
ಚೆನ್ನೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ಇದೀಗ ನಟನೆಗೆ ಮುಂದಾಗುತ್ತಿದ್ದಾರೆ. ಲೋಗನ್ ನಿರ್ದೇಶಿಸಲಿರುವ ತಮಿಳು ಚಿತ್ರದಲ್ಲಿ ರೈನಾ ನಟನಾಗಿ ಪದಾರ್ಪಣೆ ಮಾಡಲಿದ್ದಾರೆ.
ಕ್ರಿಕೆಟ್ ಆಧರಿತವಾಗಿರುವ ಈ ಚಿತ್ರವನ್ನು ನಿರ್ಮಾಪಕ ಸರವಣ ಕುಮಾರ್ ತಮ್ಮ ಡ್ರೀಮ್ ನೈಟ್ ಸ್ಟೋರೀಸ್ (ಡಿಕೆಎಸ್) ಅಡಿಯಲ್ಲಿ ನಿರ್ಮಿಸಲಿದ್ದಾರೆ. ನಿರ್ಮಾಣ ಸಂಸ್ಥೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಶಿವಂ ದುಬೆ ಅಧಿಕೃತವಾಗಿ ಪ್ರೊಡಕ್ಷನ್ ಹೌಸ್ ಹೆಸರು ಮತ್ತು ಅದರ ಲೋಗೋವನ್ನು ಅನಾವರಣಗೊಳಿಸಿದರು.
ರಜೆಯ ನಿಮಿತ್ತ ಕುಟುಂಬ ಸಮೇತ ಆಮ್‌ಸ್ಟರ್‌ಡ್ಯಾಮ್‌ನಲ್ಲಿರುವ ಸುರೇಶ್ ರೈನಾ ವಿಡಿಯೋ ಕಾಲ್ ಮೂಲಕ ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡರು. ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದ್ದೆ. ಆದರೆ, ಸ್ವಲ್ಪ ತಡವಾಗಿ ತಿಳಿಸಿದ್ದರಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ನಟನಾಗಿ ಚೊಚ್ಚಲ ಪ್ರವೇಶಕ್ಕೆ ತಮಿಳು ಮತ್ತು ನಿರ್ಮಾಣ ಸಂಸ್ಥೆ ಡಿಕೆಎಸ್ ಆಯ್ಕೆ ಮಾಡಲು ಕಾರಣವೇನು ಎಂದು ಕೇಳಿದ್ದಕ್ಕೆ ಉತ್ತರಿಸಿದ ರೈನಾ, 'ಡಿಕೆಎಸ್‌ಗೆ ಉತ್ತಮ ನಿರ್ದೇಶಕರಿದ್ದಾರೆ ಮತ್ತು ನಿರ್ದೇಶಕರು ನನಗೆ ಕಥೆ ಹೇಳಿದಾಗ ಅದು ನಮಗೆ ತುಂಬಾ ಹತ್ತಿರವಾಗಿತ್ತು. ನಂತರ ಕ್ರಿಕೆಟ್ ಆಧರಿಸಿದ ಚಿತ್ರವಾಗಿರುವುದರಿಂದ ಇದು ತಮಿಳುನಾಡಿನಿಂದ ಪ್ರಾರಂಭವಾಗಬೇಕು ಏಕೆಂದರೆ ನಾವು ಸಿಎಸ್‌ಕೆಗೆ ಬಹಳ ವರ್ಷಗಳಿಂದ ಸಾಕಷ್ಟು ಪಂದ್ಯಗಳನ್ನು ಆಡಿದ್ದೇವೆ ಎಂದರು.
Advertisement