
ನವದೆಹಲಿ: ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಅವರ ಸಂಬಂಧದ ಬಗ್ಗೆ ಊಹಾಪೋಹಗಳು ಹೆಚ್ಚುತ್ತಲೇ ಇವೆ. ವದಂತಿಗಳ ಬಗ್ಗೆ ಇಬ್ಬರೂ ಮಾತನಾಡದೇ ಇದ್ದರೂ, ಈ ಇಬ್ಬರ ನಡುವೆ ಏನೋ ಇದೆ ಎಂಬುದನ್ನು ಇಂಟರ್ನೆಟ್ ಬಳಕೆದಾರರು ಮತ್ತೊಮ್ಮೆ ಎತ್ತಿ ತೋರಿಸಿದ್ದಾರೆ.
ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೊದಿಂದ ಮತ್ತೊಮ್ಮೆ ವದಂತಿಗಳು ಹುಟ್ಟಿಕೊಂಡಿವೆ. ಅಬು ಧಾಬಿಯ ಕಸ್ರ್ ಅಲ್ ಸರಬ್ ಡೆಸರ್ಟ್ ರೆಸಾರ್ಟ್‌ನಲ್ಲಿನ ಸಮಂತಾ ಅವರ ಫೋಟೊಗಳಿಂದ ಇಬ್ಬರು ಒಟ್ಟಿಗೆ ಇರಬಹುದು ಎನ್ನಲಾಗಿದೆ.
ಫೋಟೊವೊಂದರಲ್ಲಿ ಸಮಂತಾ ಅವರು ಸನ್ ಗ್ಲಾಸ್ ಧರಿಸಿದ್ದು, ರೆಡ್ಡಿಟ್ ಬಳಕೆದಾರರು ಆ ಪ್ರತಿಬಿಂಬವು ರಾಜ್ ನಿಡಿಮೋರು ಚಿತ್ರವನ್ನು ತೆಗೆದಿರುವುದಾಗಿ ತೋರುತ್ತಿದೆ ಎಂದಿದ್ದಾರೆ. ಈ ಚಿತ್ರ ವೈರಲ್ ಆಗಿದೆ.
ಸಮಂತಾ ಕಪ್ಪು ಬಣ್ಣದ ಈಜುಡುಗೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ, ಪುಸ್ತಕ ಓದುತ್ತಿರುವ ಮತ್ತು ದೂರದರ್ಶಕದ ಮೂಲಕ ನಕ್ಷತ್ರಗಳನ್ನು ವೀಕ್ಷಿಸುತ್ತಿರುವ ಚಿತ್ರಗಳ ಸರಣಿಯಲ್ಲಿ ಈ ಫೋಟೊ ಕಾಣಿಸಿಕೊಂಡಿದೆ.
ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ದೇ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ರಹಸ್ಯ ಸಂದೇಶಗಳನ್ನು ಹಂಚಿಕೊಂಡಿದ್ದರು. 'ಸಮಯವು ಬಹಿರಂಗಪಡಿಸುತ್ತದೆ, ಕರ್ಮ ಸರಿಪಡಿಸುತ್ತದೆ, ಬ್ರಹ್ಮಾಂಡವು ವಿನಮ್ರಗೊಳಿಸುತ್ತದೆ' ಎಂಬ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಕೆಲವು ದಿನಗಳ ಹಿಂದೆ, ಅವರು 'ಒಳ್ಳೆಯ ಕೆಲಸವನ್ನು ಮಾಡಿ. ಜನರಿಗೆ ಸಹಾಯ ಮಾಡಿ ಮತ್ತು ಜನರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಿ' ಎಂಬ ಇನ್ನೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದರು.
ಇತ್ತೀಚೆಗೆ ಸಮಂತಾ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಕೆಲವು ಫೋಟೊಗಳಲ್ಲಿ ರಾಜ್ ನಿಡಿಮೋರು ಇರುವುದು ಕಂಡುಬಂದಿದೆ. ಸಮಂತಾ ಈ ಹಿಂದೆ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು ಮತ್ತು 2021 ರಲ್ಲಿ ವಿಚ್ಛೇದನ ಪಡೆದರು.
Advertisement