'ಮುಧೋಳ್' ಚಿತ್ರೀಕರಣ ಮುಕ್ತಾಯದ ಹಂತಕ್ಕೆ, ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್!

ನನ್ನ ಕೈಯಲ್ಲಿ ಪ್ರಸ್ತುತ ಮೂರು ಚಿತ್ರಗಳಿವೆ. ಎಲ್ಲವೂ ಹೊಸ ನಿರ್ದೇಶಕರು ಮತ್ತು ಹೊಸ ಕಥೆಗಳಾಗಿವೆ. ಅದರಲ್ಲಿ ಒಂದನ್ನು ಮಂಜುನಾಥ್ ರೆಡ್ಡಿ ನಿರ್ಮಿಸುತ್ತಿದ್ದಾರೆ.
Vikram Ravichandran
ವಿಕ್ರಮ್ ರವಿಚಂದ್ರನ್
Updated on

ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ಎರಡನೇ ಸಿನಿಮಾ 'ಮುಧೋಳ್' ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದ್ದು, ಇನ್ನೂ ಕೇವಲ 10 ರಿಂದ 14 ದಿನಗಳ ಚಿತ್ರೀಕರಣ ಬಾಕಿ ಉಳಿದಿದೆ. ಈ ನಡುವೆ ನಟ ಮಂಜುನಾಥ್ ರೆಡ್ಡಿ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರಕ್ಕೆ ಈಗಾಗಲೇ ಕ್ಯಾಮೆರಾ ಎದುರಿಸುತ್ತಿದ್ದಾರೆ.

"ನನ್ನ ಕೈಯಲ್ಲಿ ಪ್ರಸ್ತುತ ಮೂರು ಚಿತ್ರಗಳಿವೆ. ಎಲ್ಲವೂ ಹೊಸ ನಿರ್ದೇಶಕರು ಮತ್ತು ಹೊಸ ಕಥೆಗಳಾಗಿವೆ. ಅದರಲ್ಲಿ ಒಂದನ್ನು ಮಂಜುನಾಥ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಚಿತ್ರದ ಹೆಸರನ್ನು ಶೀಘ್ರದಲ್ಲೇ ಘೋಷಿಸುತ್ತೇವೆ. ಮೂರನೇ ಸಿನಿಮಾದ ಬಗ್ಗೆ ಅಂತಿಮ ಹಂತದ ಚರ್ಚೆ ನಡೆಯುತ್ತಿದೆ ಎಂದು ವಿಕ್ರಮ್ ತಿಳಿಸಿದರು.

ಒಂದು ವರ್ಷದಿಂದ ಸ್ನಾಯು ಎಳೆತ ಸಮಸ್ಯೆಯಿಂದ ಬಳಲುತ್ತಿದ್ದು, ಈಗ ಎರಡೂ ಭುಜಗಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಅದಕ್ಕೂ ಮುನ್ನಾ ಶೂಟಿಂಗ್ ಮುಗಿಸಲು ಪರ್ಯಾಯ ಮಾರ್ಗ ಹುಡುಕುತ್ತಿರುವುದಾಗಿ ಅವರು ಹೇಳಿದರು.

ಸಂಭಾವನೆ ಹೊರತಾಗಿ ವೃತ್ತಿಪರತೆಗೆ ಬದ್ಧತೆ ದೃಢವಾಗಿ ಉಳಿದಿದೆ. ನೆಲ್ಸನ್‌ ಚಿತ್ರದಲ್ಲಿ ಒಂದು ಪಾತ್ರವಿದ್ದರೂ ಆ ಪ್ರಾಜೆಕ್ಟ್ ಸದ್ಯ ಸ್ಥಗಿತಗೊಂಡಿದೆ. ಮೂರು ನಿರ್ಮಾಪಕರಿಗೆ ಮುಂಗಡ ಹಣವನ್ನು ಹಿಂದಿರುಗಿಸಿದ್ದೇನೆ. ನನ್ನಗೆ ಪಾತ್ರ ಹೊಂದಿಕೆಯಾಗದಿದ್ದರೆ ನಿರ್ಮಾಪಕರ ಹಣ ದುರುಪಯೋಗವಾಗಲು ಬಯಸುವುದಿಲ್ಲ. ಪ್ರತಿಯೊಂದು ಪ್ರಾಜೆಕ್ಟ್ ಗೂ ಸೂಕ್ತ ಸಮಯ ಮತ್ತು ಶ್ರಮವನ್ನು ಗೌರವಿಸುತ್ತೇನೆ ಎನ್ನುತ್ತಾರೆ ವಿಕ್ರಮ್.

Vikram Ravichandran
'ಪ್ರೇಮಲೋಕ 2' updates: ಪುತ್ರ ಮನೋರಂಜನ್, ವಿಕ್ರಮ್ ಜೊತೆ ರವಿಚಂದ್ರನ್; ಚಿತ್ರದಲ್ಲಿ 25 ಹಾಡು!

ಮಂಜುನಾಥ್ ರೆಡ್ಡಿ ಅವರ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಕಮರ್ಷಿಯಲ್ ಸಿನಿಮಾವಾಗಿದೆ. ಆದರೆ ಪೌರಾಣಿಕ ಹಿನ್ನೆಲೆಯ ಕಥಾಹಂದರವೂ ಇದೆ. ಹೊಸ ಪ್ರಕಾರದ ಚಿತ್ರಗಳಲ್ಲಿ ಅಭಿನಯಿಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿದ್ದೇನೆ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com