
ಅಮೃತ ಸಿನಿ ಕ್ರಾಫ್ಟ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ಉದ್ಯಮಿ ವಿಜಯ್ ಟಾಟಾ, ಆರು ಕನ್ನಡ ಚಿತ್ರಗಳನ್ನು ಘೋಷಿಸಿದ್ದಾರೆ. ಇವುಗಳಲ್ಲಿ ಕೃಷ್ಣ ಅಜಯ್ ರಾವ್ ನಿರ್ದೇಶನ ಹಾಗೂ ನಟನಾಗಿ ಅಭಿನಯಿಸುತ್ತಿರುವ ಚಿತ್ರ, ಮರ್ಫಿನಿರ್ದೇಶಕ ಬಿಎಸ್ ಪಿ ವರ್ಮಾ, ವಿನಯ್ ರಾಜ್ ಕುಮಾರ್ ಕಾಂಬಿನೇಷನ್ ಸಿನಿಮಾ, ಸಿಂಪಲ್ ಸುನಿ ನಿರ್ದೇಶನದ ಚಿತ್ರ, ವಿಕ್ರಮ್ ರವಿಚಂದ್ರನ್ ಅವರೊಂದಿಗೆ ರಿಷಬ್ ಆರ್ಯ ಅವರ ಚಿತ್ರಗಳು ಸೇರಿವೆ.
ಅದೇ ರೀತಿ ವಿಕಿ ವರುಣ್ ಗಾಗಿ ಪ್ರಶಾಂತ್ ಸಿದ್ದಿ ನಿರ್ದೇಶನದ ಚಿತ್ರ ಮತ್ತು ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನದ ಸಿನಿಮಾವೊಂದು ಸೇರಿದೆ. ಕುತೂಹಲಕಾರಿ ಸಂಗತಿ ಅಂದ್ರೆ, ರವಿಚಂದ್ರನ್ ಅವರೇ ನಿರ್ದೇಶಿಸುತ್ತಿರುವ ಏಳನೇ ಪ್ರಾಜೆಕ್ಟ್ ಕೆಲಸ ಕೂಡಾ ನಡೆಯುತ್ತಿದೆ.
ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಈ ಚಿತ್ರಗಳ ಘೋಷಣೆ ಮಾಡಲಾಯಿತು. ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ರಾಮಲಿಂಗಾ ರೆಡ್ಡಿ, ಕ್ರೇಜಿ ಸ್ಟಾರ್ ವಿ ರವಿಚಂದ್ರನ್, ಶ್ರೀಮುರಳಿ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರೊಂದಿಗೆ ಕೃಷ್ಣ ಅಜಯ್ ರಾವ್, ಶರಣ್, ಸುನಿ, ರಾಗಿಣಿ ದ್ವಿವೇದಿ, ನಿರೂಪ್ ಭಂಡಾರಿ, ರಾಜವರ್ಧನ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪಂಜಾಬ್ ಮೂಲದ ವಿಜಯ್ ಟಾಟಾ ಅವರ ಪತ್ನಿ ಅಮೃತಾ ಟಾಟಾ ಅವರು ಕರ್ನಾಟಕದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಚಿತ್ರ ನಿರ್ಮಾಣದ ಮಹತ್ವಾಕಾಂಕ್ಷೆಯನ್ನು ಕನ್ನಡದಿಂದಲೇ ಆರಂಭಿಸಿದ್ದಾರೆ.
ಅಮೃತಾ ಸಿನಿ ಕ್ರಾಫ್ಟ್ ಬ್ಯಾನರ್ ಅನಾವರಣಗೊಳಿಸಿದ ವಿಜಯ್ ಟಾಟಾ, ಪ್ರೇಮಲೋಕದ ಹಾಡಿನ ಬಗ್ಗೆ ತಮ್ಮ ಹೆಂಡತಿಯೊಂದಿಗೆ ಸಾಂದರ್ಭಿಕ ವಾದಗಳು ಹೇಗೆ ಸಿನಿಮಾ ಬಗ್ಗೆ ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು ಎಂಬುದನ್ನು ಹಂಚಿಕೊಂಡರು. ಬಲವಾದ ಮಾರ್ಕೆಟಿಂಗ್ ಇಲ್ಲ ಎಂಬುದು ನಮಗೆ ಗೊತ್ತಿದೆ. ಉತ್ತಮ ಕಂಟೆಂಟ್, ಸ್ಥಗಿತಗೊಂಡಿದ್ದ ಪ್ರಾಜೆಕ್ಟ್ ಮತ್ತು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರೊಂದಿಗೆ ಹೆಜ್ಜೆ ಹಾಕಲು ಬಯಸುತ್ತೇವೆ" ಎಂದು ಅವರು ಹೇಳಿದರು. ಟಾಟಾ ವಿತರಣೆಗೂ ಯೋಜಿಸಿದೆ.
ಸಮಾರಂಭದಲ್ಲಿ ಮಾತನಾಡಿದ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ನಿರ್ದೇಶಕರುಗಳಿಗೆ ಕಠಿಣ ಸಂದೇಶ ರವಾನಿಸಿದರು. ಕನ್ನಡ ಚಿತ್ರೋದ್ಯಮ ಸುಂದರವಾದ ಹಂತದಲ್ಲಿದೆ. ಹೊಸ ಪ್ರತಿಭೆಗಳು ಬರುತ್ತಿದ್ದಾರೆ. ಪ್ರೇಕ್ಷಕರು ಹೊಸ ಕಥೆಗಳನ್ನು ಬಯಸುತ್ತಿದ್ದಾರೆ. ಆದರೆ, ಸೃಜನಾತ್ಮಕತೆ ಜೊತೆಗೆ ಶಿಸ್ತು ಅತಿ ಮುಖ್ಯವಾಗಿದೆ. ಎಲ್ಲಾ ನಿರ್ದೇಶಕರುಗಳಿಗೆ ಸರಳವಾದ ಷರತ್ತು ಹಾಕುತ್ತಿದ್ದೇನೆ. ಆರು ತಿಂಗಳೊಳಗೆ ಚಿತ್ರವನ್ನು ಮುಗಿಸಿ. ಹಣವನ್ನು ಸುಮ್ಮನೆ ವ್ಯರ್ಥ ಮಾಡಬೇಡಿ. ಪ್ರೊಢಕ್ಷನ್ ನೊಂದಿಗೆ ಜವಾಬ್ದಾರರಾಗಿರಿ. ನಿಮ್ಮ ಬಜೆಟ್‌ನಲ್ಲಿ ಅಲ್ಲ, ಕಾಗದದ ಮೇಲೆ ತಪ್ಪುಗಳನ್ನು ಮಾಡಿ ಎಂದು ಸಲಹೆ ನೀಡಿದರು.
ಹೌದು, ಈ ಬ್ಯಾನರ್‌ಗೆ ನಾನೇ ಸಿನಿಮಾ ನಿರ್ದೇಶನ ಮಾಡುತ್ತೇನೆ. ಅವರ ದೂರದೃಷ್ಟಿಯಲ್ಲಿ ನಂಬಿಕೆಯಿದೆ. ನಾವು ಕೇವಲ ಸಿನಿಮಾಗಳನ್ನು ಘೋಷಿಸಬಾರದು-ಅವುಗಳನ್ನು ಮಾಡಿ ಮುಗಿಸೋಣ ಎಂದರು.
ಶ್ರೀಮುರಳಿ ಮಾತನಾಡಿ,“ಅಮೃತ ಸಿನಿ ಕ್ರಾಫ್ಟ್ ಸ್ಪಷ್ಟತೆ ಮತ್ತು ಬದ್ಧತೆಯಿಂದ ಚಿತ್ರರಂಗ ಪ್ರವೇಶಿಸಿದೆ. ಈ ರೀತಿಯ ಉದ್ದೇಶ ಹೊಂದಿರುವುದು ಅಪರೂಪ. ಇಂತಹ ಪ್ರಯತ್ನಗಳಿಗೆ ನಾವೆಲ್ಲರೂ ಬೆಂಬಲ ನೀಡಿದರೆ ಕನ್ನಡ ಚಿತ್ರರಂಗ ಹೊಸ ಎತ್ತರಕ್ಕೆ ಬೆಳೆಯಲಿದೆ. ಎಲ್ಲರೂ ಒಗ್ಗಟ್ಟಾಗಿ ಚಿತ್ರೋದ್ಯಮ ಬೆಳೆಸೋಣ ಎಂದು ಹೇಳಿದರು. ಪ್ರಶಾಂತ್ ಸಿದ್ದಿ, ವಿಕಿ ವರುಣ್ ಗಾಗಿ ನಿರ್ದೇಶಿಸುತ್ತಿರುವ ಚಿತ್ರವನ್ನು ಮೊದಲು ಮಾಡುವುದಾಗಿ ಚಿತ್ರ ನಿರ್ಮಾಪಕರು ಘೋಷಿಸಿದರು.
Advertisement