ಪುನೀತ್ ನಟನೆಯ 'ನಿನ್ನಿಂದಲೇ' ಖ್ಯಾತಿಯ ಎರಿಕಾ ಫರ್ನಾಂಡಿಸ್‌ಗೆ ದೈಹಿಕ ಕಿರುಕುಳ; ಸಂಕಷ್ಟ ತೋಡಿಕೊಂಡ ನಟಿ

ಮೂಲತಃ ಕರ್ನಾಟಕದ ಮಂಗಳೂರಿನವರಾದ ಎರಿಕಾ, ಮುಂಬೈನಲ್ಲಿ ನೆಲೆಸಿದ್ದರು. ಪುನೀತ್ ರಾಜ್‌ಕುಮಾರ್ ನಟನೆಯ ನಿನ್ನಿಂದಲೆ ನಂತರ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬುಗುರಿ ಚಿತ್ರದಲ್ಲಿ ನಟಿಸಿದ್ದರು.
ಎರಿಕಾ ಫರ್ನಾಂಡಿಸ್
ಎರಿಕಾ ಫರ್ನಾಂಡಿಸ್
Updated on

ನಟ ಪುನೀತ್ ರಾಜ್‌ಕುಮಾರ್ ನಟನೆಯ ನಿನ್ನಿಂದಲೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಎರಿಕಾ ಫರ್ನಾಂಡಿಸ್ ಇತ್ತೀಚೆಗೆ ತಮ್ಮ ಸಂಗಾತಿಯಿಂದಲೇ ದೈಹಿಕ ಕಿರುಕುಳ ಅನುಭವಿಸಿದ ಬಗ್ಗೆ ಮಾತನಾಡಿದ್ದಾರೆ.

ಶಾರ್ದೂಲ್ ಪಂಡಿತ್ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಎರಿಕಾ, 'ದೋ ಪತ್ತಿ' ಚಿತ್ರವು ತನ್ನ ಹಳೆಯ ನೋವುಗಳನ್ನು ಕಣ್ಮುಂದೆ ತಂದಿದೆ. ನಾನು ಈ ಹಿಂದೆ ನನ್ನ ಸಂಗಾತಿಯಿಂದ ತುಂಬಾ ಕಿರುಕುಳಕ್ಕೊಳಗಾಗಿದ್ದೇನೆ. ಆ ಸಂಬಂಧದಿಂದ ದೈಹಿಕವಾಗಿಯೂ, ಮಾನಸಿಕವಾಗಿಯೂ ನನಗೆ ಕಿರುಕುಳವಾಗಿದೆ. ಆ ಸಮಯದಲ್ಲಿ ನಾನು ಅದನ್ನು ಹೊರಗೆ ಹೇಳಿಕೊಳ್ಳಲಿಲ್ಲ' ಎಂದಿದ್ದಾರೆ.

'ನೀವು ನಟರಾಗಿದ್ದರೆ ನಿಮ್ಮ ಜೀವನದ ಎಲ್ಲವೂ ಸುದ್ದಿಯಾಗುತ್ತದೆ. ನೀವು ಪೊಲೀಸರ ಬಳಿ ಹೋದರೆ, ಅದು ಮಾಧ್ಯಮಗಳಲ್ಲಿ ಹರಡುತ್ತದೆ. ಬಳಿಕ ಮಾಧ್ಯಮ ವಿಚಾರಣೆ ಆರಂಭವಾಗುತ್ತದೆ. ನೀವು ಹೆಸರನ್ನು ಬಹಿರಂಗಪಡಿಸದಿದ್ದರೆ, ಜನರು ಬೇರೆ ಯಾರೊಂದಿಗಾದರೂ ಲಿಂಕ್ ಮಾಡಲು ಪ್ರಾರಂಭಿಸುತ್ತಾರೆ. ಜೊತೆಗೆ, ನನಗೆ ಪೊಲೀಸರ ಬಳಿ ನ್ಯಾಯ ಸಿಗುತ್ತದೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಷ್ಟೊಂದು ನಂಬಿಕೆ ಇರಲಿಲ್ಲ' ಎಂದು ತಿಳಿಸಿದ್ದಾರೆ.

ಈ ಕಾರಣಕ್ಕಾಗಿಯೇ ಮಹಿಳೆಯರು ಮಾತನಾಡುವುದಿಲ್ಲ. ಮಾತನಾಡಿದರೆ ಅವರನ್ನು ಗುರಿಯಾಗಿಸಿಕೊಂಡು 'ನೀವು ಇಷ್ಟು ದಿನ ಏಕೆ ಮೌನವಾಗಿದ್ದಿರಿ? ಈಗ ಏಕೆ ಮಾತನಾಡುತ್ತಿದ್ದೀರಿ?' ಎಂದು ಪ್ರಶ್ನಿಸಲಾಗುತ್ತದೆ. ನೀವು ಅವುಗಳ ಬಗ್ಗೆ ಮಾತನಾಡಲು ಸಿದ್ಧರಾಗುವ ಮೊದಲು ಈ ವಿಷಯಗಳನ್ನು ವೈಯಕ್ತಿಕವಾಗಿ ನಿಭಾಯಿಸಲು ಸಮಯ ಬೇಕಾಗುತ್ತದೆ. ನನ್ನ ಹಿಂದಿನ ಸಂಬಂಧವು ನನ್ನಲ್ಲಿ ಆಳವಾದ ಗಾಯ ಮಾಡಿದ್ದು, ಈಗಲೂ ಅದರ ಪರಿಣಾಮ ನನ್ನ ಮೇಲಾಗುತ್ತಿದೆ' ಎಂದರು.

ಎರಿಕಾ ಫರ್ನಾಂಡಿಸ್
ಮಾಜಿ ಪತಿ ನಾಗ ಚೈತನ್ಯ ಜೊತೆಗಿನ ಮ್ಯಾಚಿಂಗ್ ಟ್ಯಾಟೂ ತೆಗೆದುಹಾಕಿದ ಸಮಂತಾ ರುತ್ ಪ್ರಭು!

ಮೂಲತಃ ಕರ್ನಾಟಕದ ಮಂಗಳೂರಿನವರಾದ ಎರಿಕಾ, ಮುಂಬೈನಲ್ಲಿ ನೆಲೆಸಿದ್ದರು. ಪುನೀತ್ ರಾಜ್‌ಕುಮಾರ್ ನಟನೆಯ ನಿನ್ನಿಂದಲೆ ನಂತರ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬುಗುರಿ ಚಿತ್ರದಲ್ಲಿ ನಟಿಸಿದ್ದರು. 31 ವರ್ಷದ ನಟಿ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ.

'ಆಗ ನನ್ನ ಪರಿಸ್ಥಿತಿಯನ್ನು ನಾನೇ ನಿಭಾಯಿಸುತ್ತಿದ್ದೆ. ಈ ಸಮಸ್ಯೆ ಬಗ್ಗೆ ತಿಳಿದಿರುವ ಕೆಲವು ಜನರೊಂದಿಗೆ ಮಾತನಾಡುತ್ತಿದ್ದೆ. ಆ ಕಹಿ ಘಟನೆ ನನ್ನ ಮೇಲೆ ಗಾಯವನ್ನುಂಟುಮಾಡಿತು. ಈಗಲೂ ಕೆಲವೊಮ್ಮೆ, ದೈಹಿಕ ಕಿರುಕುಳ, ಪುರುಷನೊಬ್ಬ ಮಹಿಳೆ ಮೇಲೆ ದೌರ್ಜನ್ಯ ಎಸಗುವ ಚಿತ್ರಗಳನ್ನು ನೋಡಿದಾಗ, ನನಗೆ ಆ ನೆನಪುಗಳು ಬರುತ್ತವೆ' ಎಂದು ಅಳಲು ತೋಡಿಕೊಂಡಿದ್ದಾರೆ.

ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರವೇ ಉಳಿದಿದ್ದ ಎರಿಕಾ ಫರ್ನಾಂಡಿಸ್ ಇತ್ತೀಚೆಗೆ ಕರಣ್ ಕುಂದ್ರಾ ಅವರೊಂದಿಗೆ ಥ್ರಿಲ್ಲರ್ ಸರಣಿ 'ಲವ್ ಅಧುರಾ'ದಲ್ಲಿ ನಟಿಸಿದ್ದರು. ಸದ್ಯ ಅವರು ದುಬೈನಲ್ಲಿ ಎಮಿರೇಟ್ಸ್ ಡ್ರಾ ಎಂಬ ಗೇಮ್ ಶೋ ಹೋಸ್ಟ್ ಮಾಡಿದ್ದು, ಅದು ಎಮಿರೇಟ್ಸ್ ಡ್ರಾದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರ ಪ್ರಸಾರವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com