ಸರಿಗಮಪ ಸೀಸನ್ 21 ವಿನ್ನರ್ ಬೀದರ್ ನ ಶಿವಾನಿ ಸ್ವಾಮಿ: ಸಿಕ್ಕ ಒಟ್ಟು ಹಣ ಎಷ್ಟು?
ಬೆಂಗಳೂರು: ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಸ ರಿ ಗ ಮ ಪ (Sa Ri Ga Ma Pa) 21ನೇ ಸೀಸನ್ಗೆ ತೆರೆಬಿದ್ದಿದೆ. ಈ ಸೀಸನ್‌ನ ವಿನ್ನರ್ ಪಟ್ಟವು ಬೀದರ್‌ನ ಶಿವಾನಿ ಸ್ವಾಮಿಗೆ ಒಲಿದಿದೆ.
ಈ ಹಿಂದೆ ಶಿವಾನಿ ಶಿವದಾಸ್ ಹಿಂದಿ ಐಡಿಯಲ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೂ ಕೂಡ ಫೇಮಸ್ ಆಗಿದ್ದರು. ಶಿವಾನಿ ಸ್ವಾಮಿ ಕಷ್ಟದಿಂದ ಮೇಲೆ ಬಂದವರು. ಅವರ ಪ್ರತಿಭೆಯನ್ನು ಗುರುತಿಸಿ ಝೀ ಕನ್ನಡ ಸರಿಗಮಪ ಶೋಗೆ ಅವಕಾಶ ನೀಡಿತು. ಇದೀಗ ವಿನ್ನರ್ ಶಿವಾನಿ ಸ್ವಾಮಿಗೆ ಹಲವು ಆಕರ್ಷಕ ಬಹುಮಾನ ಸಿಕ್ಕಿದೆ. ಮುಖ್ಯವಾಗಿ 15 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯ ಮತ್ತು ವೈಟ್ ಗೋಲ್ಡ್ ಕಡೆಯಿಂದ ಗಿಫ್ಟ್ ಹ್ಯಾಂಪರ್ ಸಿಕ್ಕಿದೆ. ಇದೆಲ್ಲದರ ಜೊತೆಗೆ ಬಹಳ ಮುಖ್ಯವಾದ ಸರಿಗಮಪ ವಿನ್ನಿಂಗ್ ಟ್ರೋಫಿಯನ್ನು ಶಿವಾನಿ ತಮ್ಮದಾಗಿಸಿಕೊಂಡಿದ್ದಾರೆ.
ಜೊತೆಗೆ ಪರ್ಫಾಮರ್ ಆಫ್ ದಿ ಸೀಸನ್ ಪ್ರಶಸ್ತಿಯು ಶಿವಾನಿ ಸ್ವಾಮಿಗೆ ಸಿಕ್ಕಿದೆ. ಅದಕ್ಕಾಗಿ ಅವರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ನೀಡಲಾಗಿದೆ. ಸರಿಗಮಪ ಜೊತೆ ಮಾರುತಿ ಸುಜುಕಿ ಸಂಸ್ಥೆ ಅಸೋಸಿಯೆಟ್ ಆಗಿದೆ. ಹೀಗಾಗಿ ಕಂಪನಿಯ ಕಾರು ಶಿವಾನಿ ಅವರಿಗೆ ಸಿಕ್ಕಿದೆ. ಮೊದಲ ರನ್ನರ್ ಅಪ್ ಆಗಿರುವ ಉಡುಪಿಯ ಆರಾಧ್ಯ ರಾವ್‌ಗೆ 10 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. ಮೈಸೂರಿನ ರಶ್ಮಿ ಅವರು ಸೆಕೆಂಡ್ ರನ್ನರ್ ಅಪ್ ಆಗಿದ್ದು, ಅವರಿಗೆ 5 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ.
ಸರಿಗಮಪ ಸೀಸನ್ 21 ಕಾರ್ಯಕ್ರಮದಲ್ಲಿ ಟಾಪ್ 3 ಹಂತಕ್ಕೆ ಹೋದ ಮೂವರೂ.. ಮಹಿಳಾ ಸ್ಪರ್ಧಿಗಳೇ ಅನ್ನೋದು ವಿಶೇಷ. ಟಾಪ್ 3 ಹಂತಕ್ಕೆ ಬಂದವರು - ಶಿವಾನಿ ಸ್ವಾಮಿ, ರಶ್ಮಿ ಹಾಗೂ ಆರಾಧ್ಯ ರಾವ್. ಈ ಮೂವರ ಪೈಕಿ ಶಿವಾನಿ ಸ್ವಾಮಿ ವಿನ್ನರ್ ಆಗಿದ್ದು, ಆರಾಧ್ಯ ರಾವ್ ರನ್ನರ್ ಅಪ್ ಆಗಿದ್ದಾರೆ. ರಶ್ಮಿ ಮೂರನೇ ಸ್ಥಾನ ಗಿಟ್ಟಿಸಿದ್ದಾರೆ.