
ಪುನೀತ್ ರಾಜ್‌ಕುಮಾರ್ ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ 'ಅಪ್ಪು' ಬಿಡುಗಡೆಯಾದ 2002 ಕನ್ನಡ ಚಿತ್ರರಂಗದಲ್ಲಿ ಸುವರ್ಣ ಯುಗವಾಗಿತ್ತು. 23 ವರ್ಷಗಳ ನಂತರ ರೊಮ್ಯಾಂಟಿಕ್, ಆಕ್ಷನ್ ಚಿತ್ರ ಪುನೀತ್ ಅವರ 50 ನೇ ಹುಟ್ಟುಹಬ್ಬವಾದ ನಾಳೆ ಮರು ಬಿಡುಗಡೆಯಾಗುತ್ತಿದೆ.
ಈ ಚಿತ್ರದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ ನಟಿ ರಕ್ಷಿತಾ, ಪುನೀತ್ ಮತ್ತು ಅದರ ಹಿಂದೆ ಇದ್ದ ಪ್ರತಿಭಾವಂತರೊಂದಿಗೆ ಕೆಲಸ ಮಾಡಿದ ಸುಮಧುರ ನೆನಪುಗಳನ್ನು ಮೆಲುಕು ಹಾಕಿದರು. "ಅಪ್ಪು ಡಬಲ್ ಸ್ಪೆಷಲ್" ಎಂದ ರಕ್ಷಿತಾ ಅವರ ಧ್ವನಿಯಲ್ಲಿ ಬೇಸರ, ವಿಷಾಧವಿತ್ತು. ಇದು ಕೇವಲ ಸಿನಿಮಾವಲ್ಲ. ಅದರ ಸುತ್ತಲಿನ ಪ್ರತಿಯೊಂದು ನೆನಪುಗಳು ಮರೆಯಲಾಗದಂತಹವು ಎಂದು ಅವರು ಹೇಳಿದರು.
ರಕ್ಷಿತಾಗೆ ಅಪ್ಪು ಜೊತೆಗಿನ ಒಡನಾಟ ಅವರ ನಟನಾ ವೃತ್ತಿಯನ್ನು ಮೀರಿದಾಗಿತ್ತು. ಆಕೆಯ ಪೋಷಕರು ವಜ್ರೇಶ್ವರಿ ಕಂಬೈನ್ಸ್‌ನಲ್ಲಿಯೇ ವೃತ್ತಿಜೀವನ ಆರಂಭಿಸಿದ್ದರು. ಆ ಪರಿಸರದಲ್ಲಿ ಬೆಳೆದ ಅವರು ಪಾರ್ವತಮ್ಮ ರಾಜ್‌ಕುಮಾರ್ ಅವರಿಂದ ಪ್ರೇರಿತರಾಗಿದ್ದರು. "ಪಾರ್ವತಮ್ಮ ರಾಜ್‌ಕುಮಾರ್ ನನಗೆ ಸ್ಪೂರ್ತಿಯಾಗಿದ್ದರು. ಪ್ರತಿ ಬಾರಿಯೂ ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಪುನೀತ್ ರಾಜ್ ಕುಮಾರ್ ಅವರ ಅದ್ಬುತ ಪ್ರತಿಭೆ ಕುರಿತು ಮಾತನಾಡಿದ ರಕ್ಷಿತಾ, ಅಪ್ಪು ಅದ್ಭುತ ಫೈಟರ್, ನೃತ್ಯಗಾರ. ನಿಂತಿದ್ದ ಜಾಗದಲ್ಲಿಯೇ ಡೈಲಾಂಗ್ ಡೆಲಿವರಿ ಮಾಡ್ತಿದ್ರು, ಅವರು ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದರಿಂದ ಅವರ ಪಕ್ಕದಲ್ಲಿ ಡ್ಯಾನ್ಸ್ ಮಾಡುವುದು ಮತ್ತು ನಟಿಸುವುದು ಕಷ್ಟವಾಗಿತ್ತು. ಅಪ್ಪು ಅವರಂತೆ ಇಂದು ಯಾವ ಹೀರೋ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು,
ಅಪ್ಪು ಚಿತ್ರ ಯಶಸ್ಸಿನಲ್ಲಿ ನಿರ್ದೇಶಕ ಪೂರಿ ಜಗನ್ನಾಥ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಮತ್ತು ನಿರ್ದೇಶಕ ಮಹೇಶ್ ಬಾಬು ಅವರ ಪ್ರಭಾವವೂ ಹೆಚ್ಚಾಗಿತ್ತು. ಗುರುಕಿರಣ್ ಅವರ ಸಂಗೀತ ಕೂಡಾ ಎಲ್ಲವೂ ವಿಶೇಷವಾಗಿತ್ತು ಎಂದು ರಕ್ಷಿತಾ ನೆನಪಿಸಿಕೊಂಡರು. ಹಾಸ್ಟೆಲ್ ಹುಡುಗರು ಬೇಕಾಗಿದ್ದರೆ ನಿರ್ಮಾಪಕ ವರುಣ್ ಪುನೀತ್ ಅವರ ದೊಡ್ಡ ಅಭಿಮಾನಿ. ಅಪ್ಪು ಚಿತ್ರ 20 ವರ್ಷಗಳನ್ನು ಪೂರೈಸಿದಾಗ ಅದ್ಧೂರಿ ಕಾರ್ಯಕ್ರಮದೊಂದಿಗೆ ಆಚರಿಸಲು ಬಯಸಿದ್ದರು. ಆದರೆ ಅದು ಆಗಲೇ ಇಲ್ಲ. ಈಗ ಇದಕ್ಕೆ 23 ವರ್ಷಗಳು. ನನ್ನ ಮಗನಿಗೆ ಈಗ 16 ವರ್ಷ. ಮತ್ತೆ ಸಿನಿಮಾ ನೋಡಿದಾಗ ತುಂಬಾ ನೆನಪುಗಳು ಬರುತ್ತವೆ. ಇದೊಂದು ಹೃದಯಸ್ಪರ್ಶಿ ಕ್ಷಣ ಎಂದು ನಕ್ಕರು.
ಈ ಹಿಂದೆ ಅಪ್ಪು ಸಿನಿಮಾವನ್ನು ಸಂಪೂರ್ಣವಾಗಿ ನೋಡಿರಲಿಲ್ಲ ಎಂದು ಒಪ್ಪಿಕೊಂಡ ರಕ್ಷಿತಾ, ಚಿತ್ರದ ಪೂರ್ಣ ಭಾಗ ವೀಕ್ಷಿಸಲು ಭಯವಾಗಿತ್ತು. ಆಗ ನನ್ನ ತಂದೆ ಬದುಕಿದ್ದರು ಮತ್ತು ನನಗೆ ಅಪ್ಪಾಜಿ, ಅಮ್ಮ, ಅಪ್ಪು ಮತ್ತು ನನ್ನ ಫೋಟೋ ನೆನಪಿದೆ. ಆ ನೆನಪುಗಳು ತುಂಬಾ ಮಧುರವಾಗಿತ್ತು. ಮೊದಲ ದಿನ ಪಾರ್ವತಮ್ಮ ನನ್ನ ಕೈ ಹಿಡಿದು, 'ಚಿಂತೆ ಮಾಡಬೇಡ, ನೀನು ಮಾಡ್ತಿಯಾ. ಭಯಪಡಬೇಡ' ಎಂದು ಹೇಳಿದ್ದು ನನಗೆ ನೆನಪಿದೆ. ನಾವು ಅವರ ಮುಂದೆ ಮಾತನಾಡಲು ಹೆದರುತ್ತಿದ್ದೆವು ಆದರೆ ಅಮ್ಮನ ಸಾಂತ್ವನದ ಮಾತುಗಳು ನನ್ನೊಂದಿಗೆ ಶಾಶ್ವತವಾಗಿ ಉಳಿದಿವೆ ಎಂದರು.
ಕನ್ನಡ ಚಿತ್ರರಂಗದ ಸುವರ್ಣ ಕಾಲದ ಭಾಗವಾಗಲು ನಾನು ಅದೃಷ್ಟಶಾಲಿಯಾಗಿದ್ದೆ. ಆಗ, ನಟರ ನಡುವೆ ಸಾಕಷ್ಟು ಒಡನಾಟವಿತ್ತು. ಕ್ಯಾರವಾನ್‌ಗಳಿರಲಿಲ್ಲ. ಡಿಜಿಟಲ್ ಕ್ಯಾಮೆರಾಗಳು ಇರಲಿಲ್ಲ. ಚಿತ್ರ ನಿರ್ಮಾಣ ಒಂದು ಜವಾಬ್ದಾರಿಯಂತೆ ಭಾಸವಾಗುತಿತ್ತು. ಮೊದಲ ಶಾಟ್‌ನ ನಂತರ ನಾವೆಲ್ಲರೂ ಒಟ್ಟಿಗೆ ಚಪ್ಪಾಳೆ ತಟ್ಟುತ್ತಿದ್ದೇವು. ಇದು ಹೆಚ್ಚು ವೈಯಕ್ತಿಕ, ಒಡನಾಟ ಕಲ್ಪಿಸುತಿತ್ತು. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ, ಮಾತನಾಡುತ್ತಿದ್ದೇವೆ. ಆ ಸೌಹಾರ್ದತೆಯೇ ಅದನ್ನು ವಿಶೇಷವಾಗಿಸಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಸೆಲ್ಫಿಗಳು ಬೇಗ ಜನಪ್ರಿಯತೆ ತಂದರೆ, ಆಗ,ನಾವು ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅದು ಆಟೋಗ್ರಾಫ್ ಆಗಿತ್ತು. ನನ್ನ ಮೊದಲ ಆಟೋ ಗ್ರಾಫ್ ಮನಸಿಗೆ ಬಹಳ ಮುದ ನೀಡಿತ್ತು. ಇಂತಹ ಚಿಕ್ಕ ವಿಷಯಗಳು ಮುಖ್ಯವಾದವು ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಬೆಂಗಳೂರಿನಲ್ಲಿ ಆಗ ಟ್ರಾಫಿಕ್ ಇಲ್ಲದ ಸಮಯದಲ್ಲಿ ಸುಲಭವಾಗಿ ಚಿತ್ರೀಕರಣ ಮಾಡಲಾಗಿತ್ತು. ತಾಲಿಬಾನ್ ಅಲ್ಲಾ ಅಲ್ಲಾ ಮತ್ತು ಚೇಸಿಂಗ್ ನಂತಹ ದೃಶ್ಯಗಳು ಮತ್ತು ಹಾಡುಗಳನ್ನು ರಸ್ತೆಗಳಲ್ಲಿ ಚಿತ್ರೀಕರಿಸಲಾಗಿದೆ. ನಾವು ಪ್ರತಿ ಚಿತ್ರದಿಂದ ಕಲಿಯುತ್ತೇವೆ. ಇಂದಿನ ನಟರು ಮೊದಲ ಚಿತ್ರದಿಂದ ಬಂದಿದ್ದಾಗಿ ಹೇಳುತ್ತಾರೆ. ಆದರೆ, ಪ್ರತಿ ಚಿತ್ರಕ್ಕೂ ನಾವು ಆರಂಭಿಕರೇ ಎಂದರು.
ಕೆಲವೊಮ್ಮೆ ದೊಡ್ಡ ಪರದೆಯಿಂದ ದೂರ ಉಳಿದ ಬಗ್ಗೆ ಬೇಸರ ಆಗುತ್ತದೆ. ಆದರೆ, ಪ್ರತಿವರ್ಷ ನನ್ನ ಶೋ ನೊಂದಿಗೆ ಮತ್ತೆ ಬಂದಾಗ ಅದು ನನ್ನ ಜನರೊಂದಿಗೆ ಸಂಪರ್ಕಿಸುತ್ತದೆ. ಒಂದು ವೇಳೆ ನನ್ನಗೆ ಸರಿಹೊಂದುವಂತಹ ಪಾತ್ರ ಬಂದರೆ ಅದನ್ನು ಖಂಡಿತವಾಗಿಯೂ ಪರಿಗಣಿಸುತ್ತೇನೆ ಎಂದು ಅವರು ಹೇಳಿದರು.
Advertisement