
ಮಲಯಾಳಂ ನಟ ಶೈನ್ ಟಾಮ್ ಚಾಕೊ ಮತ್ತು ಅವರ ಕುಟುಂಬ ಕಾರು ಅಪಘಾತಕ್ಕೀಡಾಗಿದೆ. ಇಂದು ಬೆಳಿಗ್ಗೆ ತಮಿಳುನಾಡು ಬಳಿ ಈ ಅಪಘಾತ ಸಂಭವಿಸಿದೆ. ಟಾಮ್ ಚಾಕೊ ಅವರ ತಂದೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅಪಘಾತದ ನಂತರ ನಟ ಮತ್ತು ಇತರ ಕುಟುಂಬ ಸದಸ್ಯರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮನೋರಮಾ ಪ್ರಕಾರ, ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ತಮಿಳುನಾಡಿನ ಧರ್ಮಪುರಿ ಬಳಿಯ ಪಾಲಕೊಟ್ಟೈ ಬಳಿ ಈ ಘಟನೆ ನಡೆದಿದೆ. ಚಾಕೊ ತನ್ನ ಚಾಲಕ, ಪೋಷಕರು ಮತ್ತು ಸಹೋದರನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದ್ದಕ್ಕಿದ್ದಂತೆ ಅವರ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಚಾಕೊ ಅವರ ತಂದೆ ಸಿಪಿ ಚಾಕೊ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇತರರು ಪ್ರಸ್ತುತ ಪಾಲಕೊಟ್ಟೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಪೂರ್ಣವಾಗಿ ಹಾನಿಗೊಳಗಾದ ಕಾರಿನ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ವೈದ್ಯರು ಚಾಕೊಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿಯೂ ಕಾಣಿಸಿಕೊಂಡಿವೆ.
ಶೈನ್ ಟಾಮ್ ಚಾಕೊ ಒಂದು ತಿಂಗಳ ಹಿಂದೆ ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಂತರ ಸುದ್ದಿಯಲ್ಲಿದ್ದರು. ಓರ್ವ ನಟಿ ಮಾದಕ ವಸ್ತುಗಳ ಪ್ರಭಾವದಿಂದ ತನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿದ್ದರು. ಇದಾದ ನಂತರ, ಪೊಲೀಸರು ಚಾಕೋ ವಿರುದ್ಧ ಕ್ರಮ ಕೈಗೊಂಡರು. ತನ್ನ ಸಿನಿಮಾಗಳ ಸೆಟ್‌ಗಳಲ್ಲಿಯೂ ಅವನು ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದನೆಂದು ನಟಿ ಹೇಳಿಕೊಂಡಿದ್ದರು. ಇಡೀ ತಂಡ ಮತ್ತು ನಿರ್ಮಾಣ ಘಟಕಕ್ಕೆ ಅವನ ನಡವಳಿಕೆಯ ಬಗ್ಗೆ ತಿಳಿದಿತ್ತು.
ನಟಿಯ ದೂರಿನ ಮೇರೆಗೆ, ಪೊಲೀಸರು ಚಾಕೊ ತಂಗಿದ್ದ ಹೋಟೆಲ್ ಮೇಲೆ ದಾಳಿ ನಡೆಸಿ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ. ಆದರೆ ಪೊಲೀಸರ ರೈಡ್ ಮಾಡುತ್ತಿರುವ ಸುಳಿವು ಸಿಕ್ಕ ತಕ್ಷಣ ನಟ ಅಲ್ಲಿಂದ ಪರಾರಿಯಾಗಿದ್ದನು. ಕೆಲ ದಿನಗಳ ಬಳಿಕ ಆತ ಪೊಲೀಸರ ಮುಂದೆ ಶರಣಾಗಿದ್ದು ಅದೇ ದಿನ ಜಾಮೀನು ಸಿಕ್ಕಿತ್ತು. ನಂತರ ಅವನನ್ನು ಕೇರಳ ಸರ್ಕಾರದ ವ್ಯಸನ ಮುಕ್ತಿ ಕಾರ್ಯಕ್ರಮ 'ವಿಮುಕ್ತಿ' ಅಡಿಯಲ್ಲಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಯಿತು.
Advertisement