ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2' OTT ಬಿಡುಗಡೆ: ಜ.30ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್?

OTT ಬಿಡುಗಡೆ ದಿನಾಂಕದ ಕುರಿತು ಚಿತ್ರತಂಡ ಅಥವಾ ನೆಟ್‌ಫ್ಲಿಕ್ಸ್ ಯಾವುದೇ ಪ್ರಕಟಣೆಯನ್ನು ಹಂಚಿಕೊಂಡಿಲ್ಲ.
Allu Arjun's Pushpa 2
ಪುಷ್ಪ 2 ಚಿತ್ರದ ಪೋಸ್ಟರ್
Updated on

ಸುಕುಮಾರ್ ನಿರ್ದೇಶನದ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಹೀಗಿರುವಾಗಲೇ, ಜನವರಿ ಅಂತ್ಯದ ವೇಳೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಪುಷ್ಪ 2 ಸಿನಿಮಾ ಸ್ಟ್ರೀಮ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಡಿಸೆಂಬರ್‌ನಲ್ಲಿ ಪುಷ್ಪ 2 ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ 56 ದಿನಗಳ ನಂತರ ಒಟಿಟಿ ವೇದಿಕೆಗಳಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿರುತ್ತದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಜನವರಿ 17 ರಂದು ಚಿತ್ರತಂಡ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳೊಂದಿಗೆ ಪುಷ್ಪ 2 ರೀಲೋಡೆಡ್ ಆವೃತ್ತಿಯನ್ನು ಬಿಡುಗಡೆ ಮಾಡಿತು. 'ಪುಷ್ಪ 2' ಚಿತ್ರವು ಜನವರಿ 30 ಅಥವಾ ಜನವರಿ 31 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಬಹುದು. ಆದಾಗ್ಯೂ, OTT ಬಿಡುಗಡೆ ದಿನಾಂಕದ ಕುರಿತು ಚಿತ್ರತಂಡ ಅಥವಾ ನೆಟ್‌ಫ್ಲಿಕ್ಸ್ ಯಾವುದೇ ಪ್ರಕಟಣೆಯನ್ನು ಹಂಚಿಕೊಂಡಿಲ್ಲ.

ನೆಟ್‌ಫ್ಲಿಕ್ಸ್ ಪುಷ್ಪ 2 ರ ವಿಸ್ತೃತ ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆಯೇ ಎಂದುದು ಸದ್ಯಕ್ಕೆ ತಿಳಿದಿಲ್ಲ. ರೀಲೋಡೆಡ್ ಮಾಡಲಾದ ಆವೃತ್ತಿಯ ಬಿಡುಗಡೆ ನಂತರ, ಮೂಲ ಆವೃತ್ತಿಯು ಎತ್ತಿರುವ ಅನೇಕ ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಎಂದು ಹಲವರು ಗಮನಸೆಳೆದಿದ್ದಾರೆ.

ಡಿಸೆಂಬರ್ 20 ರಂದು ಚಿತ್ರ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್, ಚಿತ್ರ ಬಿಡುಗಡೆಯಾದ 56 ದಿನಕ್ಕೂ ಮೊದಲು ಯಾವುದೇ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರವು ಇರುವುದಿಲ್ಲ ಎಂದಿದೆ.

''ಪುಷ್ಪ 2' ಚಿತ್ರದ OTT ಬಿಡುಗಡೆಯ ಬಗ್ಗೆ ವದಂತಿಗಳಿವೆ. ಈ ಬಿಗ್ಗೆಸ್ಟ್ ಹಾಲಿಡೇ ಸೀಸನ್‌ನಲ್ಲಿ ಬಿಗ್ ಸ್ಕ್ರೀನ್‌ಗಳಲ್ಲಿ ಮಾತ್ರ ಅತಿ ದೊಡ್ಡ ಚಿತ್ರ Pushpa 2 ಅನ್ನು ಆನಂದಿಸಿ. ಚಿತ್ರ ಬಿಡುಗಡೆಯಾದ 56 ದಿನಗಳಿಗೂ ಮುನ್ನ ಯಾವುದೇ OTT ನಲ್ಲಿ ಇರುವುದಿಲ್ಲ! Wild Fire Pushpa ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿದೆ' ಎಂದಿದೆ.

ಪುಷ್ಪ 2 ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಅವರ ಪಾತ್ರವನ್ನು ಪುಷ್ಪರಾಜ್ ಆಗಿ ಪುನರಾವರ್ತಿಸಿದ್ದಾರೆ. ಫಹಾದ್ ಫಾಸಿಲ್ ಅವರ ಭನ್ವರ್ ಸಿಂಗ್ ಶೇಖಾವತ್ ಅವರೊಂದಿಗಿನ ಮುಖಾಮುಖಿ ದೃಶ್ಯಗಳು ಮತ್ತು ಡಾಲಿ ಧನಂಜಯ ಅವರ ಜಾಲಿ ರೆಡ್ಡಿ ಪಾತ್ರಗಳು ಉತ್ತಮವಾಗಿ ಮೂಡಿಬಂದಿವೆ.

ಪುಷ್ಪ 2 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಂಡಿದ್ದು, ಪುಷ್ಪ 3 ಚಿತ್ರಕ್ಕಾಗಿ ನಿರ್ದೇಶಕ ಸುಕುಮಾರ್ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಭನ್ವರ್ ಸಿಂಗ್ ಶೇಖಾವತ್, ಜಗಪತಿ ಬಾಬು, ರಾವ್ ರಮೇಶ್, ಅನಸೂಯಾ ಭಾರದ್ವಾಜ್, ಸುನೀಲ್ ಮತ್ತು ಇತರರು ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com