'ಕೊರಗಜ್ಜ' ನನಗೆ ಹೊಸ ಪ್ರಕಾರವನ್ನು ಆವಿಷ್ಕರಿಸಲು ಅವಕಾಶ ಮಾಡಿಕೊಟ್ಟಿತು: ಗೋಪಿ ಸುಂದರ್

ಗೋಪಿಯವರು ಸಂಯೋಜಿಸಿರುವ ಸಂಗೀತವನ್ನು ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಸುನಿಧಿ ಚೌಹಾಣ್ ಸೇರಿದಂತೆ ಪ್ರಸಿದ್ಧ ಗಾಯಕರು ಕೊಂಡಾಡಿದ್ದಾರೆ.
Sudhir Attavar and Gopi Sundar
ಚಿತ್ರದ ಸ್ಟಿಲ್ ಮತ್ತು ಎಡ ಚಿತ್ರದಲ್ಲಿ ಗೋಪಿ ಸುಂದರ್-ಸುಧೀರ್ ಅತ್ತಾವರ್
Updated on

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸುಧೀರ್ ಅತ್ತಾವರ್ ನಿರ್ದೇಶಿಸಿರುವ 'ಕೊರಗಜ್ಜ' ಸಿನಿಮಾ ಕರ್ನಾಟಕದ ಕರಾವಳಿ ತುಳುನಾಡು ಪ್ರದೇಶದಲ್ಲಿ ಪೂಜಿಸಲ್ಪಡುವ ಪ್ರಮುಖ ದೈವ ಕೊರಗಜ್ಜನ ಕಥೆಯನ್ನು ಸಾರುತ್ತದೆ, 800 ವರ್ಷಗಳ ಹಿಂದೆ ಸ್ಥಳೀಯ ಯುವಕನೊಬ್ಬ ಕೊರಗಜ್ಜನ ದೈವಿಕ ವ್ಯಕ್ತಿಯಾಗಿ ರೂಪಾಂತರಗೊಂಡದ್ದನ್ನು ಕಥೆ ಕೇಂದ್ರೀಕರಿಸುತ್ತದೆ. ಸುಧೀರ್ ಅತ್ತಾವರ್ ಅವರೊಂದಿಗೆ ಸಂಗೀತ ಸಂಯೋಜಕ ಗೋಪಿ ಸುಂದರ್ ಸಾಥ್ ನೀಡಿದ್ದು ಇದನ್ನು ವಿಶಿಷ್ಟ ಸಂಗೀತ ಅನುಭವ ಎಂದು ಕರೆಯುತ್ತಾರೆ.

ಸಂಗೀತವು ಸಾಂಪ್ರದಾಯಿಕ ಸಂಯೋಜನೆಗಳನ್ನು ಮೀರಿ ಹೇಗೆ ಹೋಗುತ್ತದೆ ಎಂಬುದನ್ನು ಅವರು ವಿವರಿಸುತ್ತಾರೆ, ಈ ಚಿತ್ರಕ್ಕೆ ಸಂಗೀತ ಸಂಯೋಜಿಸಲು ಹೆಚ್ಚಿನ ಸಮಯ ಬೇಕಾಯಿತು. ನಾನು ರಚಿಸಿದ ರಾಗಗಳು ದೈವ, ಕೊರಗಜ್ಜನ ಆರಾಧನೆ ಪದ್ಧತಿಗಳನ್ನು ಅರ್ಥಮಾಡಿಕೊಂಡ ನಂತರ ಹುಟ್ಟಿಕೊಂಡವು ನಿರ್ದೇಶಕರು ನನ್ನ ಕೆಲಸವನ್ನು ಇಷ್ಟಪಟ್ಟಿದ್ದಕ್ಕೆ ನನಗೆ ಸಂತೋಷವಿದೆ ಎಂದರು.

ಚಿತ್ರಕ್ಕಾಗಿ ಸಾಕಷ್ಟು ಅಧ್ಯಯನ ಮಾಡಿರುವ ಸುಧೀರ್ ಅತ್ತಾವರ್, ಕಥೆಯ ವಿಶಿಷ್ಟ ಸ್ವರೂಪವನ್ನು ಎತ್ತಿ ತೋರಿಸುತ್ತಾರೆ, ಇದು ಕೇವಲ ತಂದೆ-ಮಗಳ ಕಥೆಗಿಂತ ಹೆಚ್ಚು ಎಂದರು. ಗೋಪಿಯವರು ಸಂಯೋಜಿಸಿರುವ ಸಂಗೀತವನ್ನು ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಸುನಿಧಿ ಚೌಹಾಣ್ ಸೇರಿದಂತೆ ಪ್ರಸಿದ್ಧ ಗಾಯಕರು ಕೊಂಡಾಡಿದ್ದಾರೆ. ಶಿವ ತಾಂಡವದ ಪದ್ಯಗಳನ್ನು ಒಳಗೊಂಡ ಶಂಕರ್ ಮಹಾದೇವನ್ ಅವರ ಹಾಡುಗಳು ಸಾಂಪ್ರದಾಯಿಕ ಅಂಶಗಳೊಂದಿಗೆ ಮಿಳಿತಗೊಂಡಿದೆ.

Sudhir Attavar and Gopi Sundar
ಕರಾವಳಿಯ ಆರಾಧ್ಯ ದೈವದ ಕಥೆಯುಳ್ಳ 'ಕೊರಗಜ್ಜ' ಚಿತ್ರ ಬಿಡುಗಡೆಗೆ ಸಿದ್ಧ; ಸುಧೀರ್ ಅತ್ತಾವರ ಆ್ಯಕ್ಷನ್ ಕಟ್!

ಕೊರಗಜ್ಜನ ವಿಷಯವು ಹೊಸ ಪ್ರಕಾರವನ್ನು ಆವಿಷ್ಕರಿಸಲು ನನಗೆ ಅವಕಾಶ ಮಾಡಿಕೊಟ್ಟಿತು, ಹೊಸ ಸಂಗೀತ ವ್ಯಾಪ್ತಿಯನ್ನು ಅನ್ವೇಷಿಸುತ್ತದೆ. ಚಿತ್ರದ ಸೂಕ್ಷ್ಮ ಪದರಗಳು ಸಾಮಾನ್ಯ ಚಲನಚಿತ್ರ ಸ್ವರೂಪಗಳನ್ನು ಮೀರಿವೆ. ಇದಕ್ಕೆ ಸಂಗೀತ ಸಂಯೋಜನೆ ಮಾಡುವುದು ಸವಾಲಿನ ಮತ್ತು ಖುಷಿಯ ಕೆಲಸವಾಗಿತ್ತು ಎಂದು ಗೋಪಿ ಸುಂದರ್ ಹೇಳುತ್ತಾರೆ.

ಚಿತ್ರವು ಆರು ಹಾಡುಗಳನ್ನು ಒಳಗೊಂಡಿದೆ, ಇವುಗಳನ್ನು ವಿಭಿನ್ನ ಶೈಲಿಗಳು ಮತ್ತು ಭಾಷೆಗಳಲ್ಲಿ ಸಂಯೋಜಿಸಲಾಗಿದೆ, ಸಾಹಿತ್ಯವನ್ನು ಸುಧೀರ್ ಅತ್ತಾವರ್ ಸ್ವತಃ ಬರೆದಿದ್ದಾರೆ.

ಇದರ ಆಡಿಯೋ ಹಕ್ಕುಗಳಿಗೆ ಪೈಪೋಟಿ ಏರ್ಪಟ್ಟಿದೆ. ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನ ಉನ್ನತ ಆಡಿಯೋ ಕಂಪನಿಗಳು ನಿರೀಕ್ಷೆಗಳನ್ನು ಮೀರಿದ ಕೊಡುಗೆಗಳನ್ನು ನೀಡುತ್ತಿವೆ ಎಂದು ನಿರ್ಮಾಪಕ ತ್ರಿವಿಕ್ರಮ್ ಸಪಲ್ಯ ಹೇಳುತ್ತಾರೆ.

ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಕೊರಗಜ್ಜ ಚಿತ್ರದಲ್ಲಿ ಕಬೀರ್ ಬೇಡಿ, ಭವ್ಯ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ಶ್ರುತಿ ಮತ್ತು ನವೀನ್ ಡಿ ಪಡೀಲ್ ಕೂಡ ನಟಿಸಿದ್ದಾರೆ, ಮನೋಜ್ ಪಿಳ್ಳೈ ಅವರ ಛಾಯಾಗ್ರಹಣ ಮತ್ತು ಜಿತ್ ಜೋಶಿ ಮತ್ತು ವಿದ್ಯಾಧರ್ ಶೆಟ್ಟಿ ಅವರ ಸಂಕಲನವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com