
ಹೈದರಾಬಾದ್: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡು ಹಾಡಿರುವ ಖ್ಯಾತ ತೆಲುಗು ಗಾಯಕಿ ಮಂಗ್ಲಿ ಅವರ ಬರ್ತ್ಡೇ ಪಾರ್ಟಿ ಮೇಲೆ ಮಂಗಳವಾರ ರಾತ್ರಿ ತೆಲಂಗಾಣದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ ಮತ್ತು 9 ಮಂದಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಹೈದರಾಬಾದ್ ಹೊರವಲಯದಲ್ಲಿರುವ ಚೆವೆಲ್ಲಾದಲ್ಲಿರುವ ತ್ರಿಪುರಾ ರೆಸಾರ್ಟ್‌ನಲ್ಲಿ ಗಾಯಕಿ ಮಂಗ್ಲಿ ಅವರ ಬರ್ತ್ಡೇ ಪಾರ್ಟಿ ನಡೆಯುತ್ತಿತ್ತು. ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ರಕ್ತದ ಮಾದರಿಗಳನ್ನು ಪಡೆದು, ಪರೀಕ್ಷೆ ನಡೆಸಿದ್ದು, ಒಂಬತ್ತು ಜನ ಗಾಂಜಾ ಸೇವಿಸಿರುವುದು ಕಂಡುಬಂದಿದೆ. ಅಲ್ಲದೆ ಪಾರ್ಟಿಯಲ್ಲಿ ಕೆಲ ವಿದೇಶಿ ಮದ್ಯಗಳು ಸಹ ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅನುಮತಿಯಿಲ್ಲದೆ ವಿದೇಶಿ ಮದ್ಯ ಆಮದು ಮಾಡಿಕೊಂಡಿದ್ದಕ್ಕಾಗಿ ಗಾಯಕಿ ಮಂಗ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪಾರ್ಟಿಯಲ್ಲಿ ಮಂಗ್ಲಿ ಅವರ ಕುಟುಂಬ, ಆಪ್ತ ಸ್ನೇಹಿತರು ಮತ್ತು ತೆಲುಗು ಚಿತ್ರರಂಗದ ಹಲವ ಗಣ್ಯ ವ್ಯಕ್ತಿಗಳು ಸೇರಿದಂತೆ ಸುಮಾರು 50 ಅತಿಥಿಗಳು ಭಾಗವಹಿಸಿದ್ದರು. ರಚ್ಚಾ ರವಿ, ದಿವಿ, ಕಾಸರ್ಲಾ ಶ್ಯಾಮ್, ಗಾಯಕಿ ಇಂದ್ರಾವತಿ ಮತ್ತು ಇತರ ಗಣ್ಯರು ಸಹ ಪಾರ್ಟಿಯಲ್ಲಿ ಉಪಸ್ಥಿತರಿದ್ದರು.
Advertisement