ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟರೂ ಕರ್ನಾಟಕದಲ್ಲಿ 'ಥಗ್ ಲೈಫ್' ಚಿತ್ರ ಬಿಡುಗಡೆ ಆಗಲ್ಲ; ಯಾಕೆ ಗೊತ್ತಾ?

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ ಎಂಬ ನಟನ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಮಲ್ ಹಾಸನ್ ಅಭಿನಯದ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸಲಾಯಿತು.
Thug Life film poster
ಥಗ್ ಲೈಫ್ ಚಿತ್ರದ ಪೋಸ್ಟರ್
Updated on

ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರವನ್ನು ಬಿಡುಗಡೆ ಮಾಡಲು ಆದೇಶಿಸಿದ ಒಂದು ದಿನದ ನಂತರ, ಥಗ್ ಲೈಫ್‌ನ ಕರ್ನಾಟಕದ ವಿತರಕರು ಚಿತ್ರವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನಾನು ಕರ್ನಾಟಕ ವಿತರಣಾ ಹಕ್ಕನ್ನು ಖರೀದಿಸಿದೆ. ಆದರೆ ನಾನು ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡಲ್ಲ. ಅದಕ್ಕೆ ಹಲವು ಕಾರಣಗಳಿವೆ. ತಮಿಳುನಾಡಿನಲ್ಲಿ ಬಿಡುಗಡೆಯಾಗಿದ್ದರೂ ಚಿತ್ರವು ಯಶಸ್ಸು ಕಂಡಿಲ್ಲ ಎಂದು ವಿತರಕ ವೆಂಕಟೇಶ್ ಕಮಲಾಕರ್ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಒಟ್ಟು ಕಲೆಕ್ಷನ್ ವಿಷಯದಲ್ಲಿ ಯಾವುದೇ ಚಿತ್ರವು ಮೊದಲ ಎರಡು ವಾರಗಳ ಅದ್ಭುತ ಪ್ರದರ್ಶನ ಮುಖ್ಯ ಎಂದು ಅವರು ಹೇಳಿದರು.

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ ಎಂಬ ನಟನ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಮಲ್ ಹಾಸನ್ ಅಭಿನಯದ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸಲಾಯಿತು. ರಾಜ್ಯದಲ್ಲಿ ಚಲನಚಿತ್ರವನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ರಾಜ್ಯದಲ್ಲಿ ಯಾವ ಚಿತ್ರ ಬಿಡುಗಡೆ ಆಗಬೇಕು ಅಥವಾ ಬೇಡ ಎಂಬುದನ್ನು ಕೆಲ ಗುಂಪುಗಳು ನಿರ್ಧರಿಸಲು ಆಗಲ್ಲ. ಇದಕ್ಕೆಲ್ಲಾ ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಕಾನೂನಿನ ನಿಯಮವನ್ನು ಸ್ಥಾಪಿಸಬೇಕು ಮತ್ತು ಜನರು ಚಲನಚಿತ್ರವನ್ನು ನೋಡದಂತೆ ತಡೆಯಲು ಅವರ ತಲೆಯ ಮೇಲೆ ಬಂದೂಕುಗಳನ್ನು ಇಡಬಾರದು ಎಂದು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರ ಪೀಠ ಹೇಳಿದೆ. ಕಮಲ್ ಹಾಸನ್ ಅವರ ಹೇಳಿಕೆಗೆ ಕರ್ನಾಟಕ ಹೈಕೋರ್ಟ್ ಅವರಿಂದ 'ಕ್ಷಮೆಯಾಚಿಸಲು ಅಥವಾ ವಿಷಾದಿಸಲು' ನಿದರ್ಶನ ನೀಡಲು ಬಾರದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

ಕರ್ನಾಟಕ ಹೊರತುಪಡಿಸಿ 2025ರ ಜೂನ್ 5ರಂದು ದೇಶಾದ್ಯಂತ ಥಗ್ ಲೈಫ್ ಬಿಡುಗಡೆಯಾಗಿತ್ತು. ಆದರೆ ಚಿತ್ರ ಹೀನಾಯ ಸೋಲು ಕಂಡಿದೆ. 180 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರ ಒಟ್ಟಾರೆ 90 ಕೋಟಿ ಗಳಿಸಲು ಸಾಧ್ಯವಾಗಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com