
ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 ಹಲವು ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ. ಕಿಚ್ಚ ಸುದೀಪ್ ಈಗಾಗಲೇ ಹೋಸ್ಟ್ ಆಗಿ ಈ ಸೀಸನ್ ಕೊನೆಯದು ಎಂದಿದ್ದಾರೆ. ಮುಂಬರುವ ಸೀಸನ್‌ನಲ್ಲಿ ಯಾವ ನಟ ಅಥವಾ ನಟಿ ಕಿಚ್ಚ ಸುದೀಪ್ ಅವರ ಸ್ಥಾನವನ್ನು ತುಂಬಲಿದ್ದಾರೆ ಎನ್ನುವ ಮಾತುಗಳು ಈಗಾಗಲೇ ಕೇಳಿಬರುತ್ತಿವೆ. ಇನ್ನೊಂದೆಡೆ ಉಳಿದೆಲ್ಲಾ ಭಾಷೆಗಳಿಗಿಂತ ಕನ್ನಡದ ಬಿಗ್ ಬಾಸ್ ಟಿಆರ್‌ಪಿಯಲ್ಲಿ ಮುಂದಿದೆ ಎನ್ನಲಾಗಿದೆ.
ಇತ್ತ ಬಿಗ್ ಬಾಸ್ ಶೋ ಮುಗಿಯುವ ಹಂತಕ್ಕೆ ಬಂದಿದ್ದು, ಫಿನಾಲೆಯಲ್ಲಿ ವಿನ್ನರ್ ಯಾರು ಎಂಬುದನ್ನು ಘೋಷಿಸುವುದಷ್ಟೇ ಬಾಕಿ ಉಳಿದಿದೆ. ಶನಿವಾರ ಮತ್ತು ಭಾನುವಾರದ ಕಿಚ್ಚನ ಪಂಚಾಯಿತಿಯಲ್ಲಿ ಬಿಗ್ ಬಾಸ್ ಕಿರೀಟ ಯಾರ ಪಾಲಾಗಲಿದೆ ಎಂಬುದಕ್ಕೆ ಉತ್ತರ ಸಿಗಲಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ, ರಜತ್, ತ್ರಿವಿಕ್ರಮ್, ಭವ್ಯಾ, ಉಗ್ರಂ ಮಂಜು ಮತ್ತು ಹನುಮಂತ ಇದ್ದಾರೆ.
ಹನುಮಂತ ವಿನ್ನರ್?
ಬಿಗ್ ಬಾಸ್ ಮನೆಗೆ ವೈಲ್ಡ್ ಕಾಲ್ಡ್ ಮೂಲಕ ಎಂಟ್ರಿ ಕೊಟ್ಟ ಹನುಮಂತ ತಮ್ಮ ಮುಗ್ಧತೆಯಿಂದಲೇ ಎಲ್ಲರ ಮನ ಸೆಳೆದವರು. ಮನೆಗೆ ಬಂದಾಗಿನಿಂದಲೂ ಯಾವುದರ ಬಗ್ಗೆಯೂ, ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಹನುಮಂತ ಟಾಸ್ಕ್ ನಲ್ಲಿ ಮಿಂಚಿದ್ದು ಈಗ ಇತಿಹಾಸ. ಘಟಾನುಘಟಿ ಸ್ಪರ್ಧಿಗಳು ಎನಿಸಿಕೊಂಡವರ ಮಧ್ಯೆ ಟಾಸ್ಕ್ ಗೆದ್ದು ಫಿನಾಲೆ ಟಿಕೆಟ್ ಪಡೆದ ಮೊದಲ ಸ್ಪರ್ಧಿ ಹನುಮಂತ ಆಗಿದ್ದರು. ಒಂದರ್ಥದಲ್ಲಿ ಮನೆಯ ಉಳಿದೆಲ್ಲಾ ಸ್ಪರ್ಧಿಗಳಿಗಿಂತ ಹನುಮಂತ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದೇ ಗುರುತಿಸಿಕೊಳ್ಳುತ್ತಿದ್ದಾರೆ.
ಮೂಲಗಳ ಪ್ರಕಾರ, ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಹನುಮಂತ ಎಂದು ಹೇಳಲಾಗುತ್ತಿದೆ. ಹನುಮಂತ ಇದೀಗ ಫಿನಾಲೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ವರದಿಗಳ ಪ್ರಕಾರ, ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿನ್ನರ್ ಕಾರ್ತಿಕ್ ಮಹೇಶ್ ಪಡೆದಿದ್ದ 2 ಕೋಟಿ 98 ಲಕ್ಷ ಮತಗಳಿಗೂ ಅಧಿಕ ಮತಗಳನ್ನು ಹನುಮಂತ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಹನುಮಂತ ಹೊಸ ದಾಖಲೆ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಜನಗಳ ಮೆಚ್ಚುಗೆಗೆ ಪಾತ್ರವಾಗಿರುವ ಹನುಮಂತ ಅವರಿಗೆ ಈ ಬಾರಿಯ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ಫಿನಾಲೆಗೂ ಮುನ್ನ ಭವ್ಯಾ ಔಟ್?
ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳ ಪೈಕಿ ಯಾರೂ ಊಹಿಸಿಯೇ ಇರದಂತ ಭವ್ಯಾ ಗೌಡ ಅವರು ಫಿನಾಲೆಗೂ ಮುನ್ನವೇ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಭವ್ಯಾ ಗೌಡ ಅವರು ಅತೀ ಕಡಿಮೆ ಮತಗಳನ್ನು ಪಡೆದ ಕಾರಣ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ವರದಿಯಾಗಿದೆ.
Advertisement