ಚೆನ್ನೈಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ: ರಶ್ಮಿಕಾ ಮಂದಣ್ಣ
ಚೆನ್ನೈ: ರಶ್ಮಿಕಾ ಮಂದಣ್ಣ ಬಹುಭಾಷಾ ಹಾಗೂ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಸದ್ಯ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಧನುಷ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಕುಬೇರʼ ಮುಂದಿನ ವಾರ ರಿಲೀಸ್ ಆಗಲಿದೆ. ಈ ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ನಿರತವಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದ ಫೋಟೋವನ್ನು ರಶ್ಮಿಕಾ ಹಂಚಿಕೊಂಡಿದ್ದು, ಈ ವೇಳೆ ಅವರು ಫೋಟೋ ಕೆಳಗೆ ಬರೆದುಕೊಂಡಿರುವ ಕ್ಯಾಪ್ಷನ್ ಕನ್ನಡಿಗರ ಟೀಕೆಗೆ ಗುರಿಯಾಗಿದೆ.
ಇತ್ತೀಚೆಗೆ ಚೆನ್ನೈನಲ್ಲಿ 'ಕುಬೇರʼ ಚಿತ್ರದ ಕಾರ್ಯಕ್ರವೊಂದಿತ್ತು. ಇದರಲ್ಲಿ ಧನುಷ್, ನಾಗಾರ್ಜುನ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ರಶ್ಮಿಕಾ ಮಂದಣ್ಣ ಅವರು ಇವೆಂಟ್‌ನ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಚೆನ್ನೈ ಹಾಗೂ ತಮಿಳು ಭಾಷೆ ಬಗ್ಗೆ ಹೊಗಳಿದ್ದಾರೆ.
ರಶ್ಮಿಕಾ ಮಂದಣ್ಣ ಅವರಿಗೆ ಎಲ್ಲ ಹೀರೋಗಳ ಜೊತೆ ಒಳ್ಳೆಯ ನಂಟು ಬೆಳೆದಿದೆ. ಅದರಲ್ಲೂ ನಾಗಾರ್ಜುನ ಜೊತೆಗೆ ಅವರಿಗೆ ಒಳ್ಳೆಯ ನಂಟಿದೆ. ಈ ಮೊದಲು ‘ದೇವದಾಸ’ ಹೆಸರಿನ ಚಿತ್ರದಲ್ಲಿ ರಶ್ಮಿಕಾ ಹಾಗೂ ನಾಗಾರ್ಜುನ ಒಟ್ಟಿಗೆ ನಟಿಸಿದ್ದರು. ಇದರಿಂದ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಅದು ಈಗಲೂ ಮುಂದುವರಿದಿದೆ. ‘ಕುಬೇರ’ ಸಿನಿಮಾದಲ್ಲಿ ಮತ್ತೆ ಇವರಿಗೆ ತೆರೆ ಹಂಚಿಕೊಳ್ಳುವ ಅವಕಾಶ ದೊರೆತಿದೆ.
ನಾವು ಕುಬೇರ ಚಿತ್ರದ ಪ್ರಮೋಷನ್ನ ಚೆನ್ನೈನಲ್ಲಿ ಆರಂಭಿಸಿದ್ದೇವೆ. ನನ್ನ ಬಾಲ್ಯ ಇಲ್ಲಿ ಕಳೆದ ಕಾರಣಕ್ಕೆ ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ. ನನಗೆ ಖುಷಿ ಇದೆ. ನಾನು ಅಂದು (ಈವೇಂಟ್ ದಿನ) ಸಾಕಷ್ಟು ನಕ್ಕಿದ್ದೇನೆ ಎಂದಿದ್ದಾರೆ. ಚೆನ್ನೈನ ಹೊಗಳಿದ್ದಕ್ಕೆ ಅನೇಕ ಕನ್ನಡಿಗರು ಅವರನ್ನು ಟೀಕಿಸಿದ್ದಾರೆ.
ಈ ಮೊದಲು ಅವರು ಚೆನ್ನೈ ಬಗ್ಗೆ ಮಾತನಾಡಿದ್ದರು. ‘ನನ್ನ ಬಾಲ್ಯ ಚೆನ್ನೈನಲ್ಲೇ ಕಳೆದಿದ್ದೇನೆ. ಅಪ್ಪ ಇಲ್ಲಿ ಕೆಲಸ ಮಾಡುತ್ತಿದ್ದರಿಂದ ನಾವು ಚೆನ್ನೈನಲ್ಲಿ ವಾಸಿಸುತ್ತಿದ್ದೆವು. ನಾನು ರಸ್ಕಿನ್ ಎಂಬ ಶಾಲೆಯಲ್ಲಿ ಓದಿದೆ ಮತ್ತು ಆ ಶಾಲೆ ಇನ್ನೂ ಇದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಅದರ ನಂತರ ನಾವು ಕೂರ್ಗ್‌ಗೆ ಸ್ಥಳಾಂತರಗೊಂಡೆವು. ನಾನು ಕಲಿತ ಮೊದಲ ಭಾಷೆ ತಮಿಳು’ ಎಂದು ರಶ್ಮಿಕಾ ಹೇಳಿದ್ದರು.
ಈ ಹಿಂದೆ ರಶ್ಮಿಕಾ ನಾಗಾರ್ಜುನ್ ಅವರ ಜತೆ ʼದೇವದಾಸ್ʼ ಎನ್ನುವ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದು, ಅವರ ಜತೆ ಉತ್ತಮ ಬಾಂಧವ್ಯ ರಶ್ಮಿಕಾಗೆ ಇದೆ. ಹೀಗಾಗಿ ಅವರ ಜತೆಗಿನ ಆತ್ಮೀಯತೆಯನ್ನು ಪ್ರೀತಿಯಿಂದ ಬರೆದುಕೊಂಡಿದ್ದಾರೆ.