕ್ತಿಯನ್ನು ಹುಟ್ಟುಹಾಕಿದೆ. ಭುವನಂ ಗಗನಂ ಚಿತ್ರವು ಅನನ್ಯ ಪ್ರೇಮ ಕಥೆಯಾಗಿದ್ದು, ನಾಯಕರಾದ ಪ್ರಮೋದ್ ಮತ್ತು ಪೃಥ್ವಿ ಅವರಿಗೆ ಜೋಡಿಯಾಗಿ ರಾಚೆಲ್ ಡೇವಿಡ್ ಮತ್ತು ಅಶ್ವತಿ ನಟಿಸಿದ್ದಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಹರಿಣಿ ಮತ್ತು ಸ್ಪರ್ಶ ರೇಖಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Advertisement