
ಬಿಜೆಪಿಯ ಮಾಜಿ ಸಂಸದೆ ಸ್ಮೃತಿ ಇರಾನಿ ಹಲವು ವರ್ಷಗಳ ಬಳಿಕ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದು, 'ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ' ಧಾರವಾಹಿಯ ತುಳಸಿ ವೀರ್ವಾನಿಯಾಗಿ ಮತ್ತೊಮ್ಮೆ ವೀಕ್ಷಕರನ್ನು ರಂಜಿಸಲಿದ್ದಾರೆ. ಕ್ಯೂಂಕಿ ಸಾಸ್ ಭೀ ಕಭಿ ಬಹು ಥೀ ಸೀಸನ್ 2 ಧಾರವಾಹಿಯ ನಟಿ ಸ್ಮೃತಿ ಇರಾನಿ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.
ಗೋಲ್ಡ್ ಬಾರ್ಡರ್ ಹೊಂದಿರುವ ಮೆರೂನ್ ಮಿಶ್ರಿತ ಸೀರೆ ಯಲ್ಲಿ ಸಾಂಪ್ರದಾಯಿಕ ಗೃಹಿಣಿ ಲುಕ್ ನಲ್ಲಿ ಇರಾನಿ ಕಾಣಿಸಿಕೊಂಡಿದ್ದಾರೆ. ಮಂಗಳ ಸೂತ್ರ, ಆಭರಣ ಮತ್ತು ಕೆಂಪು ಬಿಂದಿಯೊಂದಿಗೆ ಈ ಸೀರೆಯಲ್ಲಿ ಅಪ್ಪಟ ದೇಶೀಯ ಗ್ರಾಮೀಣ ಮಹಿಳೆಯಂತೆ ಅವರು ಕಂಗೊಳಿಸಿದ್ದಾರೆ.
ಹೊಸ ಆವೃತ್ತಿಯು ಜುಲೈ 29 ರಂದು ರಾತ್ರಿ 10:30 ಕ್ಕೆ ಸ್ಟಾರ್ ಪ್ಲಸ್‌ನಲ್ಲಿ ಮೂಡಿಬರಲಿದೆ. ಸಹಜವಾಗಿ, ಈ ಬಾರಿ ಇರಾನಿ ಅವರಿಗೆ ಎಷ್ಟು ಸಂಭಾವನೆ ನೀಡಲಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಇದ್ದೇ ಇರುತ್ತದೆ.
ಎನ್‌ಡಿಟಿವಿ ವರದಿಯ ಪ್ರಕಾರ, ಹೊಸ ಆವೃತ್ತಿಯಲ್ಲಿ ಆಕೆಗೆ ಪ್ರತಿ ಎಪಿಸೋಡ್ ಗೆ ರೂ. 14 ಲಕ್ಷ ನೀಡಲಾಗುತ್ತದೆ ಎನ್ನಲಾಗಿದೆ.
2000 ಇಸವಿಯ ಆರಂಭದಲ್ಲಿ ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಸೀಸನ್ 1 ರಲ್ಲಿ ತುಳಸಿ ವೀರ್ವಾನಿ ಪ್ರದಾನ ಪಾತ್ರದಲ್ಲಿ ವೀಕ್ಷಕರನ್ನು ರಂಜಿಸಿದ್ದ ಸ್ಮೃತಿ ಅವರು ಪ್ರತಿ ಎಪಿಸೋಡ್ ಗೆ ರೂ 1,800 ಸಂಭಾವನೆ ಪಡೆದಿದ್ದರು ಎಂದು ವರದಿಗಳು ಹೇಳುತ್ತವೆ.
2000 ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಆರಂಭವಾದ 'ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ ಸೀಸನ್-1 2008 ರವರೆಗೆ ಮೂಡಿಬಂದಿತ್ತು.
ಧಾರವಾಹಿ ನಿರ್ಮಾಕರು ಇದೀಗ ಎರಡನೇ ಸೀಸನ್‌ನೊಂದಿಗೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ತುಳಸಿ ಪಾತ್ರದಲ್ಲಿ ಸ್ಮೃತಿ ಅವರ ಅಭಿನಯ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಪ್ರೋಮೋವನ್ನು ಸ್ಟಾರ್ ಪ್ಲಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.
Advertisement