'ಮೈಸಾ’ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ: ರಕ್ತ ಸಿಕ್ತ ಗೆಟಪ್ ನಲ್ಲಿ ರಶ್ಮಿಕಾ ಮಂದಣ್ಣ!

ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ. ನಟನೆಯಲ್ಲಿ ಪಳಗಿರುವ ಅವರಿಗೆ, ವಿವಿಧ ರೀತಿಯ ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ.
Rashmika’s Mysaa First look
ಮೈಸಾ’ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ
Updated on

ರಶ್ಮಿಕಾ ಮಂದಣ್ಣ ನಟನೆಯ ‘ಮೈಸಾ’ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು, ಚಿತ್ರದಲ್ಲಿ ರಶ್ಮಿಕಾ ಅವರ ಗೆಟಪ್ ವಿಭಿನ್ನವಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡ ರಶ್ಮಿಕಾ, ' ನಾನು ಯಾವಾಗಲೂ ನಿಮಗೆ ಹೊಸದನ್ನು ನೀಡಲು ಪ್ರಯತ್ನಿಸುತ್ತೇನೆ... ವಿಭಿನ್ನವಾದದ್ದು... ರೋಮಾಂಚನಕಾರಿಯಾದದ್ದು.. ಅಂತಹದ್ದರಲ್ಲಿ ಇದು ಒಂದು.. ಎಂದು ಬರೆದುಕೊಂಡಿದ್ದಾರೆ.

'ನಾನು ಇದುವರೆಗೆ ನಟಿಸದ ಪಾತ್ರ... ನಾನು ಎಂದಿಗೂ ಕಾಲಿಡದ ಜಗತ್ತು... ಇದು ಉಗ್ರವಾಗಿದೆ.. ಇದು ತೀವ್ರವಾಗಿದೆ ಮತ್ತು ಇದು ತುಂಬಾ ಹೊಸದಾಗಿದೆ.. ತುಂಬಾ ಉತ್ಸುಕಳಾಗಿದ್ದೇನೆ..ಇದು ಕೇವಲ ಆರಂಭ' ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ರಶ್ಮಿಕಾ ಕೈಯಲ್ಲಿ ಆಯುಧ ಇದೆ. ಮುಖಕ್ಕೆ ರಕ್ತ ಅಂಟಿದೆ. ಅವರು ಕಣ್ಣಲ್ಲೇ ಸುಡುತ್ತಿದ್ದಾರೆ. ‘ಮೈಸಾ’ ಪ್ಯಾನ್ ಇಂಡಿಯಾ ಚಿತ್ರ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಸಿನಿಮಾಗೆ ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದಾರೆ. ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಎಂಬುವವರು ಚಿತ್ರಕ್ಕೆ ನಿರ್ಮಾಣ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ. ನಟನೆಯಲ್ಲಿ ಪಳಗಿರುವ ಅವರಿಗೆ, ವಿವಿಧ ರೀತಿಯ ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ಈಗ ಮಹಿಳಾ ಪ್ರಧಾನ ಸಿನಿಮಾ ಒಂದನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಮೈಸಾ’ ಎಂಬ ಟೈಟಲ್ ಇಡಲಾಗಿದೆ. ಈ ಶೀರ್ಷಿಕೆ ಗಮನ ಸೆಳೆಯುವಂತಿದೆ. ಅವರ ಲುಕ್ ಕೂಡ ಭಿನ್ನವಾಗಿದೆ.

Rashmika’s Mysaa First look
ಚೆನ್ನೈಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ: ರಶ್ಮಿಕಾ ಮಂದಣ್ಣ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com