
ಚೆನ್ನೈ: ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ನಟ ಶ್ರೀಕಾಂತ್ ಅವರನ್ನು ಸೋಮವಾರ ಗ್ರೇಟರ್ ಚೆನ್ನೈ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ಡ್ರಗ್ಸ್ ಪ್ರಕರಣದ ಆರೋಪಿಗಳು ನೀಡಿದ ಹೇಳಿಕೆಯ ಆಧಾರದ ಮೇಲೆ ನಟ ಶ್ರೀಕಾಂತ್ ಅವರನ್ನು ಇಂದು ಬೆಳಗ್ಗೆ ವಿಚಾರಣೆಗೆ ಒಳಪಡಿಸಲಾಯಿತು.
ಒಂದು ವಾರದ ಹಿಂದೆ, ನುಂಗಂಬಾಕ್ಕಂ ಪೊಲೀಸರು ಘಾನಾ ಮೂಲದ ಜಾನ್ ಎಂಬ ವ್ಯಕ್ತಿಯನ್ನು ಬಂಧಿಸಿ, ಅವರಿಂದ 11 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದರು.
ಶ್ರೀಕಾಂತ್ ಅವರ ಬಂಧನವು ಈ ಕೊಕೇನ್ ಪ್ರಕರಣಕ್ಕೆ ಸಂಬಂಧಿಸಿದೆ ಮತ್ತು ನಟ ಅವರಿಂದ ಮಾದಕ ದ್ರವ್ಯ ಖರೀದಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಪೊಲೀಸರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
2002ರಲ್ಲಿ ರೋಜಾ ಕೂಟಂ ಸಿನಿಮಾ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ ಶ್ರೀಕಾಂತ್ ಅವರು, ಏಪ್ರಿಲ್ ಮಾಧತಿಲ್ (2002), ಪಾರ್ಥಿಬನ್ ಕಣವು (2003), ಒರು ನಾಲ್ ಒರು ಕಣವು (2005), ಪೂ (2008), ಮತ್ತು ನನ್ಬನ್ (2012) ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.
Advertisement